HEALTH TIPS

`ಇಸ್ರೇಲ್ ಹೊರತುಪಡಿಸಿ' ಎಂಬ ವಾಕ್ಯದೊಂದಿಗೆ ಹೊಸ ಪಾಸ್‍ಪೋರ್ಟ್ ವಿತರಿಸಲು ಬಾಂಗ್ಲಾದೇಶ ಕ್ರಮ

ಢಾಕಾ: ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಸರಕಾರ ತೆಗೆದುಹಾಕಿದ್ದ `ಇಸ್ರೇಲ್ ಹೊರತುಪಡಿಸಿ' ಎಂಬ ವಾಕ್ಯವನ್ನು ಮತ್ತೆ ಸೇರಿಸಲು ಆದೇಶಿಸಿದ ನಂತರ, ಈ ತಿಂಗಳಿನಿಂದ ಹೊಸ ಪಾಸ್‍ಪೋರ್ಟ್‍ಗಳ ಮುದ್ರಣ ಪ್ರಾರಂಭಿಸಿ ಅಕ್ಟೋಬರ್ ವೇಳೆಗೆ ವಿತರಿಸಲಾಗುವುದು ಎಂದು ಬಾಂಗ್ಲಾದೇಶದ ಗೃಹ ಸಚಿವಾಲಯ ಸೋಮವಾರ ತಿಳಿಸಿದೆ. 


2021ರವರೆಗೆ ಬಾಂಗ್ಲಾದೇಶದ ಪಾಸ್‍ಪೋರ್ಟ್‍ಗಳಲ್ಲಿ `ಈ ಪಾಸ್‍ಪೋರ್ಟ್ ಇಸ್ರೇಲ್ ಹೊರತುಪಡಿಸಿ ಜಗತ್ತಿನ ಎಲ್ಲಾ ದೇಶಗಳಿಗೂ ಮಾನ್ಯವಾಗಿದೆ' ಎಂಬ ವಾಕ್ಯವಿತ್ತು. ಆದರೆ ಹಸೀನಾ ಸರಕಾರ ಯಾವುದೇ ಸಾರ್ವಜನಿಕ ಸೂಚನೆಯಿಲ್ಲದೆ ಈ ವಾಕ್ಯವನ್ನು ತೆಗೆದುಹಾಕಿತ್ತು. 2024ರಲ್ಲಿ ನಡೆದ ಸಾರ್ವಜನಿಕ ದಂಗೆಯಿಂದಾಗಿ ಹಸೀನಾ ಅವರ ಸರಕಾರ ಪತನಗೊಂಡು, ತಾತ್ಕಾಲಿಕ ಸಚಿವ ಸಂಪುಟ ಅಧಿಕಾರಕ್ಕೆ ಬಂದಾಗ, ಇಸ್ರೇಲ್‍ನೊಂದಿಗೆ ಯಾವುದೇ ರಾಜತಾಂತ್ರಿಕ ಬಾಂಧವ್ಯ ಹೊಂದಿಲ್ಲದ ಈ ದೇಶದಲ್ಲಿ ಸಾರ್ವಜನಿಕ ಒತ್ತಡ ಹೆಚ್ಚಾಯಿತು. ಇದರ ಪರಿಣಾಮವಾಗಿ ಈ ನಿಯಮವನ್ನು ಮತ್ತೆ ಜಾರಿಗೆ ತರುವುದಾಗಿ ಅಧಿಕೃತವಾಗಿ ಘೋಷಿಸಲಾಯಿತು.

ಪಾಸ್‍ಪೋರ್ಟ್‍ನಲ್ಲಿನ ಈ ಬದಲಾವಣೆಯು ಸರಕಾರದ ರಾಜಕೀಯ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಫೆಲೆಸ್ತೀನ್ ಜನರೊಂದಿಗೆ ನಮ್ಮ ಒಗ್ಗಟ್ಟನ್ನು ವ್ಯಕ್ತಪಡಿಸುತ್ತದೆ ಮತ್ತು ನಾವು ಫೆಲೆಸ್ತೀನ್ ಜನರ ಪರವಾಗಿ ನಿಲ್ಲುತ್ತೇವೆ ಎಂಬುದನ್ನು ಜಗತ್ತಿಗೆ ತಿಳಿಸುತ್ತದೆ. ನಮ್ಮ ಪಾಸ್‍ಪೋರ್ಟ್‍ಗಳ ಕುರಿತಾದ ಈ ಹೊಸ ನಿರ್ಧಾರವು ಬಾಂಗ್ಲಾದೇಶದ ಜನರ ಆಕಾಂಕ್ಷೆಗಳನ್ನು ಎತ್ತಿಹಿಡಿಯುತ್ತದೆ' ಎಂದು ಗೃಹ ಸಚಿವಾಲಯ ತಿಳಿಸಿದೆ. 



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries