HEALTH TIPS

ಸ್ವಾವಲಂಬನೆ ಸಾಧಿಸುವಲ್ಲಿ ಭಾರತ ಯಶಸ್ವಿಯಾಗಿದೆ: ಮೋದಿ

ನವದೆಹಲಿ: 'ಸ್ವಾವಲಂಬನೆ ಸಾಧಿಸುವಲ್ಲಿ ಭಾರತ ಯಶಸ್ವಿಯಾಗಿದೆ' ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಹೇಳಿದ್ದಾರೆ. 

'ಮನ್ ಕಿ ಬಾತ್' ಕಾರ್ಯಕ್ರಮದಲ್ಲಿ ಮಾತನಾಡಿದ ಮೋದಿ ಅವರು, ದೇಶವು ಜೂನ್ ತಿಂಗಳಿನಲ್ಲಿಯೇ ವಾಯುಯಾನ ಕ್ಷೇತ್ರದಲ್ಲಿ ಸ್ವಾವಲಂಬನೆಯಾಗಿ ಮುನ್ನುಗುತ್ತಿದೆ.

ಇದಕ್ಕೆ ಉದಾಹರಣೆಯಾಗಿ ಭಾರತದಲ್ಲೇ ತಯಾರಾದ ಸಿ-295 (C-295) ವಿಮಾನವು ಯಶಸ್ವಿ ಕಂಡಿದೆ. ಅಂತಹ 40 ವಿಮಾನಗಳನ್ನು ದೇಶೀಯವಾಗಿ ನಿರ್ಮಿಸಲಾಗುತ್ತಿದೆ. ಇದರಿಂದ ಏರೋಸ್ಪೇಸ್ ವಲಯಕ್ಕೆ ಹೊಸಬಲ ಸಿಕ್ಕಂತಾಗಿದೆ ಹಾಗೂ ಇದರಿಂದ ಉದ್ಯೋಗಾವಕಾಶಗಳನ್ನು ಹೆಚ್ಚಿಸಲು ಸಹಕಾರಿಯಾಗಿದೆ' ಎಂದಿದ್ದಾರೆ.

'ದೇಶೀಯವಾಗಿ ನಿರ್ಮಿತವಾದ ಸಿ -295 ಮಿಲಿಟರಿ ವಿಮಾನವು ಜೂನ್ 10 ರಂದು ಮೊದಲ ಹಾರಾಟವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ವಿಮಾನವನ್ನು ಐಎಎಫ್ ಸುಮಾರು ₹ 21 ಕೋಟಿಗೂ ಅಧಿಕ ವೆಚ್ಚದಲ್ಲಿ ಖರೀದಿಸುತ್ತಿದೆ. ಇದು ದೇಶವೇ ಹೆಮ್ಮೆ ಪಡುವ ಕ್ಷಣಕ್ಕೆ ಸಾಕ್ಷಿಯಾಗಿದೆ' ಎಂದು ಹೇಳಿದ್ದಾರೆ.

'ಕೆಲವು ದಿನಗಳ ಹಿಂದೆ ಕೋಲ್ಕತ್ತದಲ್ಲಿ ನಡೆದ ನೌಕಾಪಡೆಗೆ ಸಂಬಂಧಿಸಿದ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದೆ. ಆ ವೇಳೆ ದೇಶೀಯವಾಗಿ ತಯಾರಾದ ಐಎನ್‌ಎಸ್ ದುನಗಿರಿ, ಐಎನ್‌ಎಸ್ ಸಂಶೋಧಕ್ ಯುದ್ಧನೌಕೆಗಳನ್ನು ಭಾರತೀಯ ನೌಕಾಪಡೆಗೆ ನೀಡಲಾಯಿತು' ಎಂದು ಹೇಳಿಕೊಂಡಿದ್ದಾರೆ.

ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಸಮಯದಲ್ಲಿ ಚಿನ್ನ ಖರೀದಿಸುವುದನ್ನು ಹಾಗೂ ವಿದೇಶಿ ಪ್ರವಾಸ ಕೈಗೊಳ್ಳದಂತೆ ಹೇಳಲಾಗಿತ್ತು. ಈ ನಿಯಮ ಪಾಲನೆ ಮಾಡಿದವರೆಲ್ಲರಿಗೂ ಕೃತಜ್ಞತೆ ತಿಳಿಸುತ್ತೇನೆ. ಕೃಷಿ ಭೂಮಿಯನ್ನು ರಕ್ಷಿಸಲು ನೈಸರ್ಗಿಕ ಗೊಬ್ಬರಗಳ ಬಳಕೆಯನ್ನು ಹೆಚ್ಚು ಮಾಡಬೇಕು. ಅದರ ಜೊತೆಗೆ ನೈಸರ್ಗಿಕ ಗೊಬ್ಬರಗಳ ಉತ್ಪಾದನಾ ಕೇಂದ್ರವನ್ನು ಹೆಚ್ಚಿಸಿಕೊಳ್ಳುವ ಮಾರ್ಗಗಳನ್ನು ಕಂಡುಕೊಳ್ಳಬೇಕು' ಎಂದಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries