ಚೆನ್ನೈ: ಪೋಲ್ ವಾಲ್ಟ್‌ನಲ್ಲಿ ಕುಲದೀಪ್ ಕುಮಾರ್ ಅವರು ನೂತನ ರಾಷ್ಟ್ರೀಯ ದಾಖಲೆಯನ್ನು ನಿರ್ಮಿಸಿದರು.
ಭುವನೇಶ್ವರದಲ್ಲಿ ಶನಿವಾರ ನಡೆದ ಮೊದಲ ಆವೃತ್ತಿಯ ಇಂಡಿಯನ್ ಇಂಡೋರ್ ಓಪನ್ ಕಂಬೈನ್ಡ್ ಈವೆಂಟ್ಸ್ ಆಯಂಡ್ ಪೋಲ್ ವಾಲ್ಟ್ ಸ್ಪರ್ಧಾವಳಿಗಳಲ್ಲಿ ಪೋಲ್‌ವಾಲ್ಟ್ ಸ್ಪರ್ಧೆಯಲ್ಲಿ 5.41 ಮೀ. ಎತ್ತರಕ್ಕೆ ಜಿಗಿದರು.
ಮಧ್ಯಪ್ರದೇಶದ 21ರ ವಯಸ್ಸಿನ ಕುಲದೀಪ್ ತನ್ನದೇ ರಾಜ್ಯದ ದೇವ್ ಮೀನಾ (5.40 ಮೀ.)ದಾಖಲೆಯನ್ನು ಮುರಿದರು. ದೇವ್ ಮೀನಾ ಮೂರನೇ ಸ್ಥಾನ ಪಡೆದಿದ್ದರು.
ಏಶ್ಯನ್ ಗೇಮ್ಸ್‌ಗೆ ಅರ್ಹತಾ ಮಾರ್ಕ್ 5.45 ಮೀ. ಆಗಿದೆ. 5.46ಮೀ ತಲುಪಲು ಕುಲದೀಪ್ ಮೂರು ಬಾರಿ ವಿಫಲ ಯತ್ನ ನಡೆಸಿದರು.
21ರ ಹರೆಯದ ಕುಲದೀಪ್, ಅತ್ಯುತ್ತಮ ಫಾರ್ಮ್‌ನಲ್ಲಿದ್ದಾರೆ. ಈ ಹಿಂದೆ ಎಪ್ರಿಲ್‌ನಲ್ಲಿ ಜೈಪುರದಲ್ಲಿ 5.25 ಮೀ. ಎತ್ತರಕ್ಕೆ ಜಿಗಿದು ಚಿನ್ನದ ಪದಕ ಜಯಿಸಿದ್ದರು. 2026ರ ಕಾಮನ್‌ವೆಲ್ತ್ ಗೇಮ್ಸ್‌ನ ಅರ್ಹತಾ ಗುರುತನ್ನು ತಲುಪಿದ್ದರು.

