ಕಾಸರಗೋಡು: ಬಿರುಸಿನ ಗಾಳಿಯಿಂದ ಕೂಡಿದ ಮಳೆಗೆ ಛಾವಣಿ ಕುಸಿದಿದ್ದ ಕಾಞಂಗಾಡ್ ದಕ್ಷಿಣ ಸರ್ಕಾರಿ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಗೆ ಜಿಲ್ಲಾಧಿಕಾರಿ ಅರ್ಜುನ್ ಪಾಂಡಿಯನ್ ಭೇಟಿ ನೀಡಿದರು.
ಕಾಞಂಗಾರುನಗರಸಭಾ ಸದಸ್ಯರಾದ ಎನ್. ಉಣ್ಣಿಕೃಷ್ಣನ್, ಗೀತಾ, ತಹಸೀಲ್ದಾರ್ ರಮೇಶನ ಪೆÇಯಿನಾಚಿ, ಶಾಲಾ ಮುಖ್ಯಶಿಕ್ಷಕ ಎಂ. ಗಿರೀಶನ, ವಿಎಚ್‍ಎಸ್‍ಇ ಪ್ರಾಂಶುಪಾಲ ಅರುಣ್ ಮತ್ತು ಕಾಞಂಗಾಡ್ ಪುರಸಭೆ ಕಾರ್ಯದರ್ಶಿ ಎನ್.ಕೆ. ಗಿರೀಶ್ ಜತೆಗಿದ್ದರು.
ಬಿರುಸಿನ ಗಾಳಿಗೆ ಕಟ್ಟಡದ ಎರಡನೇ ಮಹಡಿಯ ಛಾವಣಿ ಶೀಟ್‍ಗಳು ಗಾಳಿಗೆ ಹಾರಿಹೋಗಿ ಆಸುಪಾಸು ಚದುರಿ ಬಿದ್ದಿದೆ. ಶೀಟ್‍ಗಳು ಮರದಮೇಲೆ ಬಿದ್ದ ಪರಿಣಾಮ ಹಲವು ಮರಗಳುಹಾನಿಗೀಡಾಗಿದೆ.
ಅಗ್ನಿಶಾಮಕ ದಳ ತುರ್ತು ಕಾರ್ಯಚರಣೆ ಮೂಲಕ ಅಗತ್ಯ ಸುರಕ್ಷಾ ಕ್ರಮ ಕೈಗೊಂಡಿತು. ಕಾಞಂಗಾಡು ನಗರಸಭೆಯ ಮೇಲ್ವಿಚಾರಣೆಯಲ್ಲಿ ಕಾರ್ಮಿಕರು ಕುಸಿದ ಛಾವಣಿಯನ್ನು ತೆರವುಗೊಳಿಸಿದರು.



