ಕುಂಬಳೆ: ಶೈಕ್ಷಣಿಕ ಮತ್ತು ಸಾಮಾಜಿಕ ಸೇವೆಗೆ ಸಮರ್ಪಿತವಾಗಿರುವ ಉಪ್ಪಳ ಮಣಿಮುಂಡ ಶೈಕ್ಷಣಿಕ ಸಂಸ್ಥೆ 3ನೇ ವರ್ಷದ ಪ್ರತಿಭಾನ್ವೇಷಣಾ ಪರೀಕ್ಷೆ 2026 ಸಮಾರಂಭ ಆ.4 ರಂದು ಮಂಗಳವಾರ ಮಣಿಮುಂಡ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದೆ.
ಮೂಸಾ ಹಾಜಿ ಅಲ್ವಾಯೆ ಅವರ ಪ್ರೀತಿಯ ನೆನಪಿನಲ್ಲಿ, ಸಂಸ್ಥೆಯು 2024_ ರಿಂದ ಮಂಗಲ್ಪಾಡಿ ಪಂಚಾಯತ್ ಮತ್ತು ಮಂಜೇಶ್ವರ ಉಪ ಜಿಲ್ಲೆಯ_ ವಿದ್ಯಾರ್ಥಿಗಳಿಗೆ ಈ ಪ್ರತಿಭಾನ್ವೇಷಣಾ ಪರೀಕ್ಷೆಯನ್ನು ನಡೆಸುತ್ತಿದೆ.
ಮಂಗಳವಾರ ಮಧ್ಯಾಹ್ನ 1:15 ಕ್ಕೆ ಸ್ಪರ್ಧಾಳುಗಳ ದಾಖಲೀಕರಣ, 1:30 ರಿಂದ ಪ್ರತಿಭಾನ್ವೇಷಣಾ ಪರೀಕ್ಷೆ ಮಣಿಮುಂಡ ಶಾಲಾ ಪರಿಸರದಲ್ಲಿ ಯುಪಿ, ಹೈಸ್ಕೂಲು ಮತ್ತು ಹೈಯರ್ ಸೆಕೆಂಡರಿ ವಿಭಾಗಗಳಿಗೆ ನಡೆಯಲಿದೆ. ಎಲ್ಲಾ ಶೈಕ್ಷಣಿಕ ವಿಷಯಗಳನ್ನೊಳಗೊಂಡ ಸಾಮಾನ್ಯ ಜ್ಞಾನದ ಒಎಂಆರ್ ಆಧಾರಿತ ರೀತಿಯಲ್ಲಿ ಪರೀಕ್ಷೆ ನಡೆಯಲಿದೆ. ಆಂಗ್ಲ ಮಾಧ್ಯಮದಲ್ಲಿ ನಡೆಯುವ ಪರೀಕ್ಷೆಯಲ್ಲಿ ತರಗತಿಯ ಪಠ್ಯಕ್ರಮದ ಆಧಾರದ ಮೇಲೆ ಪ್ರಶ್ನೆಗಳಿರಲಿದೆ. ಮಂಜೇಶ್ವರ ಉಪಜಿಲ್ಲೆಯಲ್ಲಿ ಅಧ್ಯಯನ ನಡೆಸುವವರು ಮತ್ತು ಉಪಜಿಲ್ಲೆಯ ಹೊಗೆ ಓದುತ್ತಿರುವ ಮಂಜೇಶ್ವರ ಉಪಜಿಲ್ಲಾ ನಿವಾಸಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅರ್ಹರಾಗಿದ್ದು, ವಿಕೇತರಿಗೆ ಪ್ರಥಮ 2,222, ದ್ವಿತೀಯ 1,555, ತೃತೀಯ 1,111 ರೂ.ನಗದು, ಸ್ಮರಣಿಕೆ, ಸಮಧಾನಕರ ಬಹುಮಾನಗಳು ಹಾಗೂ ಭಾಗವಹಿಸಿದ ಎಲ್ಲರಿಗೂ ಪ್ರಮಾಣ ಪತ್ರಗಳನ್ನು ನೀಡಲಾಗುವುದು.
ಆಸಕ್ತರು ಆ.2 ರಂದು ಸಂಜೆ 4ರ ಮೊದಲು 9995881404- ಮುಫೀದ್ ಪೊಸೋಟ್, 9544035585- ಶಿಹಾಬ್ ಮಣಿಮುಂಡ ಅವರಿಗೆ ಕರೆಮಾಡಿ,ಅಥವಾ 9995712727 ಸಂಖ್ಯೆಗೆ ವಾಟ್ಸಫ್ ಮೂಲಕ ನೋಂದಾಯಿಸಬಹುದೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ.
ಸಂಸ್ಥೆ ಬಗ್ಗೆ:
ಸಾರ್ವಜನಿಕ ಸೇವಕರಾದ ಆಲ್ವಾಯಿ ಮೂಸಾ ಹಾಜಿ ಅವರು 1977 ರಲ್ಲಿ ಹುಟ್ಟುಹಾಕಿದ ಮಣಿಮುಂಡ ಎಜ್ಯುಕೇಶನ್ ಸೊಸೈಟಿ ನರ್ಸರಿ ಶಾಲೆ, ಬಡ ಕುಟುಂಬದ ಹುಡುಗಿಯರಿಗೆ ಹೊಲಿಗೆ ತರಬೇತಿ ಮತ್ತು ಆಹಾರ, ಬಟ್ಟೆ ವಿತರಣೆಯಂತಹ ದಾನ ಕಾರ್ಯಗಳೊಂದಿಗೆ ಪ್ರಾರಂಭವಾಗಿ 2007ರಲ್ಲಿ ಆಂಗ್ಲ ಮಾಧ್ಯಮ ಶಾಲೆ ಪ್ರಾರಂಭಿಸಿತು. ಪ್ರಸ್ತುತ ಕಳೆದ ಮೂರು ವರ್ಷಗಳಿಂದ ಪ್ರತಿಭಾನ್ವೇಷಣೆ ಪರೀಕ್ಷೆಗಳನ್ನು ನಡೆಸುತ್ತಾ ವಿದ್ಯಾರ್ಥಿಗಳ ಪಠ್ಯೇತರ ಸಾಧನೆಗೆ ಬೆಂಬಲ ನೀಡುತ್ತಿದೆ.
ಈ ಬಗ್ಗೆ ಕುಂಬಳೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಸಂಬಂಧಪಟ್ಟ ಆಯೋಜಕರು ದಿ.ಮೂಸಾ ಹಾಜಿ ಆಲ್ವಾಯಿ ಅವರು ಹುಟ್ಟುಹಾಕಿದ ಸಂಸ್ಥೆ ನಡೆಸುವ ವಿವಿಧ ಚಟುವಟಿಕೆಗಳಿಗೆ ಸಾರ್ವಜನಿಕರ ಬೆಂಬಲ ಕೇಳಿದರು. ಸುದ್ದಿಗೋಷ್ಠಿಯಲ್ಲಿ ಮೊಹಮ್ಮದ್ ಅಜೀಮ್ ಮಣಿಮುಂಡ, ಶೇಖ್ ಮುಹಿಯುದ್ದೀನ್ ಸಾಬಿರ್, ಜಿಯಾನಾ ಸಾಬಿರ್, ಮುಹಿಯುದ್ದೀನ್ ಶಿಯಾಬ್, ಕಾರ್ಯಕ್ರಮದ ಸಹಾಯಕ ಸಂಚಾಲಕ ಮುಫೀದ್ ಪೊಸೋಟ್ ಉಪಸ್ಥಿತರಿದ್ದು ಮಾಹಿತಿ ನೀಡಿದರು.

