ಟೆಲಿಗ್ರಾಮ್‌ನ ಕರಾಳ ಸಾಮ್ರಾಜ್ಯ; ಟೆಲಿಗ್ರಾಮ್ ಗ್ರೂಪ್‌ಗಳಲ್ಲಿ ಏನಾಗುತ್ತೆ ಗೊತ್ತಾ? ಪೋರ್ನ್ ನಿಂದ ಪೇಪರ್ ಲೀಕ್ ವರೆಗೆ ಎಲ್ಲವೂ! ಎನ್‌ಕ್ರಿಪ್ಶನ್ ಹೆಸರಲ್ಲಿ ಅಕ್ರಮದ ಅಡ್ಡೆ; ಟೆಲಿಗ್ರಾಮ್ ಗ್ರೂಪ್‌ಗಳ ಒಳಗಿನ ಶಾಕಿಂಗ್ ಸತ್ಯ ಇಲ್ಲಿದೆ.
Telegram: ಟೆಲಿಗ್ರಾಮ್ (Telegram) ಅಂದ್ರೆ ಕೇವಲ ಮೆಸೇಜ್ ಕಳಿಸೋ (Message) ವಾಟ್ಸಾಪ್ (WhatsApp) ತರಹದ ಆ್ಯಪ್ (AAP) ಅಂತ ಅಂದುಕೊಂಡ್ರಾ? ಹಾಗಿದ್ರೆ ನೀವು ತಪ್ಪು ತಿಳಿದಿದ್ದೀರಿ. ಎನ್‌ಕ್ರಿಪ್ಶನ್, ದೊಡ್ಡ ಗ್ರೂಪ್ ಸೈಜ್, ಚಾನೆಲ್ ಫೀಚರ್ ಇರೋ ಟೆಲಿಗ್ರಾಮ್ ಈಗ 'ಡಿಜಿಟಲ್ ಅಂಡರ್‌ವರ್ಲ್ಡ್' (Digital Underworld) ಆಗಿ ಬದಲಾಗಿದೆ. ಇಲ್ಲಿ ಸಿನಿಮಾ, ವೆಬ್ ಸೀರೀಸ್ ಪೈರಸಿ ಕಾಪಿ ಸಿಗುತ್ತೆ. ಲಕ್ಷಾಂತರ ರೂಪಾಯಿ ಬೆಲೆಯ ಪ್ರೀಮಿಯಂ ಕೋರ್ಸ್‌ಗಳು ಫ್ರೀಯಾಗಿ ಹರಿದಾಡುತ್ತವೆ. ಸರ್ಕಾರಿ ನೇಮಕಾತಿ, ನೀಟ್, ಯುಪಿಎಸ್‌ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ಲೀಕ್ (Question Paper Leak) ಆಗೋದು ಇಲ್ಲೇ. ಅಕ್ರಮ ಬೆಟ್ಟಿಂಗ್, ನಕಲಿ ದಾಖಲೆ ಮಾರಾಟದವರೆಗೂ (Selling Fake Documents) ದಂಧೆ ನಡೆಯುತ್ತೆ ಎಂಬ ಗಂಭೀರ ಆರೋಪಗಳು ಕೇಳಿಬರುತ್ತಿವೆ. ಆ ಕುರಿತ ವರದಿ ಇಲ್ಲಿದೆ.
ಟೆಲಿಗ್ರಾಮ್ ಯಾಕೆ ಇಷ್ಟೊಂದು ಜನಪ್ರಿಯ?
ಟೆಲಿಗ್ರಾಮ್ ಇಂದು ಜಗತ್ತಿನ ಅತ್ಯಂತ ಬಳಕೆಯಲ್ಲಿರುವ ಮೆಸೇಜಿಂಗ್ ಆ್ಯಪ್‌ಗಳಲ್ಲಿ ಪ್ರಮುಖವಾಗಿದೆ. ಫಾಸ್ಟ್ ಮೇಸೆಜಿಂಗ್, 2 GB ವರೆಗಿನ ಫೈಲ್ಗಳನ್ನು ಸುಲಭವಾಗು ಕಳುಹಿಸುವ ಅವಕಾಶದೊಂದಿಗೆ 2 ಲಕ್ಷ ಜನರನ್ನು ಸೇರಿಸಿ ಗ್ರೂಪ್ ಮಾಡುವ ಸೌಲಭ್ಯಗಳಿರುವುದೇ ಅದಕ್ಕೆ ಕಾರಣ.
ಇದನ್ನೂ ಓದಿ: WhatsApp Call ರೆಕಾರ್ಡ್ ಮಾಡೋದು ಹೇಗೆ? ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಇಲ್ಲಿದೆ ಸ್ಮಾರ್ಟ್ ಟಿಪ್ಸ್
ಸರ್ಕಾರದ ಪ್ರಕಾರ, ಟೆಲಿಗ್ರಾಮ್‌ನ ಕೆಲವು ಗುಂಪುಗಳು ಮತ್ತು ಚಾನೆಲ್‌ಗಳು ಅಕ್ರಮ ಚಟುವಟಿಕೆಗಳಿಗೆ ವೇದಿಕೆಯಾಗಿವೆ. ಅಶ್ಲೀಲ ವಿಷಯ, ಮಕ್ಕಳ ಲೈಂಗಿಕ ದೌರ್ಜನ್ಯ ಸಾಮಗ್ರಿಗಳು, ಪೈರೇಟೆಡ್ ಸಿನಿಮಾಗಳು, ನಕಲಿ ದಾಖಲೆಗಳು, ಎಕ್ಸಾಂ ಪೇಪರ್ ಸೋರಿಕೆ ಮತ್ತು ಸೈಬರ್ ವಂಚನೆಗೆ ಸಂಬಂಧಿಸಿದ ವಿವರಗಳು ಇಲ್ಲಿ ಹರಿದಾಡುತ್ತಿವೆ. ಅಧಿಕಾರಿಗಳು ಇಂತಹ ಗುಂಪುಗಳನ್ನು ಪತ್ತೆ ಹಚ್ಚಿ ಮುಚ್ಚುತ್ತಿದ್ದರೂ, ಹೊಸ ಹೆಸರಿನಲ್ಲಿ ಅವು ಮತ್ತೆ ಹುಟ್ಟಿಕೊಳ್ಳುತ್ತಿರುವುದೇ ದೊಡ್ಡ ಸವಾಲಾಗಿ ಪರಿಣಮಿಸಿದೆ.
ವಿದ್ಯಾರ್ಥಿಗಳು ಮತ್ತು ಯುವಕರೇ ಗುರಿ!
ತ್ವರಿತವಾಗಿ ಹಣ ಗಳಿಸಿ, ಗ್ಯಾರಂಟಿ ಲಾಭ, ಡಬಲ್ ರಿಟರ್ನ್ಸ್, ಸೋರಿಕೆಯಾದ ಪೇಪರ್ ಲಭ್ಯ ಎಂಬ ಆಕರ್ಷಕ ಹೆಸರಿನ ಗುಂಪುಗಳು ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಮತ್ತು ಯುವಕರನ್ನು ಮುಖ್ಯವಾಗಿ ಗುರಿಯಾಗಿಸಿಕೊಂಡಿವೆ. ಇಂತಹ ಬಲೆಗೆ ಬೀಳುವವರು ಹಣ ಕಳೆದುಕೊಳ್ಳುವುದರ ಜೊತೆಗೆ ತಮ್ಮ ವೈಯಕ್ತಿಕ ಮಾಹಿತಿಯನ್ನೂ ಸೈಬರ್ ಅಪರಾಧಿಗಳಿಗೆ ನೀಡುತ್ತಿದ್ದಾರೆ. ಇದರೊಂದಿಗೆ, ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಹಿಂಸಾತ್ಮಕ ಮತ್ತು ಅನುಚಿತ ವಿಷಯಗಳು ಗಂಭೀರ ಪರಿಣಾಮ ಬೀರುತ್ತವೆ ಎಂದು ತಜ್ಞರು ಎಚ್ಚರಿಸಿದ್ದಾರೆ.
ಪರೀಕ್ಷಾ ಪತ್ರಿಕೆ ಸೋರಿಕೆಯಲ್ಲಿ ಟೆಲಿಗ್ರಾಮ್ ಪ್ರಮುಖ ಪಾತ್ರ?
ನೀಟ್ ಸೇರಿದಂತೆ ಹಲವು ಪ್ರಮುಖ ಪರೀಕ್ಷೆಗಳ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಗಳಲ್ಲಿ ಟೆಲಿಗ್ರಾಮ್ ಹೆಸರು ಕೇಳಿಬಂದಿದೆ. ನಕಲಿ ಅಥವಾ ಸೋರಿಕೆಯಾದ ಮಾಹಿತಿಯನ್ನು ಕೆಲವು ಗುಂಪುಗಳು ವ್ಯಾಪಕವಾಗಿ ಹಂಚಿಕೊಂಡಿರುವ ಘಟನೆಗಳು ವರದಿಯಾಗಿವೆ. ಈ ಕಾರಣದಿಂದಾಗಿ ನೀಟ್ ಮರುಪರೀಕ್ಷೆಯ ಸಮಯದಲ್ಲಿ ಆ್ಯಪ್ ಅನ್ನು ಕೇಂದ್ರ ಸರ್ಕಾರ ತಾತ್ಕಾಲಿಕವಾಗಿ ನಿಷೇಧ ಮಾಡಿತ್ತು. ಆದರೆ ಈಗ ಮತ್ತೆ ಆ ಆಪ್ ಲಭ್ಯವಾಗಿದೆ. ಇದರಿಂದ ಆ್ಯಪ್ ಮೇಲೆ ಕಠಿಣ ನಿಗಾ ಅಗತ್ಯ ಎಂಬ ಕೂಗು ಹೆಚ್ಚಾಗಿದೆ.
ಇದನ್ನೂ ಓದಿ: Mobile Phone and Water: ಮೊಬೈಲ್ ಫೋನ್ ಮಳೆಯಲ್ಲಿ ನೆನೆದಿದ್ಯಾ? ವಾಟರ್ ಫ್ರೂಪ್ ಆದ್ರೂ ಈ 5 ಭಾಗಕ್ಕೆ ನೀರು ತಾಗಲೇಬಾರದು!
ದೊಡ್ಡ ಫೈಲ್ ಹಂಚಿಕೆ, ಅನಾಮಧೇಯವಾಗಿ ಕಾರ್ಯನಿರ್ವಹಿಸುವ ಅವಕಾಶ ಮತ್ತು ಹೆಚ್ಚಿನ ಸದಸ್ಯರನ್ನು ಸೇರಿಸುವ ಸೌಲಭ್ಯವನ್ನು ಕೆಲವರು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸಂದೇಶಗಳನ್ನು ಎಡಿಟ್ ಮಾಡುವ ಸೌಲಭ್ಯವನ್ನು ಬಳಸಿಕೊಂಡು ನಕಲಿ ಮಾಹಿತಿಯನ್ನು ನಿಜವೆಂದು ಬಿಂಬಿಸುವ ಪ್ರಯತ್ನಗಳೂ ನಡೆಯುತ್ತಿವೆ. ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡುವುದು, ನಕಲಿ ಹೂಡಿಕೆ ಯೋಜನೆಗಳಿಗೆ ಸೇರಿಸುವುದು ಮತ್ತು ಅನುಮಾನಾಸ್ಪದ ಫೈಲ್ ಡೌನ್‌ಲೋಡ್ ಮಾಡುವುದರಿಂದ ಬ್ಯಾಂಕಿಂಗ್ ವಿವರಗಳು, ಫೋಟೋಗಳು ಸೋರಿಕೆಯಾಗುವ ಅಪಾಯವಿದೆ.
ಹಾಗಾಗಿಯೇ, ತಜ್ಞಾರು, ಟೆಲಿಗ್ರಾಮ್‌ನಲ್ಲಿರುವ ಎಲ್ಲ ಗುಂಪುಗಳು ಕಾನೂನುಬಾಹಿರವಲ್ಲ. ಲಕ್ಷಾಂತರ ಸಂಸ್ಥೆಗಳು ಮತ್ತು ಬಳಕೆದಾರರು ಇದನ್ನು ಉತ್ತಮ ಉದ್ದೇಶಗಳಿಗೆ ಬಳಸುತ್ತಿದ್ದಾರೆ. ಆದರೆ ಅಪರಿಚಿತ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ, ಅನುಮಾನಾಸ್ಪದ ಗುಂಪುಗಳಿಗೆ ಸೇರಬೇಡಿ, ವೈಯಕ್ತಿಕ ಮತ್ತು ಬ್ಯಾಂಕಿಂಗ್ ಮಾಹಿತಿಯನ್ನು ಹಂಚಿಕೊಳ್ಳಬೇಡಿ ಎಂದು ಸೈಬರ್ ತಜ್ಞರು ಸಲಹೆ ನೀಡುತ್ತಾರೆ. ಅದರಂತೆ, ಪೋಷಕರು ಮಕ್ಕಳ ಡಿಜಿಟಲ್ ಚಟುವಟಿಕೆಗಳ ಮೇಲೆ ನಿಗಾ ಇಡುವುದು ಅಗತ್ಯ. ಟೆಲಿಗ್ರಾಮ್ ಪ್ರಬಲ ಸಂವಹನ ಸಾಧನವಾದರೂ, ಎಚ್ಚರಿಕೆಯಿಂದ ಬಳಸಿದರೆ ಮಾತ್ರ ಡಿಜಿಟಲ್ ಅಪಾಯಗಳಿಂದ ಪಾರಾಗಬಹುದು.


