HEALTH TIPS

ಮುಂದಿನ 5 ವರ್ಷಗಳಲ್ಲಿ ಭಾರತದಲ್ಲಿ ಪ್ಲಂಬರ್, ಇಲೆಕ್ಟ್ರಿಶಿಯನ್, ನರ್ಸ್‌ಗಳ ತೀವ್ರ ಕೊರತೆ : ವರದಿ

ನವದೆಹಲಿ: ಭಾರತವು ಮುಂದಿನ ಐದು ವರ್ಷಗಳಲ್ಲಿ ಪ್ಲಂಬರ್‌ಗಳು, ಇಲೆಕ್ಟ್ರಿಶಿಯನ್‌ಗಳು, ಕಾರ್ಪೆಂಟರ್‌ಗಳು, ವಾಹನ ಚಾಲಕರು, ನರ್ಸ್‌ಗಳು ಹಾಗೂ ಶುಷ್ರೂಕರ ಗಂಭೀರ ಕೊರತೆಯನ್ನು ಎದುರಿಸಲಿದೆ ಎಂದು ಕೆನಡಾ ಮೂಲದ ಸ್ಥೂಲ ಪ್ರವೃತ್ತಿಗಳ (ಮ್ಯಾಕ್ರೊ ಟ್ರೆಂಡ್ಸ್)ಗಳ ಅಧ್ಯಯನ ಸಂಸ್ಥೆ ಪೈನ್‌ಟ್ರೀಯ ಸಂಸ್ಥಾಕ ರಿತೇಶ್ ಜೈನ್ ಅವರು ಎಚ್ಚರಿಕೆ ನೀಡಿದ್ದಾರೆ.

ಕುಶಲ ಕಾರ್ಮಿಕರಿಗಾಗಿ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಂದ ಬೇಡಿಕೆಯು ಹೆಚ್ಚುತ್ತಿರುವುದರಿಂದ ಭಾರತೀಯ ಕಾರ್ಮಿಕರು ದೊಡ್ಡ ಪ್ರಮಾಣದಲ್ಲಿ ಆ ದೇಶಗಳಿಗೆ ವಲಸೆ ಹೋಗಲಿದ್ದಾರೆ. ಇದರಿಂದಾಗಿ ದೇಶೀಯ ಕೈಗಾರಿಕೆಗಳು ಅರ್ಹ ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಪರದಾಡುವಂತಹ ಪರಿಸ್ಥಿತಿ ನಿರ್ಮಾಣವಾಗಲಿದೆಯೆಂದು ಅವರು ಹೇಳಿದ್ದಾರೆ.

ಜಗತ್ತು ಪ್ರಸಕ್ತ ದೊಡ್ಡ ಮಟ್ಟದಲ್ಲಿ ಕಾರ್ಮಿಕ-ಮಾರುಕಟ್ಟೆ ಅಸಮತೋಲನವನ್ನು ಎದುರಿಸುತ್ತಿದೆ. ಬಿಳಿಕಾಲರ್ ಉದ್ಯೋಗಿಗಳು ಮಿತಿಮೀರಿದ ಸಂಖ್ಯೆಯಲ್ಲಿ ಲಭ್ಯರಿದ್ದರೆ, ಪ್ಲಂಬರ್, ಇಲೆಕ್ಟ್ರಿಶಿಯನ್, ಚಾಲಕರಂತಹ ನೀಲಿ ಕಾಲರ್ ಉದ್ಯೋಗಿಗಳ ಕೊರತೆ ಕಂಡುಬರುತ್ತಿದೆ. ಕಾರ್ಮಿಕ ಕೊರತೆಯನ್ನು ಎದುರಿಸುತ್ತಿರುವ ಶ್ರೀಮಂತ ದೇಶಗಳು, ಈ ಅಂತರವನ್ನು ತುಂಬಬಲ್ಲಂತಹ ಯುವಶ್ರಮಿಕ ಪಡೆ ಅಪಾರ ಸಂಖ್ಯೆಯಲ್ಲಿ ಭಾರತದೆಡೆಗೆ ತಮ್ಮ ಗಮನವನ್ನು ಹರಿಸುವ ಸಾಧ್ಯತೆಯಿದೆ ಎಂದು ಅವರು ಲಿಂಕ್‌ಡೆನ್ ಸಾಮಾಜಿಕ ಜಾಲತಾಣದಲ್ಲಿ ಬರೆದ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಕಾರ್ಮಿಕರ ಕೊರತೆಯು ಯುರೋಪ್ ಹಾಗೂ ಉತ್ತರ ಅಮೆರಿಕವನ್ನು ಕಳವಳಕಾರಿ ಮಟ್ಟದಲ್ಲಿ ಕಾಡುತ್ತಿದೆ. ಜರ್ಮನಿಯಂತಹ ದೇಶಗಳಲ್ಲಿ ಇಲೆಕ್ಟ್ರಿಶಿಯನ್‌ಗಳು, ವೆಲ್ಡರ್‌ಗಳು, ಮೆಕ್ಯಾನಿಕ್‌ಗಳು ಮತ್ತಿತರ ಪರಿಣಿತ ವೃತ್ತಿಗಳ ಉದ್ಯೋಗಿಗಳ ಕೊರತೆ ದೊಡ್ಡ ಮಟ್ಟದಲ್ಲಿದೆ ಎಂದು ಸಮೀಕ್ಷೆಗಳು ತಿಳಿಸಿದೆ. ಅಮೆರಿಕದಲ್ಲೂ ಮುಂದಿನ ದಶಕದಲ್ಲಿ ಪ್ಲಂಬರ್‌ಗಳು, ಇಲೆಕ್ಟ್ರಿಶಿಯನ್‌ಗಳು ಹಾಗೂ ನಿರ್ವಹಣಾ ಕಾರ್ಮಿಕರ ಕೊರತೆ ಗಣನೀಯವಾಗಿ ಹೆಚ್ಚಳವಾಗಲಿದೆ ಎಂದು ಕೈಗಾರಿಕಾ ಮುನ್ನಂದಾಜು ವರದಿಗಳು ತಿಳಿಸಿವೆ.

ಭಾರತವು ಭವಿಷ್ಯತ್ತಿನ ಬೇಡಿಕೆಗೆ ಹೊಂದಿಕೆಯಾಗದ ಶ್ರಮಿಕ ಪಡೆಯನ್ನು ಉತ್ಪಾದಿಸುತ್ತಿದೆ ಎಂದು ಜೈನ್ ಅವರು ಎಚ್ಚರಿಕೆ ನೀಡಿದ್ದಾರೆ. ಭಾರತದಲ್ಲಿ ಪ್ರತಿವರ್ಷ ಲಕ್ಷಾಂತರ ಮಂದಿ ಪದವೀಧರರು ಉದ್ಯೋಗ ಮಾರುಕಟ್ಟೆಯಲ್ಲಿ ಪ್ರವೇಶಿಸಲಿದ್ದು, ಯುವ ಪದವೀಧರರಲ್ಲಿ ನಿರುದ್ಯೋಗ ಪ್ರಮಾಣವು ಅತ್ಯಧಿಕವಾಗಿರುವುದು. ಇದೇ ವೇಳೆ ತಾಂತ್ರಿಕವಾಗಿ ಪರಿಣಿತ ಕಾರ್ಮಿಕರ ಕೊರತೆಯೂ ಮುಂದುವರಿಯಲಿದೆ. ಹೀಗಾಗಿ ಭಾರತವು ಶೀಘ್ರದಲ್ಲೇ ತೀರಾ ಕಡಿಮೆ ಸಂಖ್ಯೆಯ ಪ್ಲಂಬರ್‌ಗಳು, ಇಲೆಕ್ಟ್ರಿಶಿಯನ್‌ಗಳು ಹಾಗೂ ಶುಶ್ರೂಷಕರ ತೀವ್ರ ಕೊರತೆಯನ್ನು ಕಾಣಲಿದೆ. ಇದೇ ವೇಳೆ ಭಾರೀ ಸಂಖ್ಯೆಯ ಪದವೀಧರರು ತಮಗೆ ಅರ್ಹವಾದ ಉದ್ಯೋಗಗಳನ್ನು ಪಡೆಯಲು ಪರದಾಡಬೇಕಾಗುತ್ತದೆ ಎಂದು ರಿತೇಶ್ ಜೈನ್ ಎಚ್ಚರಿಕೆ ನೀಡಿದ್ದಾರೆ.

ಅಭಿವೃದ್ಧಿ ಹೊಂದಿದ ಆರ್ಥಿಕತೆಯ ದೇಶಗಳಲ್ಲಿ ವೃದ್ಧರ ಸಂಖ್ಯೆ ಹೆಚ್ಚುತ್ತಿದ್ದರೆ, ಜನನ ಪ್ರಮಾಣವು ಗಣನೀಯವಾಗಿ ಕುಸಿಯುತ್ತಿದೆಯೆಂದು ವಿಶ್ವಸಂಸ್ಥೆಯ ಅಂದಾಜು ವರದಿಯೊಂದು ತಿಳಿಸಿದೆ. 1970ರ ದಶಕದಿಂದೀಚೆಗೆ ಜಗತ್ತಿನಲ್ಲಿ 65 ವರ್ಷಕ್ಕಿಂತ ಮೇಲ್ಪಟ್ಟವರ ಸಂಖ್ಯೆ ದ್ವಿಗುಣಗೊಂಡಿದೆ ಎಂದು ಅದು ಹೇಳಿದೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries