HEALTH TIPS

ಶಾಲೆಗಳು ಮಕ್ಕಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿಸಬೇಕು: ಗೋಯಲ್

ಮುಂಬೈ: 'ಭಾರತದ ಶಾಲೆಗಳು ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಮಾತ್ರ ಮಕ್ಕಳನ್ನು ಸಜ್ಜುಗೊಳಿಸಬಾರದು, ಬದಲಾಗಿ ಸಮಸ್ಯೆಗಳನ್ನು ಪರಿಹರಿಸುವವರಾಗಿ, ಅನ್ವೇಷಕರಾಗಿ, ಸಂಶೋಧಕರಾಗಿ ಮತ್ತು ದೇಶವನ್ನು ವಿಕಸಿತ ಭಾರತ 2047ರ ಕಲ್ಪನೆ ಕಡೆಗೆ ಮುನ್ನಡೆಸುವ ಜವಾಬ್ದಾರಿಯುತ ನಾಗರಿಕರನ್ನಾಗಿ ರೂಪುಗೊಳಿಸಬೇಕು' ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯೂಷ್‌ ಗೋಯಲ್ ಅವರು ಭಾನುವಾರ ಹೇಳಿದರು.
'ಬಂಟರ ಸಂಘ ಮುಂಬೈ' ನಿರ್ಮಿಸಿರುವ ಶಶಿಕಿರಣ್ ಶೆಟ್ಟಿ ಶಿಕ್ಷಣ ಸಂಸ್ಥೆಗಳ ಉದ್ಘಾಟನೆ ಮತ್ತು ದಾನಿಗಳಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, 'ಮಕ್ಕಳು ಕೃತಕ ಬುದ್ಧಿಮತ್ತೆ ಮತ್ತು ರೋಬೊಟಿಕ್ಸ್‌ನಂಥ ತಂತ್ರಜ್ಞಾನಗಳ ಬಗ್ಗೆ ಗಮನಹರಿಸಬೇಕು. ಇದರ ಜೊತೆಗೆ ಭಾರತದ ಶ್ರೀಮಂತ ಸಂಸ್ಕೃತಿ, ಇತಿಹಾಸ ಮತ್ತು ನಾಗರಿಕ ಮೌಲ್ಯಗಳು ಅವರಲ್ಲಿ ಆಳವಾಗಿ ಬೇರೂರಿರಬೇಕು' ಎಂದರು.

'ಜಾಗತಿಕ ಪ್ರಗತಿ ಮತ್ತು ಸಮೃದ್ಧಿಯಲ್ಲಿ ಪ್ರಮುಖ ಪಾತ್ರವಹಿಸುವ ಆತ್ಮವಿಶ್ವಾಸಿ, ಸ್ವಾವಲಂಬಿ ಮತ್ತು ಭವಿಷ್ಯದ ಭಾರತವನ್ನು ನಿರ್ಮಿಸಲು ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳು ಒಟ್ಟಾಗಿ ಕೆಲಸ ಮಾಡಬೇಕು' ಎಂದರು.

'ಇತಿಹಾಸವು ಮೌಲ್ಯಯುತ ಜೀವನ ಪಾಠವನ್ನು ನೀಡುತ್ತದೆ. ಹಿಂದಿನ ತಪ್ಪುಗಳು ಮರುಕಳಿಸದಂತೆ ಸಹಾಯ ಮಾಡುತ್ತದೆ ಮತ್ತು ಭಾರತದ ನಾಯಕರಾಗಲು ಯುವ ಮನಸ್ಸುಗಳನ್ನು ಪ್ರೇರೇಪಿಸುತ್ತದೆ' ಎಂದು ಹೇಳಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries