ನವದೆಹಲಿ: ಮೀಸಲಾತಿ ವಿರೋಧಿ ಪ್ರತಿಭಟನಕಾರರ ಬೇಡಿಕೆಗಳ ಕುರಿತು ಚರ್ಚಿಸಲು ಕೇಂದ್ರ ಸರ್ಕಾರ ಸಮ್ಮತಿಸಿದೆ ಎಂದು 'ಮೀಸಲಾತಿ ರದ್ದುಗೊಳಿಸಿ ಆಂದೋಲನ'ವು ಶನಿವಾರ ತಿಳಿಸಿದೆ.
ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ವೇದಿಕೆಯಲ್ಲಿ ಅಭಿಯಾನ ಆರಂಭವಾಗಿದ್ದು, ಈ ಪುಟವು 56 ಲಕ್ಷ ಅನುಯಾಯಿಗಳನ್ನು ಹೊಂದಿದೆ.
ಜಾತಿ ಆಧಾರಿತ ಮೀಸಲಾತಿಗೆ ಬದಲಾಗಿ ಆರ್ಥಿಕ ಮಾನದಂಡಗಳನ್ನು ಆಧರಿಸಿದ ಮೀಸಲಾತಿ ಪದ್ಧತಿ ಆರಂಭಿಸಬೇಕು ಎಂದು ಒತ್ತಾಯಿಸಿ ಬೆಂಬಲಿಗರು ದೆಹಲಿಯ ಜಂತರ್ ಮಂತರ್ನಲ್ಲಿ ಶುಕ್ರವಾರ ಪ್ರತಿಭಟನೆಯನ್ನೂ ನಡೆಸಿದರು. ಕೆಲವರನ್ನು ಪೊಲೀಸರು ವಶಕ್ಕೆ ಪಡೆದರು.
'ಮೀಸಲಾತಿ ಸುಧಾರಣೆ ಬೇಡಿಕೆ ಕುರಿತು ಚರ್ಚಿಸಲು ಕೇಂದ್ರ ಸಚಿವರೇ ಪ್ರತಿಭಟನಕಾರರನ್ನು ಖುದ್ದು ಭೇಟಿಯಾಗಲಿದ್ದಾರೆ ಎಂದು ಹರ್ಷ ಭಾಯ್ ತಿಳಿಸಿದ್ದಾರೆ' ಎಂದು 'ಎಕ್ಸ್' ಖಾತೆಯಲ್ಲಿನ ಪೋಸ್ಟ್ನಲ್ಲಿ ತಿಳಿಸಲಾಗಿದೆ. 'ಅಭಿಯಾನ ಇನ್ನೂ ಮುಗಿದಿಲ್ಲ' ಎಂದೂ ಬರೆಯಲಾಗಿದೆ.

