HEALTH TIPS

EWS : ಖಾಸಗಿ ಕಾಲೇಜುಗಳಲ್ಲಿ ಕಡಿಮೆ ಶುಲ್ಕ ಕೋರಿದ್ದ ಅರ್ಜಿ ವಜಾ

 ನವದೆಹಲಿ: 'ಆರ್ಥಿಕವಾಗಿ ದುರ್ಬಲ ವರ್ಗದ (ಇಡಬ್ಲ್ಯುಎಸ್‌) ವಿದ್ಯಾರ್ಥಿಗಳಿಗೆ ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಇರುವಂತೆಯೇ ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿಯೂ ನಿರ್ದಿಷ್ಟ ಶುಲ್ಕ ಪ್ರಮಾಣವನ್ನು ನಿಗದಿ ಮಾಡಿ' ಎಂದು ಕೋರಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್‌ ಬುಧವಾರ ವಜಾ ಮಾಡಿದೆ. 


'ಸರ್ಕಾರಿ ಮತ್ತು ಖಾಸಗಿ ಕಾಲೇಜುಗಳಲ್ಲಿ ಮೂಲಭೂತ ವ್ಯತ್ಯಾಸಗಳಿವೆ. ಸರ್ಕಾರಿ ಕಾಲೇಜಿನಂತೆ ಖಾಸಗಿ ಕಾಲೇಜುಗಳಲ್ಲಿಯೂ ಶುಲ್ಕ ವಿಧಿಸಿ ಎಂದು ಸೂಚಿಸಲು ಸಾಧ್ಯವಿಲ್ಲ' ಎಂದು ಕೋರ್ಟ್‌ ಹೇಳಿದೆ. ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಜಾಯ್‌ಮಾಲ್ಯಾ ಬಾಗ್ವಿ ಅವರ ಪೀಠ ನಡೆಸಿತು.

'ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ದೊಡ್ಡ ಮೊತ್ತದಲ್ಲಿ ಶುಲ್ಕ ವಿಧಿಸಲಾಗುತ್ತದೆ. ಇಷ್ಟೊಂದು ಹಣ ಪಡೆದುಕೊಳ್ಳುವ ಮೂಲಕ ಅರ್ಹ ಅಭ್ಯರ್ಥಿಗಳಿಗೆ ನೀಡಲಾಗುವ ಇಡಬ್ಲ್ಯುಎಸ್‌ ಮೀಸಲಾತಿಯೇ ಅರ್ಥಹೀನವಾಗುತ್ತದೆ' ಎಂದು ಅರ್ಜಿಯಲ್ಲಿ ಹೇಳಲಾಗಿತ್ತು.

'ರಾಜಸ್ಥಾನದ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ವರ್ಷಕ್ಕೆ ₹18.9 ಲಕ್ಷದಿಂದ ₹25 ಲಕ್ಷದವರೆಗೆ ಬೋಧನಾ ಶುಲ್ಕ ಪಡೆದುಕೊಳ್ಳಲಾಗುತ್ತದೆ. ವಾರ್ಷಿಕ ₹8 ಲಕ್ಷಕ್ಕಿಂತ ಕಡಿಮೆ ಆದಾಯ ಇರುವ ಕುಟುಂಬಗಳ ಅಭ್ಯರ್ಥಿಗಳು ಇಷ್ಟು ದೊಡ್ಡ ಮೊತ್ತ ಪಾವತಿ ಮಾಡುವುದು ಅಸಾಧ್ಯ' ಎಂದು ಅರ್ಜಿಯಲ್ಲಿ ವಾದಿಸಲಾಗಿತ್ತು.

ನ್ಯಾ. ನಾಗರತ್ನ ಅವರು ಪ್ರತಿಕ್ರಿಯಿಸಿ, 'ಸಂಸ್ಥೆ ನಡೆಸಲು ಬೇಕಾಗುವ ಹಣವನ್ನು ಖಾಸಗಿಯವರು ತಾವಾಗಿಯೇ ಹೊಂದಿಸಿಕೊಳ್ಳಬೇಕು. ರಾಜ್ಯ ಸರ್ಕಾರದಿಂದ ಸರ್ಕಾರಿ ವೈದ್ಯಕೀಯ ಕಾಲೇಜುಗಳಿಗೆ ಅನುದಾನ ಬರುತ್ತದೆ. ಕಡಿಮೆ ಶುಲ್ಕ ವಿಧಿಸಿ ಎಂದು ಹೇಳಿದರೆ, ಖಾಸಗಿ ಕಾಲೇಜುಗಳನ್ನು ನಿರುತ್ಸಾಹಗೊಳಿಸಿದಂತಾಗುತ್ತದೆ' ಎಂದರು.

ಅರ್ಜಿದಾರರು ಈ ಮೊದಲು ರಾಜಸ್ಥಾನ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಇಡಬ್ಲ್ಯುಎಸ್‌ ಮೀಸಲಾತಿಯು ಪ್ರವೇಶಾತಿ ವೇಳೆಯಲ್ಲಿ ಬಳಕೆಗೆ ಬರುತ್ತದೆ. ಖಾಸಗಿ ಸಂಸ್ಥೆಗಳಲ್ಲಿ ಶುಲ್ಕದಲ್ಲಿ ಸಬ್ಸಿಡಿ ಪಡೆದುಕೊಳ್ಳಲು ಬಳಕೆ ಮಾಡಲು ಬರುವುದಿಲ್ಲ' ಎಂದು ಹೈಕೋರ್ಟ್‌ ಹೇಳಿತ್ತು. ಈ ಆದೇಶವನ್ನೇ ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿದೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries