HEALTH TIPS

ಭಕ್ತರ ದಾರಿ ತಪ್ಪಿಸುತ್ತಿರುವ ಇಸ್ಕಾನ್: ಪುರಿ ಜಗನ್ನಾಥ ಸಮಿತಿ ಆರೋಪ

 ಭುವನೇಶ್ವರ (PTI): 'ನಿಗದಿತವಲ್ಲದ ದಿನಗಳಲ್ಲಿ ರಥ ಯಾತ್ರೆಯನ್ನು ಏರ್ಪಡಿಸುವುದು ಶಾಸ್ತ್ರಕ್ಕೆ ಅನುಗುಣವಾಗಿಯೇ ಇದೆ' ಎಂಬ ಇಸ್ಕಾನ್ ಹೇಳಿಕೆಯನ್ನು ನಿರಾಕರಿಸಿರುವ ಪುರಿ ಜಗನ್ನಾಥ ಸಮಿತಿಯು, 'ಇದು ಜಗತ್ತಿನೆಲ್ಲೆಡೆ ಇರುವ ಭಕ್ತರನ್ನು ದಾರಿತಪ್ಪಿಸುವ ಪ್ರಯತ್ನ' ಎಂದಿದೆ.


ಪೂರ್ವನಿಗದಿತ ಅಲ್ಲದ ದಿನಗಳಲ್ಲಿ ರಥಯಾತ್ರೆ ಆಯೋಜಿಸುವುದು ಮತ್ತು ಭಾರತದ ಹೊರಗೆ ಜಗನ್ನಾಥ ದೇವರ ಇತರ ಹಬ್ಬಗಳ ಆಚರಣೆ ವಿಚಾರವಾಗಿ ಇಸ್ಕಾನ್ ಹಾಗೂ ಪುರಿ ದೇವಸ್ಥಾನದ ಆಡಳಿತದ ನಡುವೆ ಹಗ್ಗಜಗ್ಗಾಟ ನಡೆಯುತ್ತಲೇ ಇದೆ.

'ನವದೆಹಲಿಯ ಇಸ್ಕಾನ್ ರಾಷ್ಟ್ರೀಯ ಸಂವಹನ ಕಚೇರಿ ಜುಲೈ 12ರಂದು ಮಾಧ್ಯಮಗಳಿಗೆ ನೀಡಿದ ಪ್ರಕಟಣೆಯು ತಪ್ಪು ಹೇಳಿಕೆಗಳನ್ನು ಒಳಗೊಂಡಿದೆ' ಎಂದು ಶ್ರೀ ಜಗನ್ನಾಥ ದೇವಾಲಯದ ಆಡಳಿತ ಮಂಡಳಿ ಹೇಳಿಕೆ ಬಿಡುಗಡೆ ಮಾಡಿದೆ.

ಈ ವಿಚಾರವಾಗಿ ಪ್ರತಿಕ್ರಿಯೆ ನೀಡಲು ಇಸ್ಕಾನ್‌ನ ರಾಷ್ಟ್ರೀಯ ವಕ್ತಾರ ಯುಧಿಷ್ಟಿರ ಗೋವಿಂದ ದಾಸ ನಿರಾಕರಿಸಿದ್ದಾರೆ.



ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries