HEALTH TIPS

ಉತ್ತರ ಕೊರಿಯಾದ ಬಳಿ 57 ಶಕ್ತಿಶಾಲಿ ಅಣ್ವಸ್ತ್ರಗಳಿವೆ: ಡೊನಾಲ್ಡ್‌ ಟ್ರಂಪ್‌

ವಾಷಿಂಗ್ಟನ್: ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್ ಅವರನ್ನು ಭೇಟಿಯಾಗಲು ಯೋಜಿಸುತ್ತಿರುವುದಾಗಿ ತಿಳಿಸಿರುವ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌, ಆ ದೇಶವು 57 ಅತ್ಯಂತ ಶಕ್ತಿಶಾಲಿ ಅಣ್ವಸ್ತ್ರಗಳನ್ನು ಹೊಂದಿದೆ ಎಂದು ಹೇಳಿದ್ದಾರೆ. 


ದಕ್ಷಿಣ ಕೊರಿಯಾ ಸೇನೆಯೊಂದಿಗೆ ನಡೆಸಲಾಗುತ್ತಿದ್ದ ಜಂಟಿ ಸಮರಾಭ್ಯಾಸಗಳನ್ನು ಮೊಟಕುಗೊಳಿಸುವಂತೆ ಟ್ರಂಪ್ ಪೆಂಟಗನ್ ಅಧಿಕಾರಿಗಳಿಗೆ ಆದೇಶಿಸಿದ ಬೆನ್ನಲ್ಲೇ ಈ ಹೇಳಿಕೆಗಳು ಹೊರಬಂದಿವೆ.

ಸಾಮಾಜಿಕ ಮಾಧ್ಯಮ ಟ್ರುತ್ ಸೋಶಿಯಲ್‌ ಪೋಸ್ಟ್‌ನಲ್ಲಿ ಈ ಬಗ್ಗೆ ಬರೆದುಕೊಂಡಿರುವ ಟ್ರಂಪ್, 'ಜಂಟಿ ಸಮರಾಭ್ಯಾಸವು ತಪ್ಪು ಸಂದೇಶ ರವಾನಿಸುವ ಅಪಾಯವಿದೆ. ನನ್ನ ಆಡಳಿತದಲ್ಲಿ ಆ ದೇಶವು(ಉತ್ತರ ಕೊರಿಯಾ) ಯಾವುದೇ ಬೆದರಿಕೆ ಒಡ್ಡದೆ ಗೌರವಯುತವಾಗಿ ನಡೆದುಕೊಂಡಿದೆ' ಎಂದು ಹೇಳಿದ್ದಾರೆ.

ಇದಕ್ಕೂ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ್ದ ಟ್ರಂಪ್‌, 'ಉತ್ತರ ಕೊರಿಯಾ ನಾಯಕ ಕಿಮ್ ಜೊಂಗ್ ಉನ್ ಬಗ್ಗೆ ನನಗೆ ಚೆನ್ನಾಗಿ ಗೊತ್ತು. ನಮ್ಮಲ್ಲಿ ಒಬ್ಬ ಬುದ್ಧಿವಂತ ಅಧ್ಯಕ್ಷರಿರುವವರೆಗೂ ಅವರಿಂದ ಯಾವುದೇ ಅಪಾಯವಿಲ್ಲ' ಎಂದು ಹೇಳಿದ್ದರು.

'ನಾನು ಅವರೊಂದಿಗೆ ಉತ್ತಮ ಸಂಬಂಧ ಹೊಂದಿರುವುದು ಒಳ್ಳೆಯ ವಿಷಯವೇ ಹೊರತು ಕೆಟ್ಟದ್ದಲ್ಲ. ಅವರ ಬಳಿ 50ಕ್ಕೂ ಹೆಚ್ಚು ಶಕ್ತಿಶಾಲಿ ಅಣ್ವಸ್ತ್ರಗಳಿವೆ. ಅಣುಬಾಂಬ್‌ ಅಂತಹ ಅಪಾಯಕಾರಿ ಶಸ್ತ್ರಾಸ್ತ್ರ ಹೊಂದಲು ಅವರಿಗೆ ಅವಕಾಶ ನೀಡಬಾರದಾಗಿತ್ತು. ನಾನೇನಾದರೂ ಅಧ್ಯಕ್ಷನಾಗಿದ್ದರೆ ಅದಕ್ಕೆ ಅವಕಾಶ ನೀಡುತ್ತಿರಲಿಲ್ಲ. ಆದರೆ ಈಗ ಕಾಲ ಮಿಂಚಿದೆ' ಎಂದಿದ್ದರು.

ಈ ಹಿಂದೆ ಟ್ರಂಪ್‌ ಅವರನ್ನು 'ಮಾನಸಿಕವಾಗಿ ಅಸ್ವಸ್ಥಗೊಂಡಿರುವ ಮುದುಕ' ಎಂದು ಕಿಮ್ ಜೊಂಗ್ ಉನ್ ಕರೆದಿದ್ದರು. ಅಲ್ಲದೇ ಯಾವುದೇ ಕ್ಷಣದಲ್ಲಿ ಅಣುಬಾಂಬ್‌ ಸ್ಫೋಟಿಸಲು ನಾವು ಸಿದ್ಧ ಎಂದು ಬೆದರಿಕೆ ಹಾಕಿದ್ದರು.

2018 ಮತ್ತು 2019 ರ ಮುಖಾಮುಖಿ ಸಭೆಗಳ ನಂತರ ಉಭಯ ನಾಯಕರ ನಡುವಿನ ವೈಷಮ್ಯ ಮುರಿದಿತ್ತು.






ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries