HEALTH TIPS

ಭಾರತ ನರಕ ಕೂಪವಲ್ಲ, ಪರಿಪೂರ್ಣ ದೇಶ; ಐಎಸಿಸಿ ಮಾಜಿ ಅಧ್ಯಕ್ಷ

ಜೈಪುರ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಂಚಿಕೊಂಡ ಭಾರತದ ಬಗೆಗಿನ ಅವಹೇಳನಕಾರಿ ಹೇಳಿಕೆ ಇದ್ದ ಸಾಮಾಜಿಕ ಮಾಧ್ಯಮ ಪೋಸ್ಟ್‌ಗೆ ಪ್ರತಿಕ್ರಿಯಿಸಿದ ಇಂಡೊ-ಅಮೆರಿಕನ್ ಚೇಂಬರ್ ಆಫ್ ಕಾಮರ್ಸ್‌ನ(ಐಎಸಿಸಿ) ಮಾಜಿ ರಾಷ್ಟ್ರೀಯ ಅಧ್ಯಕ್ಷೆ ಲಲಿತ್ ಭಾಸಿನ್, ಭಾರತ ಒಂದು ಕೂಪವಲ್ಲ, ಕಾನೂನಿನ ನಿಯಮವನ್ನು ಎತ್ತಿಹಿಡಿಯುವುದು ಮತ್ತು ಆರ್ಥಿಕ ಸಮೃದ್ಧಿಯತ್ತ ಸಾಗುವುದು ಸೇರಿದಂತೆ ಎಲ್ಲ ವಿಷಯಗಳಲ್ಲಿ ಒಂದು ಪರಿಪೂರ್ಣ ದೇಶ ಎಂದು ಹೇಳಿದ್ದಾರೆ.

'ಪ್ರಜಾಪ್ರಭುತ್ವ ತತ್ವಗಳಿಗೆ ಬದ್ಧರಾಗುವಲ್ಲಿ, ಕಾನೂನಿನ ನಿಯಮವನ್ನು ಎತ್ತಿಹಿಡಿಯುವಲ್ಲಿ ಮತ್ತು ಆರ್ಥಿಕ ಸಮೃದ್ಧಿಯತ್ತ ಸಾಗುವಲ್ಲಿ ನಾವು ಅತ್ಯುತ್ತಮರು. ನಮ್ಮ ದೇಶ ಕೂಪವಲ್ಲ, ಎಲ್ಲ ವಿಷಯಗಳಲ್ಲಿ ಪರಿರ್ಣ ದೇಶ' ಎಂದು ಹೇಳಿದ್ದಾರೆ.

ಹೆರಿಗೆ ಪ್ರವಾಸೋದ್ಯಮ ಹೆಸರಲ್ಲಿ ಅಮೆರಿಕಕ್ಕೆ ಬಂದು ಇಲ್ಲಿ ಮಕ್ಕಳನ್ನು ಹೆರುವ ಮೂಲಕ ಜನ್ಮಸಿದ್ಧ ಪೌರತ್ವ ಪಡೆಯುತ್ತಿದ್ದಾರೆ ಎಂದು ಭಾರತ, ಚೀನಿಯರನ್ನು ಟೀಕಿಸಿದ್ದ ಟ್ರಂಪ್, ನರಕ ಕೂಪಗಳು ಎಂದು ನಿಂದಿಸಿದ್ದ ಪೋಸ್ಟ್ ಅನ್ನು ಹಂಚಿಕೊಂಡಿದ್ದರು. ಭಾರತ ಸರ್ಕಾರವು ಇದನ್ನು ಅನುಚಿತ ಮತ್ತು ಮಾಹಿತಿ ಕೊರತೆಯ ಪೋಸ್ಟ್ ಎಂದು ಕರೆದಿತ್ತು.

ಪೋಸ್ಟ್ ಮಾಡಿದ ಗಂಟೆಗಳ ನಂತರ, ನವದೆಹಲಿಯಲ್ಲಿರುವ ಅಮೆರಿಕ ರಾಯಭಾರ ಕಚೇರಿಯ ವಕ್ತಾರರು, ಭಾರತವು ನನ್ನ ಉತ್ತಮ ಸ್ನೇಹಿತರ ಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಉತ್ತಮ ದೇಶ ಎಂಬ ಸಂದೇಶವನ್ನು ಪೋಸ್ಟ್ ಮಾಡುವ ಮೂಲಕ ಹಾನಿಯನ್ನು ನಿಯಂತ್ರಿಸಲು ಪ್ರಯತ್ನಿಸಿದ್ದರು.

ಈ ಬಗ್ಗೆ ಅಮೆರಿಕ ರಾಯಭಾರ ಕಚೇರಿಯಲ್ಲಿ ವಾಣಿಜ್ಯ ವ್ಯವಹಾರಗಳ ಕೌನ್ಸೆಲರ್ ಆಗಿರುವ ಜೋನಾಥನ್ ಹೈಮರ್ ಅವರ ಸಮ್ಮುಖದಲ್ಲಿ ನಡೆದ ಐಎಸಿಸಿಯ ರಾಜಸ್ಥಾನದ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಭಾಸಿನ್, ಭಾರತವನ್ನು ಚೀನಾದೊಂದಿಗೆ ಹೋಲಿಸಬಾರದು ಎಂಬ ಸಂದೇಶವನ್ನು ಅಮೆರಿಕ ಸರ್ಕಾರವು ಹೈಮರ್ ಮೂಲಕ ಪಡೆಯಬೇಕು ಎಂದು ಹೇಳಿದರು.

ನನ್ನ ವಿನಂತಿಯನ್ನು ಅಮೆರಿಕ ಸರ್ಕಾರಕ್ಕೆ ತಿಳಿಸಬೇಕು ಎಂಬುದು ಜೋನಾಥನ್ ಹೈಮರ್ ಅವರಿಗೆ ನನ್ನ ಮನವಿ. ಭಾರತವು ನರಕದ ಕೂಪ ಅಲ್ಲ. ದಯವಿಟ್ಟು ಅದನ್ನು ಚೀನಾದೊಂದಿಗೆ ಹೋಲಿಸಬೇಡಿ ಎಂದು ಭಾಸಿನ್ ಹೇಳಿದರು.

ಭಾರತ ಮತ್ತು ಅಮೆರಿಕ ನಡುವಿನ ಪಾಲುದಾರಿಕೆಯ ಕುರಿತು ಮಾತನಾಡಿದ ಹೈಮರ್, ಇದು ಭವಿಷ್ಯವನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries