ಮಂಜೇಶ್ವರ: ಬಳ್ಳಂಗುಡೇಲು ಶ್ರೀ ಪಡಾಂಗರೆ ಭಗವತಿ ಕ್ಷೇತ್ರ, ಪಟ್ಟತ್ತೂರು ಮಜಿಬೈಲು ಶ್ರೀ ಕ್ಷೇತ್ರದ ಇತಿಹಾಸ ಹಾಗೂ ಭಗವತಿಯ ಮಹಿಮೆಗಳನ್ನೊಳಗೊಂಡ 'ವಿಶ್ವರೂಪಿಣಿ' ಗ್ರಂಥ ಸಂಚಿಕೆಯನ್ನು ಶ್ರೀ ಪೇಜಾವರ ಅಡೋಕ್ಷಜ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರ ಅನುಗ್ರಹ ಸಂದೇಶದೊಂದಿಗೆ ಅಕ್ಷಯ ತೃತೀಯ ದಿನದಂದು, ಕಣ್ವತೀರ್ಥ ಶ್ರೀ ಬ್ರಹ್ಮೇಶ್ವರ ರಾಮಾಂಜನೇಯ ಕ್ಷೇತ್ರ ಮಠದಲ್ಲಿ ಶ್ರೀ ಸ್ವಾಮೀಜಿಯವರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಗೋಪಾಲ ಶೆಟ್ಟಿ ಆರಿಬೈಲು, ಎಸ್.ಬಿ.ಎಸ್. ಕೇಂದ್ರ ಕಾರ್ಯದರ್ಶಿ ಚೇತನ್ ರಾಜ್ ನೂರಿತ್ತಾಯ ಪಜಿಂಗಾರು, ನ್ಯಾಯವಾದಿ ಕಾನ ಮುರಳೀಧರ ಬಳ್ಳುಕ್ಕುರಾಯ, ಮೂಡಂಬೈಲು ಅಶೋಕ್ ಕೃಷ್ಣದಾಸ್ ಪಾವೂರ್ ಉಪಸ್ಥಿತರಿದ್ದರು.

.jpg)
