HEALTH TIPS

76 ವರ್ಷಗಳ ನಂತರ ಶಾಲಾ ಪ್ರಮಾಣಪತ್ರ ಪಡೆದುಕೊಂಡ ಮಾಜಿ ಶಾಸಕ

ಲಖನೌ: 'ಶಾಲಾ ದಿನಗಳು ಮುಗಿಯಬಹುದು, ಆದರೆ ನೆನಪುಗಳು ಅಮರ' ಎಂಬ ಮಾತಿಗೆ ಉತ್ತರ ಪ್ರದೇಶದ 92 ವರ್ಷದ ಮಾಜಿ ಶಾಸಕ ಆಲಂ ಬದಿ ಅಜ್ಮಿ ಸಾಕ್ಷಿಯಾಗಿದ್ದಾರೆ. ಸರಿಸುಮಾರು 76 ವರ್ಷಗಳ ನಂತರ ತಮ್ಮ ಪ್ರೌಢಶಾಲಾ ಪ್ರಮಾಣಪತ್ರ ಪಡೆಯಲು ಶಾಲೆಗೆ ಭೇಟಿ ನೀಡುವ ಮೂಲಕ 'ಜ್ಞಾನಾರ್ಜನೆಗೆ ವಯಸ್ಸಿನ ಮಿತಿ ಇಲ್ಲ' ಎಂಬುವುದನ್ನು ಸಾರೀ ಹೇಳಿದ್ದಾರೆ.

ಅಜಂಗಢ ಜಿಲ್ಲೆಯ ನಿಜಾಮಾಬಾದ್ ವಿಧಾನಸಭಾ ಕ್ಷೇತ್ರದ ಸಮಾಜವಾದಿ ಪಕ್ಷದ (ಎಸ್‌ಪಿ) ಮಾಜಿ ಶಾಸಕ ಆಲಂ ಬದಿ ಅಜ್ಮಿ ಅವರು ಮಂಗಳವಾರ (ಏ.28) ಗೋರಖ್‌ಪುರದ ಬಕ್ಸಿಪುರದಲ್ಲಿರುವ ಇಸ್ಲಾಮಿಯಾ ಇಂಟರ್ ಕಾಲೇಜಿಗೆ ಭೇಟಿ ನೀಡಿದ್ದರು. ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಆಲಂ ಬದಿ, ಇದೇ ಶಾಲೆಯಲ್ಲಿ 1950ರಲ್ಲಿ ಹತ್ತನೇ ತರಗತಿ ಪಾಸಾಗಿದ್ದರು.

ಶಾಲೆಯ ಕಟ್ಟಡ, ಹಳೆಯ ತರಗತಿ ಕೊಠಡಿಗಳು ಮತ್ತು ಗ್ರಂಥಾಲಯವನ್ನು ಕಂಡ ಆಲಂ ಬದಿ ಭಾವುಕರಾದರು. ತಮ್ಮ ಶಾಲಾ ದಿನಗಳ ಕಟ್ಟುನಿಟ್ಟಿನ ಶಿಸ್ತು ಮತ್ತು ಶಿಕ್ಷಕರ ಸಹಕಾರದ ಗುಣಗಳನ್ನು ಅವರು ಈ ವೇಳೆ ನೆನಪಿಸಿಕೊಂಡರು. ಮಾಜಿ ಶಾಸಕರ ಆಗಮನದ ಹಿನ್ನೆಲೆಯಲ್ಲಿ ಶಾಲಾ ಆಡಳಿತ ಮಂಡಳಿಯು ವಿಶೇಷ ಕಾರ್ಯಕ್ರಮ ಹಮ್ಮಿಕೊಂಡು, ಅವರಿಗೆ ಹತ್ತನೇ ತರಗತಿಯ ಪ್ರಮಾಣಪತ್ರ ಹಸ್ತಾಂತರಿಸಿತು.

'ತಮ್ಮ ಹಳೆಯ ಪ್ರಮಾಣಪತ್ರವನ್ನು ಪಡೆಯಲು ಶಾಲೆಗೆ ಭೇಟಿ ನೀಡುವ ಇಚ್ಛೆಯನ್ನು ಆಲಂ ಬದಿ ಅವರು ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಅವರಿಗೆ ಗೌರವ ಸಲ್ಲಿಸಿ, ಸನ್ಮಾನಿಸಲಾಯಿತು' ಎಂದು ಶಾಲಾ ಪದಾಧಿಕಾರಿಗಳು ತಿಳಿಸಿದ್ದಾರೆ.

ಸರಳ ವ್ಯಕ್ತಿತ್ವಕ್ಕೆ ಹೆಸರಾದ ಆಲಂ ಬದಿ ಅಜ್ಮಿ ಅವರು ವಿಧಾನಸಭೆಗೆ ಸೈಕಲ್ ಅಥವಾ ಸ್ಕೂಟರ್‌ನಲ್ಲಿ ಬರುತ್ತಿದ್ದದ್ದು ಹಲವು ಬಾರಿ ಸುದ್ದಿಯಾಗಿತ್ತು. ಸರ್ಕಾರಿ ಸೇವೆಯಿಂದ ನಿವೃತ್ತರಾದ ಬಳಿಕ ರಾಜಕೀಯ ಪ್ರವೇಶಿಸಿದ್ದ ಅವರು, 1993 ರಿಂದ 2022ರ ನಡುವೆ ಐದು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries