ಪಾಲಕ್ಕಾಡ್: ಪಾಲಕ್ಕಾಡ್ ಜಿಲ್ಲೆಯಲ್ಲಿ ಮತ್ತೊಂದು ಎಚ್1 ಸಾವು ಭೀತಿ ಮೂಡಿಸಿದೆ. ಕರಿಂಪುಳ, ಎಲಾಂಬುಲಸ್ಸೆರಿಯ 77 ವರ್ಷದ ವ್ಯಕ್ತಿಯ ಮರಣಕ್ಕೆ ಎಚ್1ಎನ್1 ಕಾರಣ ಎಂದು ದೃಢಪಟ್ಟಿದೆ.
ಜ್ವರದಿಂದಾಗಿ ಆ ವ್ಯಕ್ತಿಯನ್ನು ಕೆಲವು ದಿನಗಳ ಹಿಂದೆ ಪೆರಿಂದಲ್ಮಣ್ಣದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಎಚ್1ಎನ್1 ಸಾಂಕ್ರಾಮಿಕ ರೋಗ ಹರಡಿದ ನಂತರ ಜಿಲ್ಲೆಯಲ್ಲಿ ಇದು ಎರಡನೇ ಸಾವು. ಈ ತಿಂಗಳು ಜಿಲ್ಲೆಯಲ್ಲಿ ನಾಲ್ಕು ಜನರನೀ ಸೋಂಕಿನಿಂದ ಸಾವನ್ನಪ್ಪಿದ್ದರು.

