ಮಂಜೇಶ್ವರ: ಹೊಸಂಗಡಿ ಬಳಿಯ ಮಜಿಬೈಲು ನಿವಾಸಿ ಕೇಶವ ಹಾಗೂ ಲಲಿತಾ ದಂಪತಿಗಳ ಹೆಂಚು ಹಾಸಿದ ಮನೆಗೆ ಇತ್ತೀಚೆಗೆ ಸುರಿದ ಭಾರೀ ಮಳೆಯಿಂದಾಗಿ ಮನೆಯ ಮೇಲ್ಛಾವಣಿಗೆ ಮರ ಬಿದ್ದು, ಮನೆಗೆ ಹಾನಿಯುಂಟಾಗಿದ್ದು, ಈ ಸಂಕಷ್ಟದ ಸಂದರ್ಭದಲ್ಲಿ ವಿಷಯವನ್ನರಿತ ಕಲ್ಕಿ ಮಂಜೇಶ್ವರ ತಂಡವು ತಕ್ಷಣ ಸ್ಪಂದಿಸಿ ಮನೆ ದುರಸ್ತಿ ಕಾರ್ಯಕ್ಕೆ ನೆರವಾಗಿ ಮಾನವೀಯತೆ ಮೆರೆದಿದೆ.
ಸುಮಾರು 70,000 ವೆಚ್ಚದಲ್ಲಿ ದುರಸ್ತಿ ಕಾರ್ಯ ನೆರವೇರಿದ್ದು, ಈ ಮಹತ್ಕಾರ್ಯಕ್ಕೆ ಟೀಮ್ ನ ಸಹೃದಯಿ ದಾನಿಗಳು ಹಾಗೂ ಚಕ್ರವರ್ತಿ ಹೊಸಂಗಡಿ ಸಂಸ್ಥೆ ಸಹಕರಿಸಿದ್ದು, ಇವರೆಲ್ಲರಿಗೂ ಟೀಮ್ ಕಲ್ಕಿ ಹೃತ್ಪೂರ್ವಕ ಕೃತಜ್ಞತೆಗಳನ್ನ ಸಲ್ಲಿಸಿದ್ದಾರೆ. ಸಹಾಯ ಕಾರ್ಯದಲ್ಲಿ ಉಪಸ್ಥಿತರಿದ್ದು ಪ್ರೋತ್ಸಾಹ ನೀಡಿದ ಯುವ ನಾಯಕ ಹಾಗೂ ಚಲನಚಿತ್ರ ನಟ ಭವೀಶ್ ಶೆಟ್ಟಿ ಎಕ್ಕೂರು, ಮಂಜೇಶ್ವರ ಗ್ರಾಮ ಪಂಚಾಯತ್ ಮಾಜಿ ಸದಸ್ಯ ಹರೀಶ್ಚಂದ್ರ ಮಂಜೇಶ್ವರ, ಟೀಮ್ ಕಲ್ಕಿ ಮುಖ್ಯಸ್ಥರಾದ ಅಖಿಲ್ ಶೆಟ್ಟಿ, ಟೀಮ್ ಕಲ್ಕಿ ಮಂಜೇಶ್ವರ ಸಂಸ್ಥಾಪಕರಾದ
ಅರುಣ್ ಕುಮಾರ್ ದುರ್ಗಿಪಳ್ಳ, ಟೀಮ್ ಕಲ್ಕಿ ಅಧ್ಯಕ್ಷರಾದ ರಂಜಿತ್ ಕುಮಾರ್, ಚಕ್ರವರ್ತಿ ಹೊಸಂಗಡಿ ಸಂಸ್ಥೆಯ ಉಪಾಧ್ಯಕ್ಷರಾದ ಸುರೇಶ್ ಗಾಣಿಂಜಾಲ್, ಟೀಮ್ ಕಲ್ಕಿ ಪ್ರಮುಖ ಅಕ್ಷಯ್ ಕುಮಾರ್ ಮೊದಲಾದವರು ಈ ವೇಳೆ ಉಪಸ್ಥಿತರಿದ್ದರು.



