HEALTH TIPS

ಜಿಲ್ಲಾ ಕೈಮಗ್ಗ ಓಣಂ ಮೇಳದಿಂದ 40 ಸಾವಿರಕ್ಕೂ ಹೆಚ್ಚು ಮೌಲ್ಯದ ಕೈಮಗ್ಗ ಬಟ್ಟೆಗಳ ಕಳವು-ದೂರು

ಕಾಸರಗೋಡು: ನಿಲೇಶ್ವರ ಬಸ್ ನಿಲ್ದಾಣದ ಸನಿಹ ಆಯೋಜಿಸಲಾಗಿರುವ ಜಿಲ್ಲಾ ಕೈಮಗ್ಗ ಓಣಂ ಮೇಳದಲ್ಲಿ 40ಸಾವಿರಕ್ಕೂ ಹೆಚ್ಚು ಮೌಲ್ಯದ ಕೈಮಗ್ಗ ವಸ್ತ್ರಗಳನ್ನು ಕಳವು ಗೈದಿರುವ ಬಗ್ಗೆ ನಿಲೇಶ್ವರಂ ಪೆÇಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಸೋಮವಾರ ಬೆಳಗ್ಗೆ ಈ ಕಳವು ನಡೆದಿದ್ದು, ಸಿಸಿ ಟಿವಿ ದೃಶ್ಯಾವಳಿಯಲ್ಲಿ ಕಳವು ಕೃತ್ಯ ಸೆರೆಯಾಗಿದೆ. ಕಾಸರಗೋಡು ನೇಕಾರರ ಸಹಕಾರ ಸಂಘದ ಸೀರೆಗಳ ಕೌಂಟರ್‍ನಿಂದ 31,000 ರೂ. ಮೌಲ್ಯದ ಸೀರೆ ಒಳಗೊಂಡಂತೆ ಒಟ್ಟು 44ಸಾವಿರ ರೂ. ಮೌಲ್ಯದ ಬಟ್ಟೆ ಕಳವಾಗಿದೆ. 

ತ್ರಿಕ್ಕರಿಪುರ ನೇಕಾರರ ಸಂಘಕ್ಕೆ ಸೇರಿದ ಮಳಿಗೆ ಸೇರಿದಂತೆ ವಿವಿಧ ಮಳಿಗೆಗಳಿಂದ ಈ ಕಳವು ನಡೆದಿದೆ. ಕಳವುಕೃತ್ಯದಲ್ಲಿ ಮೂವರು ವ್ಯಕ್ತಿಗಳು ಶಾಮೀಲಾಗಿದ್ದು, ಒಬ್ಬಾತ ಹೊರಗೆ  ಒಬ್ಬರು ಕಾವಲು ಕಾಯುತ್ತಿದ್ದರೆ, ಉಳಿದಿಬ್ಬರು ಕಳವು ನಡೆಸಿದ್ದಾರೆ. ಓಣಂ ಮೇಳ ಸಂಯೋಜಕರು ನೀಡಿದ ದೂರಿನ ಮೇರೆಗೆ ಪೊಲೀಸರು ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.




ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries