ಬೂನಿಯಾ: ಕಾಂಗೋದಲ್ಲಿ ಹರಡಿರುವ ಎಬೋಲಾ ಸಾಂಕ್ರಾಮಿಕ ರೋಗಕ್ಕೆ ಕನಿಷ್ಠ 930 ಜನರು ಮೃತಪಟ್ಟಿದ್ದಾರೆ ಎಂದು ದೇಶದ ಆರೋಗ್ಯ ಸಚಿವಾಲಯ ತಿಳಿಸಿದೆ.
ಶನಿವಾರದವರೆಗೆ ದೃಢಪಟ್ಟ ಒಟ್ಟು 2,344 ಪ್ರಕರಣಗಳಲ್ಲಿ ಕನಿಷ್ಠ 930 ಜನರು ಮೃತಪಟ್ಟಿದ್ದಾರೆ. ಕಳೆದ 24 ಗಂಟೆಗಳಲ್ಲಿ 37 ಹೊಸ ಸಾವುಗಳು ದಾಖಲಾಗಿದ್ದು, ಇದು ಒಂದೇ ದಿನದಲ್ಲಿ ವರದಿಯಾದ ಅತಿ ಹೆಚ್ಚು ಸಾವುಗಳಲ್ಲಿ ಒಂದಾಗಿದೆ.
ವೈರಸ್ ಸೋಂಕಿಗೆ ಒಳಗಾಗಿದ್ದ ಕನಿಷ್ಠ 36 ಆರೋಗ್ಯ ಕಾರ್ಯಕರ್ತರು ಮೃತಪಟ್ಟಿದ್ದಾರೆ. ಪ್ರಸ್ತುತ 724 ರೋಗಿಗಳು ಐಸೊಲೇಷನ್ ಮತ್ತು ಆಸ್ಪತ್ರೆಗಳಲ್ಲಿದ್ದು, ಪೀಡಿತ ಪ್ರದೇಶಗಳಲ್ಲಿ ಪರಿಹಾರ ಮತ್ತು ವೈದ್ಯಕೀಯ ಪ್ರಯತ್ನಗಳನ್ನು ತೀವ್ರಗೊಳಿಸಲಾಗುತ್ತಿದೆ ಎಂದು ಆರೋಗ್ಯ ಸಚಿವಾಲಯ ಸೋಮವಾರ ತಿಳಿಸಿದೆ.

