HEALTH TIPS

ಬೆಳ್ಳೂರು ಪಂಚಾಯಿತಿ ವ್ಯಾಪ್ತಿಯ ವಿವಿಧೆಡೆ ಕಾಡುಕೋಣಗಳ ಗುಂಪು-ಕೃಷಿಕರಲ್ಲಿ ಆತಂಕ

ಮುಳ್ಳೇರಿಯ: ಬೆಳ್ಳೂರು ಪಂಚಾಯಿತಿ ವ್ಯಾಪ್ತಿಯ ಕುಳದಪಾರೆ ಬೀರಮೂಲೆಯಲ್ಲಿ ಕಾಡುಕೋಣಗಳ ಗುಂಪು ಕಾಣಿಸಿಕೊಂಡಿದ್ದು, ಸಥಳೀಯರಲ್ಲಿ ಆತಂಕಕ್ಕೆ ಕಾರಣವಾಗಿದೆ. ಬೀರಮೂಲೆ ನಿವಾಸಿ, ಕೃಷಿಕ ಸೂರ್ಯನಾರಾಯಣ ಭಟ್ ಎಂಬವರ ತೆಂಗಿನ ತೋಟದಲ್ಲಿ ಕಾಡುಕೋಣಗಳ ದೊಡ್ಡ ಗುಂಪು ಕಂಡುಬಂದಿದೆ. ಕುಳದಪಾರೆ, ಈಂದುಮೂಲೆ ಹಾಗೂ ಕರ್ನಾಟಕದ ಗಡಿ ಪ್ರದೇಶದಲ್ಲಿ ಒಂದೆರಡು ಕಾಡುಕೋಣಗಳು ಆಗಾಗ ಕಾಣಿಸಿಕೊಳ್ಳುತಿದ್ದರೂ ಹತ್ತಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಕಾಣಿಸಿಕೊಂಡಿರುವುದು ಇದೇ ಮೊದಲು ಎಂದು ಸ್ಥಳೀಯರು ತಿಳಿಸಿದ್ದಾರೆಕಾಡುಕೋಣಗಳು ಕೃಷಿನಾಶಗೈದ ಬಗ್ಗೆ ವರದಿಯಾಗಿಲ್ಲ. 

ಅರಣ್ಯ ಗಡಿ ಪ್ರದೇಶಗಳಿಂದ ಕೃಷಿ ಭೂಮಿಗೆ ಕಾಡುಪ್ರಾಣಿಗಳು ದಾಳಿಯಿಡುವುದನ್ನು ತಡೆಯುವ ನಿಟ್ಟಿನಲ್ಲಿ ಕೃಷಿ ಇಲಾಖೆಯ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಂತೆ 37 ಲಕ್ಷ ರೂ. ವೆಚ್ಚದಲ್ಲಿ ಸೌರ ಬೇಲಿ ಹಾಕಲಾಗಿತ್ತು. ಇದಕ್ಕೆ ಬೆಳ್ಳೂರು ಪಂಚಾಯಿತಿ ವತಿಯಿಂದ 1.88 ಲಕ್ಷ ರೂ. ನೆರವು ನೀಡಲಾಗಿತ್ತು. ಬೆಳ್ಳೂರು ಪಂಚಾಯಿತಿಯ ಅರ್ತಿಕುಡ್ಲು ಪ್ರದೇಶದಿಂದ ಎಣ್ಣಕಜೆ ಪಂಚಾಯಿತಿಯ ದೇಶಮೂಲೆವರೆಗೆ ಸುಮಾರು 9 ಕಿ.ಮೀ ಮೀಟರ್ ವ್ಯಾಪ್ತಿಯಲ್ಲಿ ಸೌರ ವಿದ್ಯುತ್ ಬೇಲಿ ಅಳವಡಿಸಲಾಗಿದ್ದು, ಪ್ರಸಕ್ತ  ಈ ಬೇಲಿ ಸಂಪೂರ್ಣ ನಾಶವಾಗಿದ್ದು, ಕಾಡುಕೋಣ ಹಾಗೂ ಹಾಗೂ ಇತರ ಕಾಡುಪ್ರಾಣಿಗಳು ಗುಂಪಾಗಿ ಕೃಷಿ ಸ್ಥಳಕ್ಕೆ ದಾಳಿಯಿಡುತ್ತಿರುವುದಾಘಿ ನಾಗರಿಕರು ದೂರುತ್ತಾರೆ.  ಅರಣ್ಯ ಇಲಾಖೆ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಕಾಡುಪ್ರಾಣಿಗಳ ಉಪಟಳವನ್ನು ತಡೆಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries