ಕುಂಬಳೆ: ತಿರುವನಂತಪುರಂ ಕಾರ್ಪೋರೇಷನ್ ಮೇಯರ್ ಮತ್ತು ಇತರ ಬಿಜೆಪಿ ಕೌನ್ಸಿಲರ್ ಗಳ ಮೇಲಿನ ಸಿಪಿಎಂ ದಾಳಿಯನ್ನು ಖಂಡಿಸಿ, ಬಿಜೆಪಿ ಕುಂಬಳೆ ಪಂಚಾಯತಿ ಸಮಿತಿ ಪ್ರತಿಭಟನಾ ಮೆರವಣಿಗೆ ನಡೆಸಿತು. ಮೆರವಣಿಗೆಯನ್ನು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮುರಳಿಧರ್ ಯಾದವ್ ಉದ್ಘಾಟಿಸಿ ಸಿಪಿಎಂ ಮತ್ತು ಡಿ ವೈ ಎಫ್ ಐ ನಡೆಸಿದ ಭ್ರಷ್ಟಾಚಾರ ಹೊರಗೆ ಬರುವ ಹೆದರಿಕೆಯಿಂದ ಮತ್ತು ಮುಂದಿನ ದಿನಗಳಲ್ಲಿ ವಿವಿ ರಾಜೇಶ್ ಇನ್ನೂ ಹೆಚ್ಚಿನ ಜನಪರ ಕಾರ್ಯಕ್ರಮವನ್ನು ಹಮ್ಮಿಕೊಂಡಲ್ಲಿ ಇತರ ಪಕ್ಷಗಳಿಗೆ ಉಳಿಗಾಲವಿಲ್ಲ ಎಂಬ ಭಯದಿಂದ ಇಂತಹ ದುಷ್ಕøತ್ಯಗಳಿಗೆ ಇಳಿದಿದ್ದಾರೆ. ಇಂತಹ ನೀಚ ಕೆಲಸಕ್ಕೆ ಬಿಜೆಪಿ ಯಾವತ್ತೂ ಹೆದರುವುದಿಲ್ಲ. ಕೇಂದ್ರದಲ್ಲಿ ಮೋದಿ ಸರ್ಕಾರ ಇರುವುದು ಎಂಬುದು ನೆನಪಿರಲಿ ಎಂದು ಎಚ್ಚರಿಸಿದರು.
ಕುಂಬಳೆ ಪಂಚಾಯತಿ ಬಿಜೆಪಿ ವಲಯ ಅಧ್ಯಕ್ಷರುಗಳಾದ ಸುಜಿತ್ ರೈ, ಶಿವಪ್ರಸಾದ್ ರೈ, ಉಪಾಧ್ಯಕ್ಷ ರಾಜೇಶ್ ರೈ ಉಜಾರು, ಕಾರ್ಯದರ್ಶಿ ವಿವೇಕ್, ಮಂಡಲ ಉಪಾಧ್ಯಕ್ಷ ವಿಕ್ರಂ ಪೈ, ಓಬಿಸಿ ಕಾರ್ಯದರ್ಶಿ ದಯಾನಂದ, ಜನಪ್ರತಿನಿಧಿಗಳಾದ ರಮೇಶ್ ಭಟ್, ಅಜಿತ್, ಕಾಂಚಾರ ಮತ್ತು ವಿದ್ಯಾ ಪೈ, ಶ್ರೀಮತಿ ನಾಯ್ಕಾಪು, ಸತೀಶ, ಜಗದೀಶ್ ಪೇರಾಲ್, ಜಯರಾಮ, ಬಿಎಂಎಸ್ ಅಧ್ಯಕ್ಷ ದಿವಾಕರ್ ರೈ, ಉಪಾಧ್ಯಕ್ಷ ಬೋಜರಾಜ, ಚಂದ್ರಶೇಖರ ಮತ್ತಿತರರು ಭಾಗವಹಿಸಿದ್ದರು. ವಿನೋದ್ ಕಡಪ್ಪುರ ಸ್ವಾಗತಿಸಿ, ಶಶಿ ವಂದಿಸಿದರು.

.jpg)
.jpg)
