HEALTH TIPS

ಉದ್ಯೋಗ, ಕಾರ್ಮಿಕ ಕಲ್ಯಾಣ, ಕೌಶಲ್ಯಾಭಿವೃದ್ಧಿ ಯೋಜನೆ ಘೋಷಿಸಿದ ಅದಾನಿ

ಮುಂಬ್ಯೆ: ಅಂತಾರಾಷ್ಟ್ರೀಯ ಕಾರ್ಮಿಕ ದಿನಾಚರಣೆ (ಮೇ 1) ಪ್ರಯುಕ್ತ ಅದಾನಿ ಗ್ರೂಪ್‌ನ ಅಧ್ಯಕ್ಷ ಗೌತಮ್ ಅದಾನಿ ಅವರು ಕಾರ್ಮಿಕ ಕಲ್ಯಾಣ, ಸ್ಥಳೀಯ ಉದ್ಯೋಗ, ಉದ್ಯಮಶೀಲತೆ ಉತ್ತೇಜನ ಹಾಗೂ ಯೋಜನಾ ಅನುಷ್ಠಾನಕ್ಕೆ ವೇಗ ನೀಡುವ ಗುರಿಯೊಂದಿಗೆ ಹೊಸ ಬೆಳವಣಿಗೆಯ ನೀಲನಕ್ಷೆ ಅನಾವರಣಗೊಳಿಸಿದರು.

ಇದು ಸಂಸ್ಥೆಯ ಉದ್ಯೋಗಿಗಳು ಮತ್ತು ಪಾಲುದಾರರನ್ನು ತನ್ನ ದೀರ್ಘಾವಧಿಯ ವಿಸ್ತರಣಾ ಯೋಜನೆಗಳ ಕೇಂದ್ರಬಿಂದುವಿನಲ್ಲಿ ಇರಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಸಂಸ್ಥೆಯು ಕೇವಲ ಆಸ್ತಿಗಳನ್ನು ಸೃಷ್ಟಿಸುವುದಲ್ಲದೆ, ಜೀವನೋಪಾಯವನ್ನು ಸೃಷ್ಟಿಸುವುದು ಮತ್ತು ಸಮುದಾಯಗಳನ್ನು ಬಲಪಡಿಸುವುದು ಆಗಿದೆ. ಇದರಿಂದ ಬೆಳವಣಿಗೆಯನ್ನು ಅಳೆಯಬೇಕೆಂದು ಗೌತಮ್ ಅದಾನಿ ಅವರು ನೌಕರರ ಸಮೂಹ ಉದ್ದೇಶಿಸಿ ಮಾತನಾಡಿದರು. ಕಾರ್ಮಿಕರು ರಾಷ್ಟ್ರ ನಿರ್ಮಾಣದ ಪ್ರಮುಖ ಕೊಡುಗೆದಾರರೆಂದು ಅವರು ಬಣ್ಣಿಸಿದರು. ಸಮೂಹವು ಕೈಗೊಳ್ಳುವ ಪ್ರತಿಯೊಂದು ಯೋಜನೆಯೂ ಭಾರತದ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತದೆ ಎಂದರು.

24 ರಾಜ್ಯಗಳಲ್ಲಿ 700ಕ್ಕೂ ಹೆಚ್ಚು ಅದಾನಿ ಯೋಜನೆ

ಅದಾನಿ ಗ್ರೂಪ್ ಪ್ರಸ್ತುತ 24 ರಾಜ್ಯಗಳಲ್ಲಿ 700ಕ್ಕೂ ಹೆಚ್ಚು ಯೋಜನೆಗಳಿಗೆ ಹೂಡಿಕೆ ಮಾಡಿದೆ. ಎಲ್ಲ ರಾಜ್ಯಗಳಲ್ಲಿ ಯೋಜನೆಗಳನ್ನು ನಿರ್ವಹಿಸುತ್ತಿದ್ದು, ಇಲ್ಲಿ ಸುಮಾರು ನಾಲ್ಕು ಲಕ್ಷ ಉದ್ಯೋಗಿಗಳು, ಪಾಲುದಾರರು ಮತ್ತು ಗುತ್ತಿಗೆದಾರರಿದ್ದಾರೆ. ಯೋಜನೆಗಳಿಂದ ನಗದು, ಬಂಡವಾಳ ಹರಿವು ಹೆಚ್ಚಿದ್ದು, ಜನ ಸಮೂಹವು ಹೊಸ ವಿಸ್ತರಣೆಗೆ ಕಾರಣವಾಗುತ್ತದೆ. ಬಂಡವಾಳ ವೆಚ್ಚವನ್ನು ವೇಗಗೊಳಿಸುವ ಜೊತೆಗೆ ಸಮುದಾಯದ ಏಳಿಗೆಗೂ ನೆರವಾಗಲಿದೆ ಎಂದು ಹೇಳಿದರು.

ಯೋಜನೆಗಳ ಭಾಗವಾಗಿ ಅದಾನಿ ಗ್ರೂಪ್ ಮೂರು-ಪದರದ ಸಾಂಸ್ಥಿಕ ಮಾದರಿಯನ್ನು ಜಾರಿಗೆ ತರಲಿದೆ. ಹೊಣೆಗಾರಿಕೆ ಸುಧಾರಿಸಿ ಯೋಜನಾ ಅನುಷ್ಠಾನದಲ್ಲಿನ ವಿಳಂಬ ಆಗುವುದನ್ನು ತಡೆಯಲಿದೆ . ಪ್ರಸ್ತುತ ದಿನಗಳಲ್ಲಿ ಯೋಜನೆಗಳ ಕುರಿತು ನಿರ್ಧಾರ ತೆಗೆದುಕೊಳ್ಳುವುದು ಗಂಟೆಗಳಲ್ಲಿ ಆಗಲಿದೆ ಎಂದು ಕೈಗಾರಿಕಾ ಸುಧಾರಣೆ ಕುರಿತು ಗೌತಮ್ ಅದಾನಿ ತಿಳಿಸಿದರು.

ಸುಸ್ಥಿರ ಬೆಳವಣಿಗೆ, ಪಾಲುದಾರರಿಗೆ ಬೆಂಬಲ

ಸಂಸ್ಥೆಯು ಕಡಿಮೆ ಸಂಖ್ಯೆಯಲ್ಲಿ ಸಮರ್ಥ ಗುತ್ತಿಗೆದಾರರನ್ನು ಆಯಾ ರಾಜ್ಯಗಳಲ್ಲಿ ಕೆಲಸ ನಿಯೋಜಿಸಿದೆ. ಇದು ಸಮನ್ವಯವನ್ನು ಸುಧಾರಿಸುತ್ತದೆ. ದೀರ್ಘಾವಧಿಯ ವ್ಯಾಪಾರ ಸಂಬಂಧಗಳನ್ನು ಬೆಳೆಸುತ್ತದೆ. ಜೊತೆಗೆ ಬಂಡವಾಳ ಲಭ್ಯತೆ ಹಾಗೂ ಸುಸ್ಥಿರ ಬೆಳವಣಿಗೆಯ ಅವಕಾಶಗಳೊಂದಿಗೆ ಪಾಲುದಾರರಿಗೆ ಬೆಂಬಲ ದೊರೆಯುತ್ತದೆ ಎದರು.

ಪಾಲುದಾರಿಕೆಯಿಂದ ಉದ್ಯೋಗ, ವ್ಯವಹಾರ ಸೃಷ್ಟಿ

ಸಣ್ಣ ಕೆಲಸಗಳಿಂದ ಆರಂಭಗೊಂಡು ಕಂಪನಿಯೊಂದಿಗೆ ನಿರಂತರ ಸಹಯೋಗದಲ್ಲಿ ದೊಡ್ಡ ಉದ್ಯಮಗಳಾಗಿ ಬೆಳೆದ ಸ್ಥಳೀಯ ಪಾಲುದಾರರ ಉದಾಹರಣೆಗಳನ್ನು ಅವರು ನೀಡಿದರು. ಇಂತಹ ಪಾಲುದಾರಿಕೆಗಳು ಕೇವಲ ಯೋಜನೆಗಳನ್ನು ಪೂರ್ಣಗೊಳಿಸುವುದಕ್ಕಾಗಿ ಮಾತ್ರಲ್ಲ. ಬದಲಾಗಿ ಸುತ್ತಮುತ್ತಲಿನ ಸಮುದಾಯಗಳಲ್ಲಿ ಹೊಸ ವ್ಯವಹಾರಗಳು ಹಾಗೂ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದಕ್ಕೂ ಸಹಕಾರಿಯಾಗುತ್ತವೆ ಎಂದರು.

ಕಾರ್ಮಿಕರಿಗೆ ವಸತಿ ಯೋಜನೆ ಘೋಷಣೆ

ಅದಾನಿ ತರಬೇತಿ ಅಕಾಡೆಮಿ ಮತ್ತು ಕೌಶಲ್ಯ ಕೇಂದ್ರಗಳು ಕಾರ್ಮಿಕರಿಗೆ ಸ್ಪಷ್ಟ ವೃತ್ತಿ ಮಾರ್ಗಗಳನ್ನು ಸೃಷ್ಟಿಸಲಿವೆ. ಇದು ಕೌಶಲ್ಯರಹಿತ ಪಾತ್ರಗಳಿಂದ ಅರೆ ಕೌಶಲ್ಯ, ಕೌಶಲ್ಯ, ಮೇಲ್ವಿಚಾರಣಾ ಮತ್ತು ನಾಯಕತ್ವದ ಸ್ಥಾನಗಳಿಗೆ ಏರಲು ಅವರಿಗೆ ಅವಕಾಶ ಕಲ್ಪಿಸುತ್ತದೆ. ಒಂದು ಪ್ರಮುಖ ಕಲ್ಯಾಣ ಉಪಕ್ರಮವಾಗಿ ಅದಾನಿ ಗ್ರೂಪ್ ಮುಂಡ್ರಾ ಮತ್ತು ಖಾವ್ದಾದಲ್ಲಿ 50,000 ಕಾರ್ಮಿಕರಿಗೆ ಹವಾನಿಯಂತ್ರಿತ ವಸತಿ ನಿರ್ಮಿಸುವ ಯೋಜನೆಗಳನ್ನು ಘೋಷಿಸಿದೆ. ಇದು ಮುಂಡ್ರಾದಲ್ಲಿ ಕೇಂದ್ರೀಕೃತ ಕ್ಲೌಡ್ ಕಿಚನ್ ಅನ್ನು ಸಹ ಅಭಿವೃದ್ಧಿಪಡಿಸುತ್ತಿದ್ದು, ಯೋಜನಾ ಸ್ಥಳಗಳಲ್ಲಿ ನಿಯೋಜಿಸಲಾದ ಕಾರ್ಮಿಕರಿಗೆ ಪ್ರತಿದಿನ ಒಂದು ಲಕ್ಷ ಪೌಷ್ಟಿಕ ಊಟವನ್ನು ಒದಗಿಸಲಿದೆ ಎಂದು ವಿವರಿಸಿದರು.

ಸ್ಥಳೀಯರಿಗೆ ಉದ್ಯೋಗ ಮೊದಲು ಸಿಗಬೇಕು

ಕಾರ್ಮಿಕ ಘನತೆಯು ಪ್ರಮುಖ ಮೌಲ್ಯವಾಗಿ ಉಳಿಯಬೇಕು. ಕಾರ್ಮಿಕರು, ವಿಶೇಷವಾಗಿ ದೂರದ ಮತ್ತು ಸವಾಲಿನ ಸ್ಥಳಗಳಲ್ಲಿ ಕೆಲಸ ಮಾಡುವವರು, ಸ್ವಚ್ಛ ವಸತಿ, ಸುರಕ್ಷಿತ ವಾತಾವರಣ ಮತ್ತು ಆರೋಗ್ಯಕರ ಆಹಾರವನ್ನು ಪಡೆಯಲು ಅರ್ಹರು ಎಂದು ಅದಾನಿ ಪ್ರತಿಪಾದಿಸಿದರು. ಅದಾನಿ ಗ್ರೂಪ್‌ನಲ್ಲಿ "ಸ್ಥಳೀಯರಿಗೆ ಆದ್ಯತೆ" ನೀಡುವಂತಹ ನೇಮಕಾತಿ ನೀತಿ ಜಾರಿಯಲ್ಲಿದೆ. ಎಲ್ಲಿಯೇ ಹೊಸ ಯೋಜನೆ ಆರಂಭಿಸಿದರೂ ಅಲ್ಲಿನ ಉದ್ಯೋಗಾವಕಾಶಗಳು ಸ್ಥಳೀಯರಿಗೆ ಮೊದಲು ಸಿಗಬೇಕು. ಆ ನಂತರ ರಾಜ್ಯದ ಇತರ ಭಾಗದವರಿಗೆ, ಹೊರ ರಾಜ್ಯದವರಿಗೆ ಸಿಗಬೇಕೆಂದು ಅವರು ತಿಳಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries