ಕಾಸರಗೋಡು: ಯಕ್ಷಗಾನ ಕಲೆಯ ದೀಪಕ್ಕೆ ತೈಲಧಾರೆಗಳಾಗೋಣ ಎಂಬ ಶೀರ್ಷಿಕೆಯಲ್ಲಿ 'ಸಂಘಟನೆಯ ಸವಾಲುಗಳು'ಎಂಬ ವಿಶೇಷ ಚಿಂತನ ಮಂಥನ ಕಾರ್ಯಕ್ರಮ ಹಾಗೂ ಪ್ರಸಂಗ ರಚನಾ ಕಮ್ಮಟ ಜುಲೈ11 ಹಾಗೂ 12ರಂದು ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕøತಿಕ ಪ್ರತಿಷ್ಠಾನದ ಶ್ರೀ ಕೇಶವಾನಂದ ಭಾರತೀ ಸ್ಮೃತಿ ಮಂದಿರದಲ್ಲಿ ಜರುಗಲಿದೆ.
11ರಂದು ಬೆಳಗ್ಗೆ 'ಸಂಘಟಕ -ಕಲಾವಿದ- ಪ್ರೇಕ್ಷಕ- ಪೆÇೀಷಕ ಸಮಭಾಗಿಗಳು'ಎಂಬ ವಿಶೇಷ ಚಿಂತನ ಮಂಥನ ಕಾರ್ಯಕ್ರಮ ನಡೆಯಲಿದೆ. ಯಕ್ಷಗಾನದ ವಿದ್ವಾಂಸರು ಯಕ್ಷಗಾನ ಅಕಾಡೆಮಿಯ ಮಾಜಿ ಅಧ್ಯಕ್ಷ ಎಂಎಲ್ ಸಾಮಗ ಉಡುಪಿ ಸಮಾರಂಭ ಉದ್ಘಾಟಿಸುವರು. ಹಿರಿಯ ಸಂಘಟಕ ಭುಜಬಲಿ ಧರ್ಮಸ್ಥಳ ಅಧ್ಯಕ್ಷತೆ ವಹಿಸುವರು.
ಹಿರಿಯಸಂಘಟಕ ಎಂ. ಶಾಂತಾರಾಮ ಕುಡ್ವ, ಮೂಡುಬಿದಿರೆ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಸಂಚಾಲಕ ಉಜಿರೆ ಅಶೋಕ ಭಟ್ ಉಪನ್ಯಾಸ ನೀಡುವರು. ಸಂಘಟಕರು, ಕಲಾವಿದರು, ಗಣ್ಯರು ಸಮಾರಂಭದಲ್ಲಿ ಪಾಲ್ಗೊಳ್ಳುವರು. ಮಧ್ಯಾಹ್ನ ಕಾರ್ಕಳ ನಂದಳಿಕೆಯ ವಿಶಾಲ ಯಕ್ಷ ಕಲಾ ಬಳಗ ವತಿಯಿಂದ ಪೇರ ಕಡಲ್ ತುಳು ಯಕ್ಷಗಾನ ತಾಳಮದ್ದಳೆ ಜರುಗಲಿದೆ.
12ರಂದು ಪ್ರಸಂಗ ರಚನೆ ಕಮ್ಮಟ ಹಾಗೂ 'ಪರಶುರಾಮ ಪ್ರಸಂಗ ಲೋಕಾರ್ಪಣೆ' ಕಾರ್ಯಕ್ರಮ ನಡೆಯುವುದು. ಬೆಳಗ್ಗೆ 10ಕ್ಕೆ ನಡೆಯುವ ಸಮಾರಂಭದಲ್ಲಿ ಶಿರೂರು ಫಣಿಗಿರಿ ಪ್ರತಿಷ್ಠಾನ ಪ್ರಕಾಶನದ ಶ್ರೀಧರ ಡಿ.ಎಸ್ ಅರ ವೀರ ತಪಸ್ವಿಪರಶುರಾಮ ಕಾದಂಬರಿ ಆಧಾರಿತ, ಶೇಡಿಗುಮ್ಮೆ ವಾಸುದೇವ ಭಟ್ ವಿರಚಿತ ವೀರ ತಪಸ್ವಿ ಪರಶುರಾಮ ಯಕ್ಷಗಾನ ಕೃತಿಯನ್ನು ಮಾನವ ಹಕ್ಕುಗಳ ಆಯೋಗ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಐ.ಎ.ಎಸ್ ಲೋಕಾರ್ಪಣೆಗೈಯುವರು. ಪ್ರಕಾಶಕ ಶ್ರೀಧರ ಡಿ.ಎಸ್ ಅಧ್ಯಕ್ಷತೆ ವಹಿಸುವರು. ಹಿರಿಯ ಪ್ರಸಂಗ ಕರ್ತರು. ಸಂಶೋಧಕ ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು.



