ಲಖನೌ: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರು ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ವಿರುದ್ಧ ಮಂಗಳವಾರ ವಾಗ್ದಾಳಿ ನಡೆಸಿದರು.
'ಆ ಪಕ್ಷಗಳು ವಕ್ಫ್ ಮಂಡಳಿಯ ಭೂಗಳ್ಳತನವನ್ನು ಪ್ರಶ್ನೆ ಮಾಡಿಲ್ಲ. ಆದರೆ ಈಗ ರಾಮಮಂದಿರದಲ್ಲಿ ನಡೆದಿದೆ ಎನ್ನಲಾದ ದೇಣಿಗೆ ಕಳವು ಬಗ್ಗೆ ಬೆರಳು ತೋರುತ್ತಿವೆ' ಎಂದು ಹರಿಹಾಯ್ದರು.
ದೇಶದಲ್ಲಿ ವಕ್ಫ್ ಹೆಸರಿನಲ್ಲಿ ಸಾವಿರಾರು ಹೆಕ್ಟೇರ್ ಭೂಮಿ ಮಾರಾಟ ಮಾಡಲಾಗಿದೆ. ಇದರ ವಿರುದ್ಧ ಕಾಂಗ್ರೆಸ್ ಅಥವಾ ಎಸ್‌ಪಿ ಪ್ರಶ್ನಿಸಿಲ್ಲ, ಏಕೆಂದರೆ ವಕ್ಫ್ ವಿಚಾರದಲ್ಲಿ ಅವರು ಮೂಕಪ್ರೇಕ್ಷಕರು' ಎಂದು ಅವರು ಹೇಳಿದರು.

