HEALTH TIPS

ಕಾಳ್ಯಂಗಾಡು ಕ್ಷೇತ್ರ ತಂತ್ರಿವರ್ಯರಿಗೆ ಗೌರವಾರ್ಪಣೆ

ಕಾಸರಗೋಡು: ಕಾಳ್ಯಂಗಾಡು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ಕ್ಷೇತ್ರ ತಂತ್ರಿವರ್ಯ  ಶ್ರೀಕೃಷ್ಣ ಗುರೂಜಿ ಅವರನ್ನು ಗೌರವ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು. ದೃಢ ಕಲಶ ಸಂದರ್ಭ ನಡೆದ ಸಮಾರಂಭದಲ್ಲಿ ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಮಾತೃ ಸಮಿತಿ ವತಿಯಿಂದ ಅಭಿನಂದನೆ ಆಯೋಜಿಸಲಾಯಿತು. 


ಈ ಸಂದರ್ಭ ಶ್ರೀಕೃಷ್ಣ ಗುರೂಜಿ ಆಶೀರ್ವಚನ ನಿಡಿ, ಒಂದು ಕ್ಷೇತ್ರದ ಅಭಿವೃದ್ಧಿ ನಾಡಿನ ಪ್ರಗತಿಗೆ ಪೂರಕವಾಗುವುದು. ದೇವಾಲಯಗಳ ಉನ್ನತಿಗಾಗಿ ಭಕ್ತರು ಸಲ್ಲಿಸುವ ಸೇವೆಯಿಂದ ಅವರ ಇಷ್ಟಾರ್ಥ ಸಿದ್ಧಿ ಆಗುವಲ್ಲಿ ಯಾವುದೇ ಸಂಶಯ ಇಲ್ಲ ಎಂದು vತಿಳಿಸಿದರು.  

ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಹಾಗೂ ಬ್ರಹ್ಮಕಲಶ ಸಮಿತಿ ಅಧ್ಯಕ್ಷ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ ಅಧ್ಯಕ್ಷತೆ ವಹಿಸಿದರು. ಮೊಕ್ತೇಸರ ಅಚ್ಯುತ ಕಾಳ್ಯಂಗಾಡು, ಧರ್ಮದರ್ಶಿ ನಾರಾಯಣ ಕಾಳ್ಯಂಗಾಡು, ಬ್ರಹ್ಮಕಲಶ ಗೌರವ ಸಲಹೆಗಾರ  ಗೋಪಾಲಕೃಷ್ಣ ವಾಂತಿಚ್ಚಾಲ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಮೋಹನ್ ರಾಜ್ ಕೊರಕ್ಕೋಡು, ಪ್ರಧಾನ ಕಾರ್ಯದರ್ಶಿ ಹರೀಶ್ ಕೆ.ಆರ್. ಬ್ರಹ್ಮಕಲಶ ಸಮಿತಿ ಕಾರ್ಯದರ್ಶಿ ದಯಾನಂದ ಕೊಳ್ಕೆಬೈಲು, ಜತೆ ಕೋಶಾಧಿಕಾರಿ ಪುನೀತ್ ಕೆಮ್ಮಣ್ಣು, ಜಗದೀಶ್ ಕೂಡ್ಲು, ಮಹಿಳಾ ಸಮಿತಿ ಕಾರ್ಯದರ್ಶಿ ಹರ್ಷಿತಾ, ಮಾತೃ ಸಮಿತಿ ಅಧ್ಯಕ್ಷೆ ರಾಧಿಕಾ ರಂಜಿತ್, ಕಾರ್ಯದರ್ಶಿ ದೀಪಾ ರಾಜೇಶ್, ಮಹಾಲಿಂಗ ಪಾತ್ರಿ ಅವರ ಪತ್ನಿ ಪುಷ್ಪಲತಾ ಮೊದಲಾದವರು ಉಪಸ್ಥಿತರಿದ್ದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries