ಬದಿಯಡ್ಕ: ದೇಶೀಯ ಸೇವಾ ಭಾರತಿ, ಬದಿಯಡ್ಕ ಘಟಕದ ಕಾರುಣ್ಯ ಸೇವಾ ಕಾರ್ಯಗಳಿಗಾಗಿ ಸೇವಾ ಶಕ್ತಿ ಫೌಂಡೇಷನ್ ಸಂಸ್ಥೆ ಮತ್ತು ಶಾಂತಿಮಠಂನ ಕೊಡುಗೆ, ಸುಕೃತಂ ಪ್ಯಾಲೀಯೇಟಿವ್ ಕೇರ್ ವಾಹನದ ಲೋಕಾರ್ಪಣೆ ಕಾರ್ಯಕ್ರಮ ಕನ್ನೆಪ್ಪಾಡಿ ಆಶ್ರಯ ಆಶ್ರಮದಲ್ಲಿ ಜರಗಿತು. ಉದ್ಯಮಿ ಗೋಪಾಲಕೃಷ್ಣ ಪೈ ಬಿ. ವಾಹನಕ್ಕೆ ಚಾಲನೆ ನೀಡಿ, ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಬದಿಯಡ್ಕ ಪಂ. ಅಧ್ಯಕ್ಷ ಶಂಕರ.ಡಿ ಮುಖ್ಯ ಅತಿಥಿಯÁಗಿ ಮಾತನಾಡಿ, ಸಮಾಜ ಸೇವೆಗೆ ಮತ್ತೊಂದು ಹೆಸರಾಗಿರುವ ಸೇವಾ ಭಾರತಿಯ ಈ ಸಾರ್ವಜನಿಕ ಹಿತಚಿಂತನಾ ಕಾರ್ಯ ಕ್ರಮದಲ್ಲಿ ಪಾಲ್ಗೊಳ್ಳುತ್ತಿರುವುದಕ್ಕೆ ಹೆಮ್ಮೆ ಎನಿಸುತ್ತಿದೆ. ಯಾವುದೇ ಸರಕಾರ ಅಥವಾ ಪಂಚಾಯತ್ ಆಡಳಿತದಿಂದ ಮಾತ್ರ ಸಮಾಜದ ಪ್ರತಿಯೊಬ್ಬ ನಾಗರಿಕನ ಕಷ್ಟಗಳಿಗೂ ತಕ್ಷಣ ಸ್ಪಂದಿಸುವುದು ಸಾಧ್ಯವಾಗದೇ ಇರಬಹುದು. ಅಂತಹ ಸಂದರ್ಭಗಳಲ್ಲಿ ಸರಕಾರದ ಕೈಗನ್ನಡಿಯಾಗಿ, ಸಮಾಜದ ಕೊನೆಯ ವ್ಯಕ್ತಿಯ ಕಣ್ಣೀರನ್ನು ಒರೆಸಲು ಧಾವಿಸಿ ಬರುವುದು ಸೇವಾ ಭಾರತಿಯಂತಹ ಸ್ವಯಂಸೇವಾ ಸಂಸ್ಥೆಗಳು. ಕೋವಿಡ್ ದಿನಗಳಲ್ಲಿ ಹಾಗೂ ಇತ್ತೀಚಿನ ಪ್ರಕೃತಿ ವಿಕೋಪಗಳ ಸಮಯದಲ್ಲಿ ಸೇವಾಭಾರತಿ ತೋರಿದ ಸಮಾಜಮುಖಿ ಕಾರ್ಯ ನಮಗೆಲ್ಲರಿಗೂ ಪ್ರೇರಣೆಯಾಗಿದೆ.
ಸಮಾಜದ ಬಡವರ, ಅಸಹಾಯಕರ ಮತ್ತು ಕೃಷಿಕರ ಏಳಿಗೆಗಾಗಿ ಶ್ರಮಿಸುವ ಯಾವುದೇ ಒಳ್ಳೆಯ ಕೆಲಸಗಳಿಗೆ ಪಂಚಾಯತ್ ಆಡಳಿತ ಪಕ್ಷಾತೀತವಾಗಿ ಬೆಂಬಲ ನೀಡುತ್ತದೆ ಎಂದು ಶಂಕರ .ಡಿ ತಿಳಿಸಿದರು. ಕಾಸರಗೋಡು ಜಿಲ್ಲಾ ಸೇವಾ ಭಾರತಿ ಅಧ್ಯಕ್ಷ ಎಂ.ಟಿ. ದಿನೇಶ್ ಸುಕೃತಂ ಯೋಜನೆಯಿಂದ ಪ್ರಯೋಜನವಾಗಲಿ ಎಂದು ಆಶಿಸಿದರು. ಸುಕೃತಂ ಯೋಜನೆಯ ರಾಜ್ಯ ಕೋರ್ಡಿನೇಟರ್ ಅಶ್ವಂತ್ ಸಭಿಕರಿಗೆ ಯೋಜನೆಯನ್ನು ವಿವರಿಸಿದರು. ರಾ.ಸ್ವ.ಸೇ.ಸಂಘ ಬದಿಯಡ್ಕ ಖಂಡ್ ಸಂಘಚಾಲಕ್ ರಮೇಶ್ ಕಳೇರಿ ಶುಭಹಾರೈಸಿದರು. ಬದಿಯಡ್ಕ ಯೂನಿಟ್ ಅಧ್ಯಕ್ಷ ಸದಾಶಿವ ಮಾಸ್ತರ್ ಬೇಳ ಅಧ್ಯಕ್ಷತೆ ವಹಿಸಿದರು. ವಿವಿಧ ಪರಿವಾರ ಸಂಘಟನೆಗಳ ಪ್ರಮುಖರು ಭಾಗವಹಿಸಿದರು. ಕಾಸರಗೋಡು ದೇಶೀಯ ಸೇವಾ ಭಾರತಿಯ ಕಾರ್ಯದರ್ಶಿ ಪ್ರತೀಕ್ ಆಳ್ವ ಪೆರಡಾಲ ಉಪಸ್ಥಿತರಿದ್ದರು. ಉದನೇಶ್ವರ ಬದಿಯಡ್ಕ ಪ್ರಾರ್ಥನೆ ಹಾಡಿದರು, ರವೀಶ್ ಕುಮಾರ್.ಸಿ.ಎಚ್. ಐಕ್ಯಮಂತ್ರ ಪಠಿಸಿದರು. ಕಾರ್ಯದರ್ಶಿ ಅಡ್ವ. ಗಣೇಶ್.ಬಿ ಸ್ವಾಗತ ನೀಡಿ, ಕೋಶಾದಿsಕಾರಿ ನರೇಂದ್ರ.ಬಿ.ಎನ್ ವಂದಿಸಿದರು. ಜತೆಕಾರ್ಯದರ್ಶಿ ಗುರುಪ್ರಸಾದ್ ರೈ ನಿರೂಪಿಸಿದರು.

