ಉಲಾನ್‌ಬಾತರ್: ಮಂಗೋಲಿಯಾ ದೇಶದಲ್ಲಿ ಭಾರತದ ಹಣಕಾಸು ನೆರವಿನಲ್ಲಿ ನಿರ್ಮಾಣವಾಗುತ್ತಿರುವ ತೈಲ ಸಂಸ್ಕರಣಾ ಘಟಕಕ್ಕೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರು ಮಂಗಳವಾರ ಭೇಟಿ ನೀಡಿದರು.
'ಈ ಯೋಜನೆ ಭಾರತ ಮತ್ತು ಮಂಗೋಲಿಯಾ ನಡುವಿನ ಸ್ನೇಹದ ಹೆಗ್ಗುರುತು. ಕಾಮಗಾರಿಯ ಸ್ಥಿತಿಗತಿ ಪರಿಶೀಲಿಸಿದ್ದು, ಸ್ಥಿರ ಪ್ರಗತಿ ಸಾಧಿಸುತ್ತಿದೆ.
ಇದು ಮಂಗೋಲಿಯಾದ ಸುಸ್ಥಿರ ಇಂಧನ ಕಾರ್ಯತಂತ್ರಕ್ಕೆ ಅತ್ಯಗತ್ಯವಾಗಿದೆ' ಎಂದು ಜೈಶಂಕರ್ ಅವರು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದಾರೆ.
ಯೋಜನೆಗೆ ಭಾರತವು ಅಂದಾಜು ₹16.10 ಸಾವಿರ ಕೋಟಿ (1.7 ಬಿಲಿಯನ್ ಅಮೆರಿಕ ಡಾಲರ್) ಸಾಲದ ನೆರವು ನೀಡಿದೆ.

