HEALTH TIPS

ನಮ್ಮ ಬಂದರುಗಳ ಸುದ್ದಿಗೆ ಬಂದರೆ ಗಲ್ಫ್‌ನಲ್ಲಿರುವ ಯಾವುದೇ ಬಂದರು ಸುರಕ್ಷಿತವಲ್ಲ: ಅಮೆರಿಕಾಗೆ ಇರಾನ್ ಎಚ್ಚರಿಕೆ

ಟೆಹರಾನ್: ಇರಾನ್‌ನ ಬಂದರುಗಳಿಗೆ ಯಾವುದೇ ರೀತಿಯ ಬೆದರಿಕೆ ಉಂಟಾದರೆ, ಪರ್ಷಿಯನ್ ಕೊಲ್ಲಿ ಹಾಗೂ ಒಮಾನ್ ಸಮುದ್ರದಲ್ಲಿನ ಯಾವುದೇ ಬಂದರು ಕೂಡ ಸುರಕ್ಷಿತವಾಗಿರುವುದಿಲ್ಲ ಎಂದು ಇರಾನ್ ಎಚ್ಚರಿಕೆ ನೀಡಿದೆ. ಸೋಮವಾರದಿಂದ ಅಮೆರಿಕ ಇರಾನಿನ ಬಂದರುಗಳು ಮತ್ತು ಕರಾವಳಿ ಪ್ರದೇಶಗಳ ಮೇಲೆ ದಿಗ್ಬಂಧನ ಹೇರಲು ಸಿದ್ಧವಾಗಿರುವ ಹಿನ್ನೆಲೆಯಲ್ಲಿ ಇರಾನ್ ಈ ಹೇಳಿಕೆ ನೀಡಿದೆ ಎಂದು ವರದಿಯಾಗಿದೆ.

ಕದನ ವಿರಾಮ ಮಾತುಕತೆ ವಿಫಲವಾದ ನಂತರ, ಟೆಹ್ರಾನ್ ಮೇಲೆ ಒತ್ತಡ ಹೆಚ್ಚಿಸಲು ಅಮೆರಿಕ ಮುಂದಾಗಿದೆ. ಯುಎಸ್ ಮಿಲಿಟರಿ ಇರಾನಿನ ಬಂದರುಗಳಿಗೆ ಹೋಗುವ ಅಥವಾ ಅಲ್ಲಿಂದ ಹೊರಡುವ ಹಡಗುಗಳನ್ನು ನಿರ್ಬಂಧಿಸುವುದಾಗಿ ಘೋಷಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಇರಾನ್‌ ನ ಮಿಲಿಟರಿ ಮತ್ತು ಇಸ್ಲಾಮಿಕ್ ಕ್ರಾಂತಿಕಾರಿ ಗಾರ್ಡ್(IRGC) ಪಡೆಗಳು, 'ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಸಮುದ್ರದಲ್ಲಿನ ಭದ್ರತೆ ಎಲ್ಲರಿಗೂ ಸೇರಿದ್ದು. ಅದು ಒಂದೇ ದೇಶಕ್ಕೆ ಮಾತ್ರವಲ್ಲ. ಇರಾನಿನ ಬಂದರುಗಳಿಗೆ ಬೆದರಿಕೆಯುಂಟಾದರೆ ಈ ಪ್ರದೇಶದಲ್ಲಿ ಯಾವುದೇ ಬಂದರು ಸುರಕ್ಷಿತವಾಗಿರುವುದಿಲ್ಲ' ಎಂದು ಹೇಳಿವೆ.

ಅಮೆರಿಕದ ಸೆಂಟ್ರಲ್ ಕಮಾಂಡ್ ಪ್ರಕಾರ, ದಿಗ್ಬಂಧನವನ್ನು ಬೆಳಿಗ್ಗೆ 10 EDT (ಇರಾನ್‌ನಲ್ಲಿ ಸಂಜೆ 5:30) ರಿಂದ ಜಾರಿಗೊಳಿಸಲಾಗುತ್ತದೆ. ಪರ್ಷಿಯನ್ ಕೊಲ್ಲಿ ಮತ್ತು ಒಮಾನ್ ಕೊಲ್ಲಿಯಾದ್ಯಂತ ಇರಾನಿನ ಬಂದರುಗಳಿಗೆ ಪ್ರವೇಶಿಸುವ ಅಥವಾ ಹೊರಡುವ ಎಲ್ಲಾ ದೇಶಗಳ ಹಡಗುಗಳಿಗೆ ಇದು ಅನ್ವಯವಾಗಲಿದೆ. ಆದರೆ, ಇರಾನಿನಲ್ಲದ ಬಂದರುಗಳ ನಡುವೆ ಸಂಚರಿಸುವ ಹಡಗುಗಳಿಗೆ ಹಾರ್ಮುಝ್ ಜಲಸಂಧಿಯನ್ನು ದಾಟಲು ಅವಕಾಶ ಇರುತ್ತದೆ.

ಈ ಬೆಳವಣಿಗೆಯ ಪರಿಣಾಮವಾಗಿ ಸಮುದ್ರ ಸಾರಿಗೆ ಈಗಾಗಲೇ ನಿಧಾನವಾಗಿದೆ. ಕದನ ವಿರಾಮದ ನಂತರ ಭಾಗಶಃ ಪುನರಾರಂಭಗೊಂಡಿದ್ದ ಹಾರ್ಮುಝ್ ಜಲಸಂಧಿಯಲ್ಲಿ, ಹಿಂದೆ ದಿನಕ್ಕೆ 100-135 ಹಡಗುಗಳು ಸಂಚರಿಸುತ್ತಿದ್ದರೆ, ಈಗ ಕೇವಲ 40ಕ್ಕೂ ಹೆಚ್ಚು ವಾಣಿಜ್ಯ ಹಡಗುಗಳು ಮಾತ್ರ ಸಂಚರಿಸುತ್ತಿವೆ.

ಇನ್ನೊಂದೆಡೆ, ಶ್ವೇತಭವನವು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಹೇಳಿಕೆಯನ್ನು ಪ್ರಕಟಿಸಿದೆ. 'ಎ. 13ರಂದು ಬೆಳಿಗ್ಗೆ 10 ಗಂಟೆಗೆ (ಭಾರತೀಯ ಸಮಯ ರಾತ್ರಿ 7:30) ಇರಾನಿನ ಬಂದರುಗಳಿಗೆ ಪ್ರವೇಶಿಸುವ ಅಥವಾ ಹೊರಡುವ ಹಡಗುಗಳನ್ನು ಅಮೆರಿಕ ನಿರ್ಬಂಧಿಸಲಿದೆ' ಎಂದು ಅವರು ತಿಳಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries