HEALTH TIPS

ಜಿಲ್ಲಾ ಕುಲಾಲ ಸಂಘ, ಮಂಜೇಶ್ವರ ಶಾಖೆಯ ವಾರ್ಷಿಕ ಮಹಾಸಭೆ ಹಾಗೂ ಆಟಿದ ಕೂಟ

ಮಂಜೇಶ್ವರ: ಕಾಸರಗೋಡು ಜಿಲ್ಲಾ ಕುಲಾಲ ಸಂಘ ಮಂಜೇಶ್ವರ ಶಾಖೆಯ ಮಹಾಸಭೆ ಹಾಗೂ ಆಟಿದ ಕೂಟ ಕಾರ್ಯಕ್ರಮ ಜಿಲ್ಲಾ ಕುಲಾಲ ಸಮುದಾಯ ಭವನ ಕುಂಜತ್ತೂರು ತೂಮಿನಾಡುನಲ್ಲಿ ಭಾನುವಾರ ಜರಗಿತು. ಕಾರ್ಯಕ್ರಮವನ್ನು ಶ್ರೀ ಲಕ್ಕಣಪಾಲು ಮೂಲಸ್ಥಾನದ ಗೌರವಾಧ್ಯಕ್ಷ ಕೊರಗಪ್ಪ ಬಂಗೇರ ಮಣಿಹಳ್ಳ ದೀಪಪ್ರಜ್ವಲನೆಗೈದು ಉದ್ಘಾಟಿಸಿದರು. ಮಂಜೇಶ್ವರ ಕುಲಾಲ ಶಾಖೆಯ ಅಧ್ಯಕ್ಷ  ಗೋಪಾಲ ಸಾಲ್ಯಾನ್ ಕುಂಜತ್ತೂರು ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಅಧ್ಯಕ್ಷ ವಕೀಲ ರವೀಂದ್ರ ಮುನ್ನಿಪ್ಪಾಡಿ, ತಾಲೂಕು ಪ್ರಚಾರ ಕಾರ್ಯಪ್ರಮುಖ್ ಪ್ರಶಾಂತ್ ಬಡಾಜೆ, ಮಂಜೇಶ್ವರ ಸರ್ವಿಸ್ ಕೋ. ಆಪರೇಟಿವ್ ಬ್ಯಾಂಕ್ ನ ನಿರ್ದೇಶಕ ರಾಮಚಂದ್ರ ಕುಲಾಲ್ ಕಣ್ವತೀರ್ಥ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. 


ಆಟಿ ತಿಂಗಳ ವಿಶೇಷತೆ ಆಚರಣೆ ಬಗ್ಗೆ ಶಾರದಾ ಪಿ. ಯು. ಕಾಲೇಜು ಮಂಗಳೂರಿನ ಉಪನ್ಯಾಸಕಿ ರಂಜನಿ ಅಗರ್ತಬೈಲು ಅವರು ಮಾಹಿತಿ ನೀಡಿದರು. ದೀಕ್ಷಾ ವುಡ್ ಇಂಡಸ್ಟ್ರೀಸ್ ನ ಮಾಲಕ ಬಾಲಕೃಷ್ಣ ಬಿ ಗೌರವ ಉಪಸ್ಥಿತರಿದ್ದರು. ಮಂಜೇಶ್ವರ ಕುಲಾಲ ಶಾಖೆಯ ವತಿಯಿಂದ ಹಿರಿಯ ಕೃಷಿಕ ರಾಮ ಕುಲಾಲ್ ಮಜಲು ಕುಂಜತ್ತೂರು ಹಾಗೂ ದಿನೇಶ್ ಕುಲಾಲ್ ಅಂಬಿತ್ತಡಿ ಉದ್ಯಾವರ ಮಾಡ ಅವರಿಗೆ ಗಣ್ಯರ ಉಪಸ್ಥಿತಿಯಲ್ಲಿ ಗೌರವಾರ್ಪಣೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಪ್ರೋತ್ಸಾಹಕ ವಿದ್ಯಾನಿಧಿಗೆ ಆಯ್ಕೆಯಾದ ಇಬ್ಬರು ವಿದ್ಯಾರ್ಥಿನಿಯರಿಗೆ ವಿದ್ಯಾನಿಧಿಯನ್ನು ವಿತರಿಸಲಾಯಿತು. ಕಳೆದ ಸಾಲಿನ ಕಾರ್ಯಕಾರಿ ಸಮಿತಿಯನ್ನು ಮುಂದುವರಿಸುವ ಬಗ್ಗೆ ಸಭೆ ಅನುಮೋದನೆ ನೀಡಿತು. ಜತೆ ಕಾರ್ಯದರ್ಶಿ ಆನಂದ ಸಾಲ್ಯಾನ್ ವರದಿ ವಾಚಿಸಿ ಕೋಶಾಧಿಕಾರಿ ಜಗದೀಶ್ ಕುಲಾಲ್ ಲೆಕ್ಕಪತ್ರ ಮಂಡಿಸಿದರು. ವಿವಿಧ ಸ್ವರ್ಧೆಗಳು, ನೃತ್ಯ ಕಾರ್ಯಕ್ರಮಗಳು, ಆಟಿಮಾಸದ ವಿಶೇಷ ಭೋಜನ ನಡೆಯಿತು. ಕಾರ್ಯದರ್ಶಿ ಈಶ್ವರ್ ಕುಲಾಲ್ ಕಣ್ವತೀರ್ಥ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು. ತಾರಾನಾಥ ಕುಲಾಲ್ ವಂದಿಸಿದರು.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries