HEALTH TIPS

ಇರಾನ್ ಯುದ್ಧ: ಅಮೆರಿಕದ ಅತ್ಯಾಧುನಿಕ ಡ್ರೋನ್ ಸೇರಿ 42 ಯುದ್ಧ ವಿಮಾನಗಳು ಧ್ವಂಸ

 ವಾಷಿಂಗ್ಟನ್: ಇರಾನ್ ವಿರುದ್ಧ ಅಮೆರಿಕ ಫೆಬ್ರುವರಿ 28ರಂದು ಆರಂಭಿಸಿದ್ದ 'ಆಪರೇಷನ್ ಎಪಿಕ್ ಫ್ಯೂರಿ' ಕಾರ್ಯಾಚರಣೆಯಲ್ಲಿ ಅಮೆರಿಕ ಸಾಕಷ್ಟು ನಷ್ಟ ಅನುಭವಿಸಿದೆ ಎಂದು ಸಿಆರ್‌ಎಸ್‌ ಸಂಸ್ಥೆ ವರದಿ ಮಾಡಿವೆ.


'ಆಪರೇಷನ್ ಎಪಿಕ್ ಫ್ಯೂರಿ' ಕಾರ್ಯಾಚರಣೆಯಲ್ಲಿ ಫೈಟರ್ ಜೆಟ್‌ಗಳು, ಅತ್ಯಾಧುನಿಕ ಡ್ರೋನ್‌ಗಳು ಸೇರಿದಂತೆ ಕನಿಷ್ಠ 42 ಯುದ್ಧ ವಿಮಾನಗಳು ಧ್ವಂಸಗೊಂಡಿವೆ ಅಥವಾ ತೀವ್ರ ಹಾನಿಗೊಳಗಾಗಿವೆ ಎಂದು ಸಿಆರ್‌ಎಸ್‌ ವರದಿ ಬಹಿರಂಗಪಡಿಸಿದೆ.

ರಕ್ಷಣಾ ಇಲಾಖೆ ಹಾಗೂ ಯುಎಸ್ ಸೆಂಟ್ರಲ್ ಕಮಾಂಡ್ ಬಿಡುಗಡೆ ಮಾಡಿದ ಹೇಳಿಕೆಗಳು ಮತ್ತು ಮಾಧ್ಯಮ ವರದಿಗಳನ್ನು ಆಧರಿಸಿ ಈ ನಷ್ಟದ ಪಟ್ಟಿಯನ್ನು ಸಿದ್ಧಪಡಿಸಲಾಗಿದೆ ಎಂದು ಅಮೆರಿಕದ ಕಾಂಗ್ರೆಸ್‌ ರಿಸರ್ಚ್ ಸರ್ವಿಸ್ (ಸಿಆರ್‌ಎಸ್‌) ಸಂಸ್ಥೆ ತಿಳಿಸಿದೆ.

ಹಾನಿಗೊಳಗಾದ ಅಥವಾ ನಾಶವಾದ ವಿಮಾನಗಳ ಸಂಖ್ಯೆ ಇನ್ನು ನಿಖರವಾಗಿ ತಿಳಿದು ಬಂದಿಲ್ಲ, ಈ ಸಂಖ್ಯೆ ಇನ್ನು ಬದಲಾಗುವ ಸಾಧ್ಯತೆಯಿದೆ ಎಂದು ಅದು ಹೇಳಿದೆ.

ಸ್ಟ್ರೈಕ್ ಈಗಲ್, ಥಂಡರ್‌ಬೋಲ್ಟ್, ಜಾಲಿ ಗ್ರೀನ್, ಟ್ರೈಟಾನ್ ಮತ್ತು ಎಂಕ್ಯೂ-9 ರೀಪರ್, ಎಂಕ್ಯೂ-4ಸಿ ಎಂಬ ಶಕ್ತಿಶಾಲಿ ಮತ್ತು ದುಬಾರಿ ಡ್ರೋನ್‌ಗಳು ನಾಶವಾಗಿವೆ ಎಂದು ವರದಿಯಲ್ಲಿ ತಿಳಿಸಿದೆ.

₹2.4 ಲಕ್ಷ ಕೋಟಿಗೆ ಏರಿದ ಯುದ್ಧದ ವೆಚ್ಚ!

ಇರಾನ್‌ನಲ್ಲಿನ ಮಿಲಿಟರಿ ಕಾರ್ಯಾಚರಣೆಗಾಗಿ ಅಮೆರಿಕ ಸುಮಾರು ₹2.4 ಲಕ್ಷ ಕೋಟಿ ವೆಚ್ಚ ಮಾಡಿದೆ ಎಂದು ಯುಎಸ್ ಸೆಂಟ್ರಲ್ ಕಮಾಂಡ್ ಬಿಡುಗಡೆ ಮಾಡಿದ ವರದಿಗಳನ್ನು ಉಲ್ಲೇಖಿಸಿ ಸಿಆರ್‌ಎಸ್‌ ತಿಳಿಸಿದೆ.

ಯುದ್ಧದಲ್ಲಿ ಹಾನಿಗೊಳಗಾದ ಮಿಲಿಟರಿ ಉಪಕರಣಗಳ ದುರಸ್ತಿ ಅಥವಾ ಹೊಸ ಉಪಕರಣಗಳನ್ನು ಖರೀದಿಸುವ ವೆಚ್ಚ ಹೆಚ್ಚಾಗಿರುವುದರಿಂದ ಒಟ್ಟಾರೆ ಯುದ್ಧದ ಬಜೆಟ್ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಸಿಆರ್‌ಎಸ್‌ ಹೇಳಿದೆ.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries