HEALTH TIPS

ಖ್ಯಾತ ಮ್ಯಜೀಶಿಯನ್ ಗೋಪಿನಾಥ್ ಮುತ್ತುಕ್ಕಾಡ್ ತಂಡದಿಂದ ಇಂದು ಇಂದ್ರಜಾಲ ಪ್ರದರ್ಶನ

ಕಾಸರಗೋಡು: ಖ್ಯಾತ ಮ್ಯಜೀಶಿಯನ್ ಗೋಪಿನಾಥ್ ಮುತ್ತುಕ್ಕಾಡ್  ನೇತೃತ್ವದಲ್ಲಿ ಮ್ಯಾಜಿಕ್ ಮತ್ತು ಸಂಗೀತವನ್ನು ಸಂಯೋಜಿಸುವ 'ಎಂ ಕ್ಯೂಬ್' ಪ್ರೇರಣಾ ಕಾರ್ಯಕ್ರಮವು ಮೇ 1ರಂದು ಸಂಜೆ 6ಕ್ಕೆ ಕಾಸರಗೋಡಿನ ಚೆಟ್ಟುಂಗುಳಿಯಲ್ಲಿರುವ ರಾಯಲ್ ಕನ್ವೆನ್ಷನ್ ಸೆಂಟರ್‍ನಲ್ಲಿ ನಡೆಯಲಿದೆ. 


ತಿರುವನಂತಪುರದ ಡಿಫರೆಂಟ್ ಆರ್ಟ್ ಸೆಂಟರ್ ನೇತೃತ್ವದಲ್ಲಿ ವಿಕಲಚೇತನರ ಅಭಿವೃದ್ಧಿಗಾಗಿ ಕಾಸರಗೋಡಿನಲ್ಲಿ ಪ್ರಾರಂಭಿಸಲಿರುವ ಅಂತಾರಾಷ್ಟ್ರೀಯ ವಿಕಲಚೇತನರ ಪುನಶ್ಚೇತನ ಸಂಸ್ಥೆ  (ಐಐಪಿಡಿ) ಉಪಕ್ರಮದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಮುತ್ತುಕಾಡ್ ಮತ್ತು ತಂಡ 'ಎಂ ಕ್ಯೂಬ್'ನೊಂದಿಗೆ ಕಾಸರಗೋಡಿಗೆ ಭೇಟಿ ನೀಡಲಿದೆ.   

ಪಾಣಕ್ಕಾಡ್ ಮುನವರಲಿ ಶಿಹಾಬ್ ತಙಳ್ ಮತ್ತು ಐ.ಎಂ. ವಿಜಯನ್ ಸೇರಿದಂತೆ ಸಾಂಸ್ಕøತಿಕ ಮತ್ತು ರಾಜಕೀಯ ಕ್ಷೇತ್ರದ ಪ್ರಮುಖ ವ್ಯಕ್ತಿಗಳು ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.    ಮುತ್ತುಕಾಡ್ ಜೊತೆಗೆ, ಹಿನ್ನೆಲೆ ಗಾಯಕರದ ಆರ್. ರವಿಶಂಕರ್, ಚಿತ್ರಾ ಅರುಣ್, ಪಿಟೀಲು ವಾದಕ ವಿಷ್ಣು ಅಶೋಕ್ ಭಾಗವಹಿಸಲಿದ್ದು,  ವಿವಿಧ ದೇಶಗಳಲ್ಲಿ ಸಂಗೀತ ಮ್ಯಾಜಿಕ್ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸುವ ಮೂಲಕ ಮೆಚ್ಚುಗೆ ಗಳಿಸಿರುವ ಡಿಫರೆಂಟ್ ಆರ್ಟ್ ಸೆಂಟರ್‍ನ ಆಟಿಸಂ ವಿದ್ಯಾರ್ಥಿನಿ ಕ್ರಿಸ್ಟೀನ್ ರೋಸ್ ಟೋಜೊ ಮತ್ತು ಸೆರೆಬ್ರಲ್ ಪಾಲ್ಸಿ ವಿದ್ಯಾರ್ಥಿ ವಿಷ್ಣು.ಆರ್ ಅವರು ಅದ್ಭುತ ಪ್ರದರ್ಶನ ನೀಡಲಿದ್ದಾರೆ. ಕಾರ್ಯಖ್ರಮಕ್ಕೆ ಪಾಸ್ ಮೂಲಕ ಪ್ರವೇಶ ಕಲ್ಪಿಸಲಾಗಿದೆ.  

ಕಾಂಞಂಗಾಡ್‍ನ ಮಡಿಕೈನಲ್ಲಿ 30 ಎಕರೆ ಭೂಮಿಯಲ್ಲಿ ಐಐಪಿಡಿ ತಯಾರಾಗುತ್ತಿದ್ದು,  ಎಂಡೋಸಲ್ಫಾನ್‍ನಿಂದ ಬಾಧಿತರಾದವರು ಸೇರಿದಂತೆ ರಾಜ್ಯ ಮತ್ತು ಪ್ರಪಂಚದಾದ್ಯಂತದ ವಿಕಲಚೇತನರಿಗೆ ಆಶ್ರಯ ನೀಡಲು ಈ ಕೇಂದ್ರವನ್ನು ನಿರ್ಮಿಸಲಾಗುತ್ತಿದೆ.  


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries