ಅಯೋಧ್ಯೆ/ ನವದೆಹಲಿ (PTI): 'ಮಂದಿರದ ಟ್ರಸ್ಟ್‌ನ ಕಾರ್ಯಕಲಾಪಗಳಲ್ಲಿ ಅಥವಾ ಮುಖ್ಯ ಕಾರ್ಯನಿರ್ವಹಣಾಧಿಕಾರಿಯ (ಸಿಇಒ) ಆಡಳಿತದಲ್ಲಿ ಸರ್ಕಾರದ ಮಧ್ಯಪ್ರವೇಶ ಇರುವುದಿಲ್ಲ. ರಾಮಭಕ್ತರ ನಂಬಿಕೆಗೆ ಚ್ಯುತಿ ಬರದಂತೆ ನೋಡಿಕೊಳ್ಳುವುದೇ ಸಿಇಒನ ಪ್ರಾಥಮಿಕ ಜವಾಬ್ದಾರಿಯಾಗಿರಲಿದೆ' ಎಂದು ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ ನೃಪೇಂದ್ರ ಮಿಶ್ರಾ ಹೇಳಿದರು.
ಶುಕ್ರವಾರದಿಂದ ಇಲ್ಲಿಯೇ ಇರುವ ಮಿಶ್ರಾ ಅವರು ವಿವಿಧ ವಿಭಾಗಗಳೊಂದಿಗೆ ಸಭೆ ನಡೆಸಿದರು. ಭಾನುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, 'ಮಂದಿರಕ್ಕೆ ಯಾರು ಸಿಇಒ ಆಗಬೇಕು ಎನ್ನುವುದನ್ನು ಟ್ರಸ್ಟ್ ನಿರ್ಧರಿಸುತ್ತದೆ. ಜೊತೆಗೆ, ಆ ಅಧಿಕಾರಿಯ ಜವಾಬ್ದಾರಿಗಳೇನು? ಅಧಿಕಾರ ವ್ಯಾಪ್ತಿ ಏನು? ಎಂಬುದನ್ನೂ ಟ್ರಸ್ಟ್ ನಿಗದಿ ಮಾಡಲಿದೆ' ಎಂದರು.
'ಹಣಕಾಸಿನ ವ್ಯವಹಾರವನ್ನೂ ನೂತನ ಸಿಇಒ ನೋಡಿಕೊಳ್ಳುತ್ತಾರೆ. ಇಲ್ಲಿಗೆ ಬರುವ ಭಕ್ತರಿಗೆ ಯಾವುದೇ ರೀತಿಯಲ್ಲಿಯೂ ಅನನುಕೂಲ ಆಗದಂತೆ ನೋಡಿಕೊಳ್ಳುವುದು, ಸಿಬ್ಬಂದಿ ನೇಮಕ ಎಲ್ಲವೂ ಸಿಇಒ ಜವಾಬ್ದಾರಿಯಾಗಿರುತ್ತದೆ. ಆದರೆ, ಈ ಎಲ್ಲವೂ ಟ್ರಸ್ಟ್‌ನ ಮೇಲ್ವಿಚಾರಣೆಯಲ್ಲಿಯೇ ನಡೆಯಲಿದೆ' ಎಂದರು.
ನಿರ್ಮಾಣ ವೆಚ್ಚ ₹1,800 ಕೋಟಿ: 'ಮಂದಿರ ಹಾಗೂ ರಾಮಕಥಾ ಮ್ಯೂಸಿಯಂ ನಿರ್ಮಾಣಕ್ಕಾಗಿ ಇಂತಿಷ್ಟೇ ಖರ್ಚಾಗುತ್ತದೆ ಎನ್ನಲು ಸಾಧ್ಯವಿಲ್ಲ. ಆದರೆ, ಸುಮಾರು ₹1,600 ಕೋಟಿಯಿಂದ ₹1,800 ಕೋಟಿವರೆಗೂ ವೆಚ್ಚವಾಗಲಿದೆ. ಮ್ಯೂಸಿಯಂಗಾಗಿ ₹100 ಕೋಟಿ ಖರ್ಚಾಗುತ್ತದೆ. ಆಗಸ್ಟ್ 15ರ ಒಳಗೆ ಮಂದಿರ ನಿರ್ಮಾಣ ಪೂರ್ಣಗೊಳ್ಳಲಿದೆ' ಎಂದು ಮಿಶ್ರಾ ತಿಳಿಸಿದರು.
'ಮೌನವೇಕೆ: ದೇಶ ಕೇಳುತ್ತಿದೆ'

ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ನಿಮ್ಮ ಅನುಭವ ಹೇಗಿತ್ತು ಎಂದು ಇಲ್ಲಿಗೆ ಬರುವ ಭಕ್ತರನ್ನು ಕೇಳಿನೋಡಿ, ರಾಮನ ಕುರಿತ ಅವರ ಭಕ್ತಿಯಲ್ಲಿ ಬದಲಾವಣೆಯಾಗಿಲ್ಲ, ಇಲ್ಲಿನ ವ್ಯವಸ್ಥೆ ಕುರಿತೂ ದೂರುಗಳಿಲ್ಲ
ನೃಪೇಂದ್ರ ಮಿಶ್ರಾ, ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ
ಪ್ರಧಾನಿ ಅವರೆ, ದೇಶ ಕೇಳಬಯಸುತ್ತಿದೆ: ನೀವು ಯಾಕೆ ಮೌನವಾಗಿದ್ದೀರಿ? ಮೋದಿ ಅವರ ಆಶ್ರಯದಲ್ಲಿಯೇ ಇಂಥ ಯೋಜಿತ ನಂಬಿಕೆದ್ರೋಹ ಎಸಗಲಾಗಿತ್ತು ಎನ್ನುವ ಕಾರಣಕ್ಕಾಗಿ ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನ್ನು ಈ ದೇಶ ಎಂದಿಗೂ ಕ್ಷಮಿಸುವುದಿಲ್ಲ. ಕಳ್ಳತನವು ಕೆಲವೇ ಸಿಬ್ಬಂದಿಯಿಂದ ನಡೆದಿದೆ ಎನ್ನಲಾಗದು. ರಾಮನಿಗೆ ದ್ರೋಹ ಬಗೆದು ನಿಜವಾದ ತಪಿತಸ್ಥರಿಗೆ ಸರ್ಕಾರ ರಕ್ಷಣೆ ನೀಡುತ್ತಿದೆ. ಎಸ್‌ಐಟಿ, ಎಫ್‌ಐಆರ್ ಎಲ್ಲವೂ ದೇಶದ ಜನರ ಕಣ್ಣೋರೆಸುವ ತಂತ್ರವಷ್ಟೇ
ಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ನಿಮ್ಮ ಅನುಭವ ಹೇಗಿತ್ತು ಎಂದು ಇಲ್ಲಿಗೆ ಬರುವ ಭಕ್ತರನ್ನು ಕೇಳಿನೋಡಿ, ರಾಮನ ಕುರಿತ ಅವರ ಭಕ್ತಿಯಲ್ಲಿ ಬದಲಾವಣೆಯಾಗಿಲ್ಲ, ಇಲ್ಲಿನ ವ್ಯವಸ್ಥೆ ಕುರಿತೂ ದೂರುಗಳಿಲ್ಲ
ನೃಪೇಂದ್ರ ಮಿಶ್ರಾ, ರಾಮ ಮಂದಿರ ನಿರ್ಮಾಣ ಸಮಿತಿಯ ಮುಖ್ಯಸ್ಥ.