HEALTH TIPS

'ಇದು 'ಪೋ ಮೋನೆ ವಿಜಯ' ಮಾತ್ರವಷ್ಟೇ ಅಲ್ಲ, 'ಎರಂಙÂ ಪೋ ವಿಜಯ': ಅಣಕಿಸಿದ ರಾಹುಲ್ ಮಾಂಕೂಟತ್ತಿಲ್

ತಿರುವನಂತಪುರಂ: ಕೇರಳದಲ್ಲಿ ಯುಡಿಎಫ್ ತರಂಗ ಸೃಷ್ಟಿಸಿದ ಹಿನ್ನೆಲೆಯಲ್ಲಿ ರಾಹುಲ್ ಮಾಂಕೂಟತ್ತಿಲ್ ಅವರ ಫೇಸ್‍ಬುಕ್ ಪೋಸ್ಟ್ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರನ್ನು ಅಣಕಿಸಿದೆ. 


ಜನರು ಈಗ 'ಪೋ ಮೋನೆ ವಿಜಯನ್ ಮಾತ್ರವಲ್ಲ ವೀಟಿಲೇಕ್ಕ್ ತನ್ನೆ ಪೋ ಎಂದು ಹೇಳಿದ್ದಾರೆ ಎಂದು ರಾಹುಲ್ ತಮ್ಮ ಫೇಸ್‍ಬುಕ್ ಪೋಸ್ಟ್‍ನಲ್ಲಿ ಬರೆದಿದ್ದಾರೆ.

ತಾವು 'ಪೋ ಮೋನೆ ವಿಜಯ' ಎಂದು ಹೇಳುತ್ತಿಲ್ಲ, ಆದರೆ 'ಇಳಿದು ಹೋಗು ವಿಜಯ' ಎಂದು ಹೇಳುತ್ತಿದ್ದೇನೆ ಎಂದು ರಾಹುಲ್ ಬರೆದಿದ್ದಾರೆ. ಧರ್ಮಡಂ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಪಿಣರಾಯಿ ವಿಜಯನ್, ಐದನೇ ಸುತ್ತಿನ ಮತ ಎಣಿಕೆಯಲ್ಲಿ ಹಿಂದುಳಿದು ಬಳಿಕ ಅಲ್ಪ ಚೇತರಿಸಿಕೊಂಡಿರುವರು.

ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಮತ್ತು ಅವರ ಸಚಿವರು ಸಾಮೂಹಿಕವಾಗಿ ಹಿಂದುಳಿದಿದ್ದಾರೆ. ಯುಡಿಎಫ್‍ನ ಎಲ್ಲಾ ನಾಯಕರು ಮುನ್ನಡೆಯಲ್ಲಿದ್ದರೆ, ಸಚಿವರಾದ ರೋಶಿ ಆಗಸ್ಟೀನ್, ವಿ ಎನ್ ವಾಸವನ್, ಆರ್ ಬಿಂದು, ಗಣೇಶ್ ಕುಮಾರ್, ಪಿ ರಾಜೀವ್, ಒ ಆರ್ ಕೇಳು, ವಿ ಶಿವನ್‍ಕುಟ್ಟಿ, ವೀಣಾ ಜಾರ್ಜ್, ಅಬ್ದುರಹಿಮಾನ್, ಎಂ ಬಿ ರಾಜೇಶ್, ಜೆ ಚಿಂಜುರಾನಿ, ಎ ಕೆ ಶಶೀಂದ್ರನ್ ಮತ್ತು ಪಿ ಪ್ರಸಾದ್ ಹಿನ್ನಡೆಯಲ್ಲಿದ್ದಾರೆ. ಏತನ್ಮಧ್ಯೆ, ಪೆರಾವೂರಿನಲ್ಲಿ ಕೆ ಕೆ ಶೈಲಜಾ ಮುನ್ನಡೆಯಲ್ಲಿದ್ದಾರೆ. ಬೇಪೂರ್‍ನಲ್ಲಿ ಪಿ ಎ ಮುಹಮ್ಮದ್ ರಿಯಾಜ್ ಮುಂದಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries