ಬದಿಯಡ್ಕ: ಏತಡ್ಕ ಶ್ರೀ ಸದಾಶಿವ ದೇವಸ್ಥಾನದಲ್ಲಿ ಪ್ರತಿವರ್ಷ ಆಚರಿಸಲ್ಪಡುವ ವಿಶಿಷ್ಟ ಆಚರಣೆಯಾದ ಹಲಸಿನ ಅಪ್ಪಸೇವೆ ಜುಲೈ 11 ರಂದು (ಶನಿವಾರ) ವಿಶೇಷ ಶ್ರದ್ಧಾಭಕ್ತಿಗಳೊಂದಿಗೆ ಬಲಿವಾಡು ಕೂಟ ಸೇವೆ ಸಹಿತ ನಡೆಯಲಿದೆ.
ದೇವಸ್ಥಾನದ ಸಂಪ್ರದಾಯದಂತೆ ನಡೆಯುವ ಈ ಸೇವೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಶ್ರೀ ಸದಾಶಿವ ದೇವರ ಕೃಪೆಗೆ ಪಾತ್ರರಾಗುವಂತೆ ದೇವಸ್ಥಾನ ಆಡಳಿತ ಮಂಡಳಿ ಮನವಿ ಮಾಡಿದೆ.
ದೇವಸ್ಥಾನದ ಆಡಳಿತ ಮಂಡಳಿ ಭಕ್ತರು ತಮ್ಮ ಕುಟುಂಬದ ಸುಖ-ಶಾಂತಿ, ಆರೋಗ್ಯ ಹಾಗೂ ಇಷ್ಟಾರ್ಥ ಸಿದ್ಧಿಗಾಗಿ ಈ ವಿಶೇಷ ಸೇವೆಯಲ್ಲಿ ಭಾಗವಹಿಸಿ ದೇವರ ಅನುಗ್ರಹಕ್ಕೆ ಪಾತ್ರರಾಗುವಂತೆ ವಿನಂತಿಸಿಸಲಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ: 94958 59552 ಸಂಪರ್ಕಿಸಲು ಸೂಚಿಸಲಾಗಿದೆ.



