HEALTH TIPS

ಮಾತುಕತೆಗೆ ಆಹ್ವಾನ ನೀಡಿದ ನಡ್ಡಾಗೆ ತಟಸ್ಥ ಸ್ಥಳಕ್ಕೆ ಬನ್ನಿ ಎಂದ 'ಕಾಕ್ರೋಚ್'

ನವದೆಹಲಿ: ಪ್ರತಿಭಟನೆ ಅಂತ್ಯಗೊಳಿಸುವ ನಿಟ್ಟಿನಲ್ಲಿ ಮಾತುಕತೆ ನಡೆಸಲು ತಮ್ಮ ನಿವಾಸಕ್ಕೆ ಬರುವಂತೆ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರು ಗುರುವಾರ ನೀಡಿರುವ ಆಹ್ವಾನವನ್ನು ಕಾಕ್ರೋಚ್‌ ಜನತಾ ಪಕ್ಷದ (ಸಿಜೆಪಿ) ನಾಯಕರು ತಿರಸ್ಕರಿಸಿದ್ದಾರೆ.

'ಜೆ.ಪಿ. ನಡ್ಡಾ ಅವರು ಮಾತುಕತೆ ಸಂಬಂಧ ಸಿಜೆಪಿ ನಾಯಕರಿಗೆ ಇಂದು ಆಹ್ವಾನ ನೀಡಿದ್ದಾರೆ. 


ಆದರೆ, ಪ್ರತಿಭಟನೆಯಲ್ಲಿ ತೊಡಗಿರುವವರು ಅದನ್ನು ತಿರಸ್ಕರಿಸಿದ್ದಾರೆ' ಎಂದು ಮೂಲಗಳು ತಿಳಿಸಿವೆ.

ನಡ್ಡಾ ಅವರು ಸಿಜೆಪಿ ನಾಯಕರಿಗೆ ಬುಧವಾರವೂ ಆಹ್ವಾನ ನೀಡಿದ್ದರು. ಆದರೆ, ಆಹ್ವಾನ ತಿರಸ್ಕರಿಸಿದ್ದ ಕಾಕ್ರೋಚ್‌ ನಾಯಕರು, ಸರ್ಕಾರದೊಂದಿಗೆ ಮಾತುಕತೆ ನಡೆಸಬೇಕಾದರೆ ತಟಸ್ಥ ಸ್ಥಳ ನಿಗದಿ ಮಾಡಬೇಕು ಎಂದು ಹೇಳಿದ್ದರು.

ಪ್ರತಿಭಟನಾ ಸ್ಥಳದಿಂದ ಪತ್ರಿಕಾಗೋಷ್ಠಿ ನಡೆಸಿರುವ ಸಿಜೆಪಿ ವಕ್ತಾರ ಸೌರವ್‌ ದಾಸ್‌, 'ನಡ್ಡಾ ಅವರು ತಮ್ಮ ನಿವಾಸಕ್ಕೆ ಬರುವಂತೆ ನಮಗೆ ಆಹ್ವಾನ ನೀಡುತ್ತಿರುವುದಾಗಿ ಪೊಲೀಸರು ಇಂದು ಬೆಳಿಗ್ಗೆ ಮಾಹಿತಿ ನೀಡಿದರು. ನಾವು ಯಾರ ಮನೆ ಅಥವಾ ಕಚೇರಿಗೆ ಹೋಗಲ್ಲ. ಜನತಾ ನ್ಯಾಯಾಲಯದಲ್ಲಿದ್ದೇವೆ. ಮಂತ್ರಿಗಳೇ ಜನರ ಮಧ್ಯೆ ಬರಲಿ. ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸಲು ಬಯಸುವುದಾದರೆ, ಅದು ಜಂತರ್ ಮಂತರ್‌ನಲ್ಲಿಯೇ ಆಗಲಿ' ಎಂದು ಹೇಳಿದ್ದಾರೆ.

ಆಗಿರುವುದೆಲ್ಲ ಒಳ್ಳೆಯದಕ್ಕೆ ಎಂದುಕೊಳ್ಳಿ: ವಿದ್ಯಾರ್ಥಿಗಳಿಗೆ ನೀಟ್ ಟಾಪರ್ ಸಲಹೆಕಾಕ್ರೋಚ್ ಪ್ರತಿಭಟನೆ: ವಿದ್ಯಾರ್ಥಿಗಳ ರಕ್ಷಣೆಗೆ ಪೊಲೀಸ್ ವ್ಯಾನ್ ತಡೆದ ವೀರ ವನಿತೆ

ಹಾಗೆಯೇ, 'ಸಿಜೆಪಿ ಮಾತುಕತೆಗೆ ಮುಕ್ತವಾಗಿದೆ. ಭದ್ರತೆಯ ಬಗ್ಗೆ ಕಳವಳಗಳಿದ್ದರೆ, ಪ್ರತಿಭಟನಾ ಸ್ಥಳದ ಆಸುಪಾಸಿನಲ್ಲಿ ಮಾತುಕತೆ ನಿಗದಿಮಾಡಲಿ' ಎಂದು ತಿಳಿಸಿದ್ದಾರೆ.

ಮೇ 3ರಂದು ನಡೆದಿದ್ದ ನೀಟ್‌ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾದ ಸುದ್ದಿ ದೇಶದಾದ್ಯಂತ ಭಾರಿ ವಿವಾದ ಸೃಷ್ಟಿಸಿತ್ತು. ಇದರ ಬೆನ್ನಲ್ಲೇ ಎಚ್ಚೆತ್ತುಕೊಂಡ ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ (ಎನ್‌ಟಿಎ), ಮರು ಪರೀಕ್ಷೆ ನಡೆಸುವುದಾಗಿ ಘೋಷಿಸಿತ್ತು. ಅದರಂತೆ ಮರುಪರೀಕ್ಷೆ ಜೂನ್‌ 21ರಂದು ನಡೆದಿದೆ. ಆದರೆ, ಮರುಪರೀಕ್ಷೆಯ ಬಳಿಕ ಪ್ರಕಟಿಸಿದ್ದ ಕೀ ಉತ್ತರಗಳಿಗೂ, ಫಲಿತಾಂಶದ ನಂತರ ಬಂದಿರುವ ಅಂಕಗಳಿಗೂ ವ್ಯತ್ಯಾಸವಿದೆ ಎಂಬ ಆರೋಪಗಳು ಇದೀಗ ವ್ಯಕ್ತವಾಗಿವೆ.

ಪ್ರಶ್ನೆ ಪತ್ರಿ ಸೋರಿಕೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ವಿದ್ಯಾರ್ಥಿಗಳ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು, ಇದರ ಹೊಣೆ ಹೊತ್ತು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕು ಮತ್ತು ಪ್ರಕರಣದಲ್ಲಿ ಭಾಗಿಯಾದ ಎಲ್ಲರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿ ಸಿಜೆಪಿ, ಜಂತರ್‌ ಮಂತರ್‌ನಲ್ಲಿ ಜೂನ್‌ 20ರಿಂದ ಪ್ರತಿಭಟನೆ ನಡೆಸುತ್ತಿದೆ. ಈ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಪರಿಸರವಾದಿ ಮತ್ತು ಶಿಕ್ಷಣ ತಜ್ಞ ಸೊನಮ್‌ ವಾಂಗ್ಚೂಕ್‌ ಅವರು ಜೂನ್‌ 28ರಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದಾರೆ. 






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries