HEALTH TIPS

ಕಣಜದ ಹುಳುಗಳ ದಾಳಿ-ಶಿಕ್ಷಕ ದಾರುಣ ಮೃತ್ಯು

ಕಾಸರಗೋಡು: ತಮ್ಮ ಜಾಗವನ್ನು ಶುಚೀಕರಿಸುವ ಮಧ್ಯೆ ಕಣಜದ ಹುಳುಗಳ ದಾಳಿಯಿಂದ ಶಿಕ್ಷಕ ದಾರುಣವಾಗಿ ಮೃತಪಟ್ಟಿದ್ದಾರೆ. ಜಿಲ್ಲೆಯ ಬಳಾಂತೋಡು ಸರ್ಕಾರಿ ಹಯರ್ ಸೆಕೆಂಡರಿ ಶಾಲೆಯ ಅಧ್ಯಾಪಕ, ಕಾಞಂಗಾಡು ಚಾಮುಂಡಿಕುನ್ನು ನಿವಾಸಿ ವಿಜಯನ್ (56)ಮೃತಪಟ್ಟವರು.  ಬುಧವಾರ ¨ಳಗ್ಗೆ ತಮ್ಮ ಮನೆ ವಠಾರದ ಭೂಮಿಯನ್ನು ಕೆಲಸದವರ ಜತೆ ಸ್ವಚ್ಛಗೊಳಿಸುತ್ತಿರುವ ಮಧ್ಯೆ ವಿಜಯನ್ ಅವರ ಮೇಲೆ ಕಣಜದ ಹುಳ ದಾಳಿ ನಡೆಸಿದೆ. ಮಣ್ಣಿನ ಹುತ್ತದಲ್ಲಿ ಗೂಡು ಕಟ್ಟಿದ್ದ ಕಣಜದ ಹುಳುಗಳು ಗುಂಪಾಗಿ ಆಕ್ರಮಿಸಿತ್ತು.  ತಕ್ಷಣ ಇವರನ್ನು ಅವರನ್ನು ಬಂದಡ್ಕದ ಖಾಸಗಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ.  ಇವರ ಜತೆಗಿದ್ದ ನಾಲ್ವರು ಕಾರ್ಮಿಕರೂ ಕಣಜದ ಹುಳ ಕಡಿತಕ್ಕೊಳಗಾಗಿದ್ದು, ಇವರು ಆಸ್ಪತ್ರೆಯಲ್ಲಿ ಚೇತರಿಸುತ್ತಿದ್ದಾರೆ.   ವಿಜಯನ್ ಅವರು ಈ ಅಧ್ಯಯನ ವರ್ಷದಲ್ಲಿ ಸೇವಾ ನಿವೃತ್ತಿ ಹೊಂದುವ ಸಿದ್ದತೆಯಲ್ಲಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries