ಕಾಸರಗೋಡು: ಕೆಲಸ ಕೊಡಿಸುವ ಭರವಸೆನೀಡಿ ಯುವಕನನ್ನು ಕರೆದೊಯ್ದು ಹಲ್ಲೆಗೈದ ಬಳಿಕ ಮೊಬೈಲ್ ಫೆÇೀನ್ ಲಪಟಾಯಿಸಿದ ಪ್ರಕರಣಕ್ಕೆ ಸಂಬಂಧಿಸಿ ಮೇಲ್ಪರಂಬ ಠಾಣೆ ಪೊಲೀಸರು ಮೂರು ಮಂದಿ ವಿರುದ್ಧ ಕೇಸು ದಾಖಲಿಸಿಕೊಂಡಿದ್ದಾರೆ.
ಚೆಂಗಳ ಇಂದಿರಾನಗರದ ಕ್ವಾರ್ಟರ್ಸ್‍ನಲ್ಲಿ ವಾಸಿಸುವ ಪಶ್ಚಿಮ ಬಂಗಾಳ ನಿವಾಸಿ ರಾಮನ್ ಬರ್ಮನ್ (33)ನೀಡಿದ ದೂರಿನನ್ವಯ ಈ ಕೇಸು ದಾಖಲಾಗಿದೆ. ಇಂದಿರಾನಗರದ ಕ್ವಾರ್ಟರ್ಸ್‍ಗೆ ತಲುಪಿದ ಮೂವರ ತಂಡ ಕೆಲಸವಿರುವುದಾಗಿ ತಿಳಿಸಿ ರಾಮನ್ ಬರ್ಮನ್‍ನನ್ನು ಕರೆದೊಯ್ದಿದ್ದರು. ಚಿತ್ತಾರಿಕಲ್ ರಾಷ್ಟ್ರೀಯ ಹೆದ್ದಾರಿಯ ಫ್ಲೈ ಓವರ್ ಕೊನೆಗೊಳ್ಳುವ ಭಾಗಕ್ಕೆ ತಲುಪಿದಾಗ 16 ಸಾವಿರ ರೂಪಾಯಿ ಮೌಲ್ಯದ ಮೊಬೈಲ್ ಫೆÇೀನ್‍ನನ್ನು ಕಸಿದು ತೆಗೆದುಕೊಂಡ ತಂಡ ಹಲ್ಲೆಗೈದಿದ್ದು, ಇದನ್ನು ತಡೆಯಲು ಯತ್ನಿಸಿದಾಗ ಕೊಲೆಗೈಯುವುದಾಗಿ ಬೆದರಿಕೆಯೊಡ್ಡಿದೆ. ನಂತರ ತಂಡ ತನ್ನನ್ನು ಹಾದಿಮಧ್ಯೆ ಉಪೇಕ್ಷಿಸಿ ಪರಾರಿಯಾಗಿದೆ. ಘಟನೆ ಬಳಿಕ ವಾಸಸ್ಥಳಕ್ಕೆ ತಲುಪಿದ ರಾಮನ್ ಬರ್ಮನ್ ನಂತರ ಮೇಲ್ಪರಂಬ ಠಾಣೆ ಪೆÇಲೀಸರಿಗೆ ದೂರು ನೀಡಿದ್ದಾರೆ.

