ಬೀಜಿಂಗ್: ಚೀನಾದ ಸಿಚುವಾನ್ ನಲ್ಲಿ ಶುಕ್ರವಾರ 5.1 ತೀವ್ರತೆಯ ಭೂಕಂಪನ ಸಂಭವಿಸಿದೆ. ಇದರಿಂದಾಗಿ, ನೇಪಾಳದಲ್ಲಿ ಮತ್ತೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ ಎಂದು ವರದಿಯಾಗಿದೆ.
ಮೇಲಿನಿಂದ ಬೀಳುವ ಬೃಹತ್ ಪ್ರಮಾಣದ ನೀರಿನಿಂದಾಗಿ ನದಿ ನೀರಿನ ಮಟ್ಟ ಏರಿಕೆಯಾಗುವ ಅಪಾಯವಿರುವುದರಿಂದ, ನೇಪಾಳದ ತ್ರಿಶೂಲಿ ಪ್ರದೇಶವನ್ನು ಮತ್ತೆ ತೆರವುಗೊಳಿಸಲಾಗಿದೆ ಎಂದು ನೇಪಾಳ ಪೊಲೀಸರು ತಿಳಿಸಿದ್ದಾರೆ.
ಚೀನಾ ಅರ್ತ್ ಕ್ವೇಕ್ ನೆಟ್ ವರ್ಕ್ಸ್ ಸೆಂಟರ್ ಪ್ರಕಾರ, ನೈರುತ್ಯ ಚೀನಾದ ಸಿಚುವಾನ್ ಪ್ರಾಂತ್ಯದ ಲಾಂಗ್ ಚಾಂಗ್ ನಗರದಲ್ಲಿ ಈ ಭೂಕಂಪನ ಸಂಭವಿಸಿದೆ ಎಂದು ಹೇಳಲಾಗಿದೆ.
ಈ ನಡುವೆ, ಟಿಬೆಟ್ ಬದಿಯ ಅಣೆಕಟ್ಟು ಮತ್ತೆ ಒಡೆದಿದೆ ಎಂದು ನೇಪಾಳ ಪೊಲೀಸರು ಹೊಸದಾಗಿ ಮುನ್ನೆಚ್ಚರಿಕೆ ನೀಡಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ನೇಪಾಳ ಪೊಲೀಸರು, ಪರಿಹಾರ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿಕೊಂಡಿರುವ ಭದ್ರತಾ ಸಿಬ್ಬಂದಿಗಳು, ರಕ್ಷಣಾ ಕಾರ್ಯಕರ್ತರು ಎಚ್ಚರಿಕೆಯಿಂದಿರಬೇಕು ಹಾಗೂ ತಕ್ಷಣವೇ ಸುರಕ್ಷಿತ ಸ್ಥಳಗಳಿಗೆ ತೆರಳಬೇಕು. ಇತರರಿಗೂ ಈ ಮಾಹಿತಿ ನೀಡಬೇಕು ಎಂದು ಮನವಿ ಮಾಡಿದ್ದಾರೆ.

