HEALTH TIPS

ಕರಂದಕ್ಕಾಡಿನಲ್ಲಿ ಸರಣಿ ಅಪಘಾತ-ಜಖಂಗೊಂಡ ಕರುಗಳು, ಹಲವರಿಗೆ ಸಣ್ಣಪುಟ್ಟ ಗಾಯ

ಕಾಸರಗೋಡು: ನಗರದ ಕರಂದಕ್ಕಾಡ್ ಜಂಕ್ಷನ್ ಬಳಿ ಸರಣಿ ಅಪಘಾತದಿಂದ ಮೂರು ವಾಹನಗಳಿಗೆ ಹಾನಿಯುಂಟಾಗಿದ್ದು, ಇದರಲ್ಲಿದ್ದ ಏಳು ಮಂದಿ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಗಾಯಾಳುಗಳು ಸನಿಹದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರು.

ಭಾನುವಾರ ತಡರಾತ್ರಿ ಸರಣಿ ಅಪಘಾತ ನಡೆದಿದೆ. ಒಂದೇ ಕುಟುಂಬದ ನಾಲ್ವರು ಪ್ರಯಾಣಿಸುತ್ತಿದ್ದ ಎಸ್ ಪ್ರೆಸ್ಸೋ ಕಾರು, ಇಬ್ಬರು ಪ್ರಯಾಣಿಸುತ್ತಿದ್ದ ಇನ್ನೋವಾ ಹಾಗೂ ಸ್ವಿಫ್ಟ್ ಕಾರುಗಳು ಸರಣಿಅಪಘಾತಕ್ಕೀಡಾದವುಗಳು.   

ಇದರಲ್ಲಿ ಇನ್ನೋವಾ ಕಾರು ಮಗುಚಿ ಬಿದ್ದಿದ್ದು, ಅದರಲ್ಲಿದ್ದ ಕಾಞಂಗಾಡ್ ಕಲ್ಲೂರಾವಿ ನಿವಾಸಿಗಳು ಗಾಯಗೊಂಡಿದ್ದಾರೆ. ವಾಹನ ಅಪಘಾತದಿಂದ ರಸ್ತೆಸಂಚಾರ ಅಸ್ತವ್ಯಸ್ತಗೊಂಡಿದ್ದು, ಅಗ್ನಿಶಾಮಕ ದಳ ಹಾಗೂ ಪೊಲೀಸರು ಸ್ಥಳಕ್ಕಾಗಮಿಸಿ ಸಂಚಾರ ಸುಗಮಗೊಳಿಸಿದರು. 


 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries