ಕಾಸರಗೋಡು: ಬೇಕಲ್ ಪೋಲೀಸ್ ಠಾಣೆ ವ್ಯಾಪ್ತಿಯ ಪನಯಾಲ್‍ನ ಕೊಟ್ಟಪ್ಪಾರ ಹೊಳೆಯಲ್ಲಿ ಸ್ನಾನಕ್ಕಿಳಿದಿದ್ದ ವಿದ್ಯಾರ್ಥಿ ನೀರಲ್ಲಿ ಮುಳುಗಿ ಮೃತಪಟ್ಟಿದ್ದಾನೆ. ಪನಯಾಲ್ ನೆಲ್ಲಿಯಡುಕ್ಕದ 'ಉನ್ನತಿ' ನಿವಾಸಿ ಅಂಶಿ ಎಂಬವರ ಪುತ್ರ ಆದಿತ್ಯನ್ (15)ಮೃತಪಟ್ಟ ಬಾಲಕ. ಈತ ತಚ್ಚಂಗಾಡ್ ಸರ್ಕಾರಿ ಪ್ರೌಢಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿಯಾಗಿದ್ದನು.
ತನ್ನ ಮೂವರು ಸಹಪಾಠಿಗಳೊಂದಿಗೆ ಕೊಟ್ಟಪ್ಪಾರ ಹೊಳೆಗೆ ಸ್ನಾನಕ್ಕಾಗಿ ತೆಳಿದ್ದ ಸಂದರ್ಭ ಆದಿತ್ಯನ್ ನೀರಿನ ಸೆಳೆತಕ್ಕೆ ಸಿಲುಕಿದ್ದನು. ತಕ್ಷಣ ಜತೆಗಿದ್ದವರು ಬೊಬ್ಬಿಡುತ್ತಿದ್ದಂತೆ, ಸನಿಹದ ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದವರು ನೀಡಿದ ಮಾಹಿತಿಯನ್ವಯ ಸ್ಥಳೀಯರು ಆಗಮಿಸಿ ಬಾಲಕನನ್ನು ದಡಕ್ಕೆ ತಂದು ಆಸ್ಪತ್ರೆಗೆ ಸಾಗಿಸಿದರೂ, ಪ್ರಯೋಜನವಾಗಿಲಿಲ್ಲ. ಬೇಕಲ ಠಾಣೆ ಪೆÇಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.

