HEALTH TIPS

ದೇಶಮಂಗಲ ಶ್ರೀ ಕಾಳಿಕಾ ವಿಶ್ವಕರ್ಮ ಭಜನಾ ಮಂದಿರದ ಆಡಳಿತ ಸಮಿತಿಗೆ ಆಯ್ಕೆ

ಕಾಸರಗೋಡು: ದೇಶಮಂಗಲದ ಶ್ರೀ ಕಾಳಿಕಾ ವಿಶ್ವಕರ್ಮ ಭಜನಾ ಮಂದಿರದ ವಾರ್ಷಿಕ ಮಹಾಸಭೆ ಮಂದಿರದಲ್ಲಿ ನಡೆಯಿತು.ಮಂದಿರದ ನಿಕಟಪೂರ್ವ ಅಧ್ಯಕ್ಷ ನರೇಂದ್ರ ಆಚಾರ್ಯ ದೇಶಮಂಗಲ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮಧೂರು ಶ್ರೀ ಕಾಳಿಕಾಂಬಾ ಮಠದ ಅಧ್ಯಕ್ಷ ಎಂ. ಪುರುಷೋತ್ತಮ ಆಚಾರ್ಯ ಕಂಬಾರು ಹಾಗೂ ಮಠದ ಪದಾಧಿಕಾರಿಗಳಾದ ಜಗದೀಶ್ ಆಚಾರ್ಯ ಕಂಬಾರು, ನಿರಂಜನ ಆಚಾರ್ಯ ಅಮೈ, ರಾಜೇಶ್ ಆಚಾರ್ಯ ಮನ್ನಿಪ್ಪಾಡಿ, ವೆಂಕಟರಮಣ ಆಚಾರ್ಯ ಮೀಪುಗುರಿ, ಮೌನೇಶ್ ಆಚಾರ್ಯ ಮೀಪುಗುರಿ ಮತ್ತು ಶೀತಲ್ ಆಚಾರ್ಯ ಕಾಸರಗೋಡು ಜತೆ ಅತಿಥಿಗಳಾಗಿ ಭಾಗವಹಿಸಿದ್ದರು. 

ವೇದಿಕೆಯಲ್ಲಿ ಉಪಾಧ್ಯಕ್ಷ ರಘುರಾಮ ಆಚಾರ್ಯ, ಕೋಶಾಧಿಕಾರಿ ಡಿ.ವಿ. ದೇವದಾಸ್ ಆಚಾರ್ಯ ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭ 2026-27ನೇ ಸಾಲಿನ ನೂತನ ಆಡಳಿತ ಸಮಿತಿಯನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು. ಎಂ. ಉಮೇಶ್ ಆಚಾರ್ಯ ಕಂಬಾರು ಅಧ್ಯಕ್ಷ, ದೀಪಕ್ ಆಚಾರ್ಯ ಉಜಿರೆಕೆರೆ ಉಪಾಧ್ಯಕ್ಷ, ವರಪ್ರಸಾದ್ ಆಚಾರ್ಯ ಕಂಬಾರು ಕಾರ್ಯದರ್ಶಿ, ಉದಯ ಆಚಾರ್ಯ ದೇಶಮಂಗಲ ಕೋಶಾಧಿಕಾರಿ, ಹೃತಿಕ್ ಆಚಾರ್ಯ ಕಂಬಾರು, ಗಿರೀಶ್ ಆಚಾರ್ಯ ಎಂ.ಬಿ. ಹಾಗೂ ಗಿರೀಶ್ ಆಚಾರ್ಯ ಕಂಬಾರು ಅವರನ್ನು ಜತೆ ಕಾರ್ಯದರ್ಶಿಗಳು ಹಾಗೂ ಸದಸ್ಯರನ್ನು ಆಯ್ಕೆಮಾಡಲಾಯಿತು.

ಮಹಿಳಾ ಸಂಘದ ಪದಾಧಿಕಾರಿಗಳಾದ ಲೀಲಾವತಿ ಅಶೋಕ ಆಚಾರ್ಯ, ಪೂರ್ಣಿಮಾ ದೇವದಾಸ್ ಆಚಾರ್ಯ ಹಾಗೂ ವೇದಾವತಿ ಜಗದೀಶ್ ಆಚಾರ್ಯ ಉಪಸ್ಥಿತರಿದ್ದರು. ಸಭೆಯಲ್ಲಿ ಉಪೇಂದ್ರ ಆಚಾರ್ಯ ದೇಶಮಂಗಲ ವಾರ್ಷಿಕ ಲೆಕ್ಕಪತ್ರ ಮಂಡಿಸಿದರು. ಉದಯ ಆಚಾರ್ಯ ದೇಶಮಂಗಲ ಸ್ವಾಗತಿಸಿ ಕಾರ್ಯಕ್ರಮವನ್ನು ನಿರೂಪಿಸಿದರು. ವರಪ್ರಸಾದ್ ಆಚಾರ್ಯ ಕಂಬಾರು ವಂದಿಸಿದರು.


  

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries