ಕುಂಬಳೆ: ಕುಂಬಳೆ ಸನಿಹದ ಮುಜುಂಗಾವಿನಲ್ಲಿ ನಿರ್ಮಾಣ ಕಾಮಗಾರಿ ನಡೆಯುತ್ತಿರುವ ಕಟ್ಟಡದಿಂದ ಬಿದ್ದು ಕಾರ್ಮಿಕ ಮೃತಪಟ್ಟಿದ್ದಾರೆ. ಬೇಳ ವಳಂಬ ಹೌಸ್ ನಿವಾಸಿ ಫ್ರಾನ್ಸಿಸ್ ಪ್ರವೀಣ್ ಡಿ'ಸೋಜಾ (47)ಮೃತಪಟ್ಟವರು.
ಶುಕ್ರವಾರ ಸಂಜೆ ಮುಜುಂಗಾವಿನಲ್ಲಿ ಮನೆಯೊಂದರ ನಿರ್ಮಾಣ ಕೆಲಸ ನಡೆಯುತ್ತಿದ್ದು, ಫ್ರಾನ್ಸಿಸ್ ಪ್ರವೀಣ್ ಡಿ'ಸೋಜಾ ಮೇಸ್ತ್ರಿಯ ಸಹಾಯಕನಾಗಿ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭ ಆಯತಪ್ಪಿ ಬಿದ್ದಿದ್ದರು. ಗಂಭೀರ ಗಾಯಗೊಂಡ ಫ್ರಾನ್ಸಿಸ್ ಪ್ರವೀಣ್ ಡಿ'ಸೋಜಾ ಅವರನ್ನು ಇತರ ಕಾರ್ಮಿಕರು ತಕ್ಷಣ ಆಸ್ಪತ್ರೆಗೆ ತಲುಪಿಸಿದರೂ ಪ್ರಯೋಜನವಾಗಿರಲಿಲ್ಲ. ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

