ಮಂಜೇಶ್ವರ: ವರ್ಕಾಡಿ ಶ್ರೀ ಕಾವೀಃ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಮೂಡಂಬೈಲಿನ ವಾಗ್ದೇವೀ ಯಕ್ಷಗಾನ ಕಲಾಸಂಘದವರಿಂದ ಜು. 19 ರಂದು ಪೂರ್ವಾಹ್ನ 10 ರಿಂದ ಭಾರ್ಗವ ವಿಜಯ ಕಥಾಭಾಗದ ತಾಳಮದ್ದಳೆ ಜರಗಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಗಣೇಶ ಮಯ್ಯ ವರ್ಕಾಡಿ, ಚೆಂಡೆಯಲ್ಲಿ ವಾಸುದೇವ ಮಯ್ಯ ವರ್ಕಾಡಿ ಮತ್ತು ಮೃದಂಗದಲ್ಲಿ ಸ್ಕಂದರಾಜ್ ಮಯ್ಯ ವರ್ಕಾಡಿ ಭಾಗವಹಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

