HEALTH TIPS

ಯುಎಇ | ಇತ್ತಿಹಾದ್ ರೈಲು ಸೇವೆ ಆರಂಭ: ಮೊದಲ ದಿನವೇ ಭಾರಿ ಪ್ರತಿಕ್ರಿಯೆ

 ಅಬುಧಾಬಿ: ಯುಎಇಯ ರಾಷ್ಟ್ರೀಯ ಪ್ರಯಾಣಿಕರ ರೈಲು ಸೇವೆಯಾಗಿರುವ ಇತ್ತಿಹಾದ್ ರೈಲು ಮಂಗಳವಾರ ಅಧಿಕೃತವಾಗಿ ಆರಂಭಗೊಂಡಿದ್ದು, ಮೊದಲ ದಿನದ ಕಾರ್ಯಾಚರಣೆಗೂ ಮುನ್ನವೇ 10 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಮಾರಾಟವಾಗಿವೆ. 


ಬೆಳಿಗ್ಗೆ 5.34ಕ್ಕೆ ಫುಜೈರಾದಿಂದ ಹೊರಟ ಉದ್ಘಾಟನಾ ರೈಲು ನಿಗದಿತ ಸಮಯಕ್ಕಿಂತ ಮೊದಲೇ ಅಬುಧಾಬಿಯ ಮೊಹಮ್ಮದ್ ಬಿನ್ ಜಾಯೆದ್ ಸಿಟಿ ನಿಲ್ದಾಣವನ್ನು ತಲುಪಿತು.

ಇತ್ತಿಹಾದ್ ರೈಲು

ಮೊದಲ ದಿನ ಒಟ್ಟು ಆರು ರೈಲುಗಳು ಸಂಚರಿಸಲಿವೆ. ಮುಂದಿನ ಕೆಲವು ದಿನಗಳಲ್ಲಿ ಸಂಚರಿಸಲಿರುವ ಹೆಚ್ಚಿನ ರೈಲುಗಳ ಬಹುತೇಕ ಎಲ್ಲ ಆಸನಗಳು ಈಗಾಗಲೇ ಭರ್ತಿಯಾಗಿವೆ.

'ಫುಜೈರಾದಿಂದ ಮೊದಲ ರೈಲು ಹೊರಟ ಕ್ಷಣದಿಂದ ರಾಷ್ಟ್ರೀಯ ಕನಸೊಂದು ಜನರ ದೈನಂದಿನ ಬದುಕಿನ ಭಾಗವಾಗಿದೆ. ಇದು ಜನರನ್ನು, ಅವಕಾಶಗಳನ್ನು ಮತ್ತು ದೇಶದ ವಿವಿಧ ಭಾಗಗಳನ್ನು ಹೊಸ ರೀತಿಯಲ್ಲಿ ಸಂಪರ್ಕಿಸುತ್ತದೆ. ಇಂದಿನ ಪ್ರಯಾಣಿಕರು ಈ ಐತಿಹಾಸಿಕ ಆರಂಭದ ಸಾಕ್ಷಿಗಳಾಗಿದ್ದಾರೆ' ಎಂದು ಇತ್ತಿಹಾದ್ ರೈಲಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜ್ಜಾ ಅಲ್ ಸುವೈದಿ ಹೇಳಿದ್ದಾರೆ.

ಉದ್ಘಾಟನಾ ರೈಲಿನಲ್ಲಿ ಪ್ರಯಾಣಿಸಲು ಅನೇಕರು ವಿಶೇಷವಾಗಿ ಸಿದ್ಧತೆ ಮಾಡಿಕೊಂಡಿದ್ದರು. ದುಬೈ ನಿವಾಸಿ ಅಮೀನಾ ಸಲೀಂ ಅವರು ಸ್ನೇಹಿತ ಫಾರಿಸ್ ಜೊತೆ ರಾತ್ರಿ 3 ಗಂಟೆಗೆ ಫುಜೈರಾಗೆ ತೆರಳಿ, ಮೊದಲ ರೈಲಿನಲ್ಲಿ ಪ್ರಯಾಣಿಸಿದರು. ಈ ಐತಿಹಾಸಿಕ ಕ್ಷಣದ ಭಾಗವಾಗಲು ಅವರು ಕೆಲಸಕ್ಕೂ ರಜೆ ಪಡೆದಿದ್ದರು. ಅದೇ ದಿನ ಸಂಜೆ 6 ಗಂಟೆಯ ರೈಲಿನಲ್ಲಿ ಮರಳಿ ಫುಜೈರಾಗೆ ಬರಲು ಟಿಕೆಟ್ ಕಾಯ್ದಿರಿಸಿದ್ದರು.

ಈ ಪ್ರಯಾಣದಲ್ಲಿ ಹಜರ್ ಪರ್ವತಗಳ ನಡುವೆ ಮೂಡಿದ ಸೂರ್ಯೋದಯದ ದೃಶ್ಯ ತಮ್ಮ ಜೀವನದ ಮರೆಯಲಾಗದ ಅನುಭವ ಎಂದು ಹಲವರು ಹೇಳಿದ್ದಾರೆ.

ಹೊಸ ರೈಲಿನಲ್ಲಿ ಟಿಕೆಟ್ ಕಾಯ್ದಿರಿಸಲು ಪಟ್ಟ ಸಾಹಸ, ರೈಲಿನಲ್ಲಿರುವ ಸೌಲಭ್ಯಗಳು ಹಾಗೂ ವಿನ್ಯಾಸದ ಬಗ್ಗೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. 








ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries