ತಿರುವನಂತಪುರಂ: ತಮಿಳುನಾಡಿನ ಅನಿರೀಕ್ಷಿತ ಕ್ರಮವು ಕೇರಳದ ನಿರ್ಣಾಯಕ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿರುವ ಸಂದರ್ಭದಲ್ಲಿ ಮುಖ್ಯಮಂತ್ರಿ ನೇರವಾಗಿ ಮಧ್ಯಪ್ರವೇಶಿಸಿದ್ದಾರೆ.
ತಮಿಳುನಾಡಿನ ನಿರ್ಬಂಧಗಳು ರಾಜ್ಯದಲ್ಲಿ ಪ್ರಸ್ತುತ ನಡೆಯುತ್ತಿರುವ ರಾಷ್ಟ್ರೀಯ ಹೆದ್ದಾರಿ (ಎನ್.ಎಚ್ 66) ಅಭಿವೃದ್ಧಿ ಕಾರ್ಯಗಳ ಮೇಲೆ ಗಂಭೀರ ಪರಿಣಾಮ ಬೀರಿವೆ ಎಂದು ಮುಖ್ಯಮಂತ್ರಿÀ್ತಮಿಳುನಾಡು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಗಮನಸೆಳೆದಿದ್ದಾರೆ.
ಇದರ ಜೊತೆಗೆ, ಈ ಸಾಮಗ್ರಿಗಳ ಕೊರತೆಯು ದೇಶದ ಸ್ವಂತ ಹೆಮ್ಮೆಯ ಯೋಜನೆಯಾದ ವಿಳಿಂಜಮ್ ಅಂತರರಾಷ್ಟ್ರೀಯ ಬಂದರಿನ ಸಂಪರ್ಕಕ್ಕೆ ಸಂಬಂಧಿಸಿದ ನಿರ್ಮಾಣ ಕಾರ್ಯಗಳ ವೇಗದ ಮೇಲೆಯೂ ಪ್ರತಿಕೂಲ ಪರಿಣಾಮ ಬೀರಿದೆ.ವಿಳಿಂಜಮ್ ಯೋಜನೆಯನ್ನು ಸುಗಮವಾಗಿ ಪೂರ್ಣಗೊಳಿಸಲು ನಿರ್ಮಾಣ ಸಾಮಗ್ರಿಗಳ ನಿರಂತರ ಲಭ್ಯತೆಯನ್ನು ಖಚಿತಪಡಿಸಿಕೊಳ್ಳುವುದು ಅತ್ಯಗತ್ಯ.
ತಮಿಳುನಾಡು ಸರ್ಕಾರ ವಿಧಿಸಿರುವ ಈ ಕಠಿಣ ನಿಬರ್ಂಧಗಳನ್ನು ತೆಗೆದುಹಾಕಿದರೆ ಅಥವಾ ಸಡಿಲಿಕೆ ನೀಡಿದರೆ, ದಕ್ಷಿಣ ಭಾರತದ ಎಲ್ಲಾ ರಾಜ್ಯಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ ಎಂದು ಕೇರಳ ಮುಖ್ಯಮಂತ್ರಿ ತಮ್ಮ ಪತ್ರದಲ್ಲಿ ಸ್ಪಷ್ಟಪಡಿಸಿದ್ದಾರೆ.
ಕೇರಳದ ನಿರ್ಮಾಣ ಕ್ಷೇತ್ರವು ನೆರೆಯ ರಾಜ್ಯಗಳ ಗ್ರಾನೈಟ್ ಮತ್ತು ಲೋಹದ ಉತ್ಪನ್ನಗಳ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿದೆ.
ಈ ಪರಿಸ್ಥಿತಿಯಲ್ಲಿ, ನಿಬರ್ಂಧಗಳು ದೀರ್ಘಕಾಲದವರೆಗೆ ಮುಂದುವರಿದರೆ, ರಾಜ್ಯದಲ್ಲಿ ಸಾರ್ವಜನಿಕ ಕಾಮಗಾರಿ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಮುಖ್ಯಮಂತ್ರಿಯವರ ಪತ್ರದ ಆಧಾರದ ಮೇಲೆ ತಮಿಳುನಾಡು ಸರ್ಕಾರ ಅನುಕೂಲಕರ ನಿಲುವು ತೆಗೆದುಕೊಳ್ಳುತ್ತದೆ ಎಂದು ಕೇರಳ ಆಶಿಸುತ್ತಿದೆ.

