ಮಂಜೇಶ್ವರ: ಮಂಜೇಶ್ವರ ಠಾಣೆ ಪೊಲೀಸರು ವಿವಿಧೆಡೆ ನಡೆಸಿದ ಕಾರ್ಯಾಚರಣೆಯಲ್ಲಿ ಕೇರಳದಲ್ಲಿ ನಿಷೇಧಿತ ತಂಬಾಕು ಉತ್ಪನ್ನ ಪಾನ್‍ಮಸಾಲ ಸಾಗಿಸುತ್ತಿದ್ದ ಇಬ್ಬರನ್ನು ಸೆರೆಹಿಡಿದಿದ್ದಾರೆ. ಇವರಿಂದ ಒಟ್ಟು 415ಪ್ಯಾಕೆಟ್ ವಿವಿಧ ರೀತಿಯ ತಂಬಾಕು ಉತ್ಪನ್ನ ವಶಪಡಿಸಿಕೊಳ್ಳಲಾಗಿದೆ.
ಹೊಸಂಗಡಿ ರೈಲ್ವೇ ಗೇಟ್ ಬಳಿಯ ಪಾನ್ ಸ್ಟಾಲ್ ಬಳಿ ನಡೆಸಿದ ಕಾರ್ಯಾಚರಣೆಯಲ್ಲಿ ಹೊಸಂಗಡಿ ಹಿಲ್ಸ್‍ಹೆಡ್ ಕ್ರಾಸ್ ರಸ್ತೆಯ ಪಿರಾರ್ ಮೂಲೆಯ ಕ್ವಾರ್ಟರ್ಸ್‍ನಲ್ಲಿ ವಾಸವಾಗಿರುವ ಉತ್ತರ ಪ್ರದೇಶ ನಿವಾಸಿ ಅಮಿತ್ ಸೋಂಕಾರ್ ಹಾಗೂ ಆಂಗಡಿಪದವು ಪಿರಾರ್ ಮೂಲೆ ರಸ್ತೆಬಳಿಯಿಂದ 167 ಪ್ಯಾಕೆಟ್ ಪಾನ್ ಮಸಾಲ ಸಹಿತ ಹೊಸಂಗಡಿ ಹಿಲ್‍ಸೈಡ್ ಕ್ರಾಸ್ ರಸ್ತೆಯ ಕ್ವಾರ್ಟರ್ಸ್‍ನಲ್ಲಿ ವಾಸವಾಗಿರುವ ಉತ್ತರ ಪ್ರದೇಶ ನಿವಾಸಿ ಮಂಜಿತ್ ಸೋಂಕಾರ್ ಎಂಬವರನ್ನು ಬಂಧಿಸಲಾಗಿದೆ. ನಂತರ ಇವರನ್ನು ನೋಟೀಸು ನೀಡಿ ಬಿಡುಗಡೆಗೊಳಿಸಲಾಗಿದೆ.


