ಕಾಸರಗೋಡು: ಮತ ಎಣಿಕೆ ದಿನದ ಭದ್ರತಾ ವ್ಯವಸ್ಥೆ ಅಂಗವಾಗಿ, ಮೇ 4ರಂದು ಒಂದು ದಿನ ಜಿಲ್ಲೆಯಲ್ಲಿನ ಪಟಾಕಿ ತಯಾರಿ ಘಟಕ ಮತ್ತು ಪಟಾಕಿ ಮಾರಾಟ ಅಂಗಡಿಗಳನ್ನು ತೆರೆಯದಿರುವಂತೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡ್ಯನ್ ಆದೇಶಿಸಿದ್ದಾರೆ.
ವಿದ್ಯಾನಗರದ ಸರ್ಕಾರಿ ಕಾಲೇಜಿನಲ್ಲಿ ಮೂರು ವಿಧಾನಸಭಾ ಕ್ಷೇತ್ರಗಳ ಮತಎಣಿಕೆ ನಡೆಯಲಿರುವ ಕೇಂದ್ರಗಳು ಮತ್ತು ಕಾಞಂಗಾಡ್‍ನ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯಲ್ಲಿನ ಎರಡು ವಿಧಾನಸಭಾ ಕ್ಷೇತ್ರಗಳ ಇವಿಎಂ ಸ್ಟ್ರಾಂಗ್ ರೂಮ್‍ಗಳು ಮೇ 4ರಂದು ಬೆಳಗ್ಗೆ 7 ಗಂಟೆಗೆ ತೆರೆಯಲಾಗುವುದು. ಅದೇ ರೀತಿ ಅಂಚೆ ಮತಪತ್ರದ ಸ್ಟ್ರಾಂಗ್ ರೂಮ್ ಬೆಳಿಗ್ಗೆ 6ಕ್ಕೆ ತೆರೆಯಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

