HEALTH TIPS

ಹಾರ್ಮುಝ್ ಜಲಸಂಧಿ ನೀವೇ ವಶಪಡಿಸಿಕೊಳ್ಳಿ: ಬ್ರಿಟನ್, ಫ್ರಾನ್ಸ್ ಗೆ ಟ್ರಂಪ್ ತಾಕೀತು

ವಾಷಿಂಗ್ಟನ್: ಇರಾನ್ ಮೇಲಿನ ಇಸ್ರೇಲ್-ಅಮೆರಿಕ ದಾಳಿಗೆ ಸಹಕಾರ ನೀಡದ ದೇಶಗಳು ಅಮೆರಿಕದ ತೈಲವನ್ನು ಖರೀದಿಸಬೇಕು ಅಥವಾ ಹಾರ್ಮುಝ್ ಜಲಸಂಧಿಯನ್ನು ತಮ್ಮ ವಶಕ್ಕೆ ಪಡೆಯಬೇಕು ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಂಗಳವಾರ ತಾಕೀತು ಮಾಡಿದರು.

ಒಂದು ತಿಂಗಳಿಂದ ನಡೆಯುತ್ತಿರುವ ಯುದ್ಧದಲ್ಲಿ ನೆರವು ನೀಡದ ಬ್ರಿಟನ್ ಹಾಗೂ ಫ್ರಾನ್ಸ್ ದೇಶಗಳನ್ನು ಅವರು ತಮ್ಮ 'ಟ್ರುತ್' ಸಾಮಾಜಿಕ ಜಾಲತಾಣದಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಿ ಈ ಹೇಳಿಕೆ ನೀಡಿದ್ದಾರೆ.

ಯುದ್ಧದ ಪರಿಣಾಮ ಜಾಗತಿಕ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿ, ಇಂಧನದ ಬೆಲೆಗಳು ಗಗನಕ್ಕೇರಿರುವ ಸಂದರ್ಭದಲ್ಲಿ ಈ ಹೇಳಿಕೆ ಬಂದಿದೆ.

ಈ ನಡುವೆ ಹಾರ್ಮುಝ್ ಜಲಸಂಧಿ ಮೂಲಕ ಸಾಗುವ ತೈಲ ಟ್ಯಾಂಕರ್ ಗಳ ಸಂಚಾರವನ್ನು ಇರಾನ್ ಪರಿಣಾಮಕಾರಿಯಾಗಿ ತಡೆಹಿಡಿದಿದೆ. ಇದರಿಂದ ಜಾಗತಿಕ ಇಂಧನ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ.

"ಇರಾನ್ ಆಡಳಿತ ಬದಲಾವಣೆಯಲ್ಲಿ ಭಾಗವಹಿಸಲು ನಿರಾಕರಿಸಿದ ಬ್ರಿಟನ್ ನಂತಹ ದೇಶಗಳಿಗೆ ಹಾರ್ಮುಝ್ ಜಲಸಂಧಿಯ ಪರಿಣಾಮವಾಗಿ ಯುದ್ಧ ವಿಮಾನಗಳಿಗೆ ಇಂಧನ ಕೊರತೆ ಎದುರಾಗಿದೆ. ಅಂತಹ ದೇಶಗಳು ಅಮೆರಿಕದಿಂದ ಇಂಧನ ಖರೀದಿಸಬೇಕು ಅಥವಾ ಧೈರ್ಯ ತೋರಿಸಿ ಹಾರ್ಮುಝ್ ಜಲಸಂಧಿಯನ್ನು ವಶಪಡಿಸಿಕೊಳ್ಳಬೇಕು," ಎಂದು ಟ್ರಂಪ್ ವ್ಯಂಗ್ಯವಾಡಿದರು.

"ನೀವು ನಿಮ್ಮನ್ನು ನೀವು ರಕ್ಷಿಸಿಕೊಳ್ಳುವುದನ್ನು ಕಲಿಯಬೇಕು. ಇನ್ನು ಮುಂದೆ ನಿಮ್ಮ ನೆರವಿಗೆ ಅಮೆರಿಕ ಇರುವುದಿಲ್ಲ. ನೀವು ಹೇಗೆ ನಮ್ಮೊಂದಿಗೆ ನಿಂತಿರಲಿಲ್ಲವೋ, ಹಾಗೆಯೇ ನಾವು ಕೂಡ," ಎಂದು ಅವರು ಕಟುವಾಗಿ ಹೇಳಿದರು.

ಫ್ರಾನ್ಸ್ ತನ್ನ ಪ್ರಾಂತ್ಯದ ಮೇಲೆ ಸೇನಾ ಪೂರೈಕೆ ಸಾಗಿಸುವ ವಿಮಾನಗಳಿಗೆ ಹಾರಾಟಕ್ಕೆ ಅವಕಾಶ ನೀಡದಿರುವುದನ್ನೂ ಅವರು ಟೀಕಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries