HEALTH TIPS

ಯುವ ಗುಂಪುಗಳಿಗೆ ಸಂಗೀತ ವಾದ್ಯೋಪಕರಣಗಳ ವಿತರಣೆ

ಕಾಸರಗೋಡು: ಕಾಞಂಗಾಡ್ ಬ್ಲಾಕ್ ಪಂಚಾಯತ್‍ನ ವಾರ್ಷಿಕ ಯೋಜನೆಯ ಭಾಗವಾಗಿ, ಪರಿಶಿಷ್ಟ ಜಾತಿಗಳ ಕಲೆ ಮತ್ತು ಸಂಸ್ಕøತಿಯನ್ನು ಉತ್ತೇಜಿಸುವ ಉದ್ದೇಶದಿಂದ ಯುವ ಗುಂಪುಗಳಿಗೆ ಸಂಗೀತ ವಾದ್ಯಗಳನ್ನು ವಿತರಿಸಲಾಯಿತು. ಈ ಯೋಜನೆಯನ್ನು 2025-26 ರ ವಾರ್ಷಿಕ ಯೋಜನೆಯಲ್ಲಿ ಸೇರಿಸುವ ಮೂಲಕ ಕಾರ್ಯಗತಗೊಳಿಸಲಾಯಿತು.


ಬ್ಲಾಕ್ ಪಂಚಾಯತ್ ಅಧ್ಯಕ್ಷೆ ಕೆ. ಸುಜಾತ ಅವರು ವಿತರಣೆಯನ್ನು ಉದ್ಘಾಟಿಸಿದರು. ಮೊದಲ ಹಂತದಲ್ಲಿ ಮಡಿಕೈ ಪಂಚಾಯತ್‍ನ ಶಿವೋಹಮ್ ಸಂಗೀತ ಗುಂಪು, ಪುಲ್ಲೂರ್-ಪೆರಿಯ ಪಂಚಾಯತ್‍ನ ಚಿಲಂಬು ಸಂಗೀತ ಗುಂಪು, ಅಜಾನೂರು ಪಂಚಾಯತ್‍ನ ಚಕ್ಲಿಯಾ ಸಮುದಾಯ ಗುಂಪು ಮತ್ತು ಪಳ್ಳಿಕ್ಕೆರೆ ಪಂಚಾಯತ್‍ನ ಎಸ್.ಕೆ.ಸಿ. ಸಂಗೀತ ಗುಂಪುಗಳಿಗೆ ವಾದ್ಯಗಳನ್ನು ಒದಗಿಸಲಾಯಿತು. ವಿವಿಧ ವರ್ಷಗಳಲ್ಲಿ ಒಟ್ಟು 11 ಗುಂಪುಗಳು ಈ ಯೋಜನೆಯ ಪ್ರಯೋಜನ ಪಡೆದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಲ್ಯಾಣ ವ್ಯವಹಾರಗಳ ಸ್ಥಾಯಿ ಸಮಿತಿ ಅಧ್ಯಕ್ಷ ಪಿ.ಎಚ್. ಮುಹಮ್ಮದ್ ಹನೀಫಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬ್ಲಾಕ್ ಪಂಚಾಯತ್ ಉಪಾಧ್ಯಕ್ಷ ಪಿ. ಗೋವಿಂದನ್, ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಎಂ.ಪಿ. ಜಯಶ್ರೀ, ಬ್ಲಾಕ್ ಪಂಚಾಯತ್ ಸದಸ್ಯರಾದ ನಾರಾಯಣನ್ ಮಡಿಕ್ಕಲ್, ಬಿಂದು.ಕೆ, ಬ್ಲಾಕ್ ಪಂಚಾಯತ್ ಕಾರ್ಯದರ್ಶಿ ಕೆ.ಪಿ. ರಜಿತಾ, ಎಸ್‍ಸಿಡಿಒ ಪಿ.ಬಿ. ಬಶೀರ್ ಮತ್ತಿತರರು ಭಾಗವಹಿಸಿದ್ದರು. 


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries