HEALTH TIPS

ಪಕ್ಷದ ಹುದ್ದೆಗಳಿಗೆ ವಯೋಮಿತಿ ನಿಗದಿಪಡಿಸಿದ ಡಿಎಂಕೆ

 ಚೆನ್ನೈ: ಯುವಜನರು ಮತ್ತು ಹೊಸ ಮುಖಗಳಿಗೆ ಅವಕಾಶ ನೀಡಿ ಪಕ್ಷವನ್ನು ತಳಮಟ್ಟದಿಂದ ಸದೃಢಗೊಳಿಸುವ ಉದ್ದೇಶದಿಂದ ವ್ಯಾಪಕ ಬದಲಾವಣೆ ತರಲು ಡಿಎಂಕೆ ನಿರ್ಧರಿಸಿದೆ. 


ಗ್ರಾಮ ಮಟ್ಟದಿಂದ ಹಿಡಿದು ಜಿಲ್ಲಾ ಮಟ್ಟದವರೆಗೆ ಪಕ್ಷದ ವಿವಿಧ ಹುದ್ದೆಗಳನ್ನು ಹೊಂದಲು ಅಧಿಕಾರಾವಧಿ ಮತ್ತು ವಯೋಮಿತಿಯನ್ನು ನಿಗದಿಪಡಿಸಿದೆ.

ಶಾಖಾ ಕಾರ್ಯದರ್ಶಿಗಳ ವಯೋಮಿತಿಯನ್ನು 45 ವರ್ಷಕ್ಕೆ, ತಾಲ್ಲೂಕು ಕಾರ್ಯದರ್ಶಿಗಳಿಗೆ 50 ವರ್ಷ, ಪಟ್ಟಣ ಮಟ್ಟದ ಕಾರ್ಯದರ್ಶಿಗಳಿಗೆ 60 ವರ್ಷ ನಿಗದಿಪಡಿಸಿದ್ದು, ಗರಿಷ್ಠ ಎರಡು ಅವಧಿಗೆ (ಗರಿಷ್ಠ 10 ವರ್ಷ) ಆಯ್ಕೆ ಆಗಬಹುದು. ಜಿಲ್ಲಾ ಕಾರ್ಯದರ್ಶಿಗಳಿಗೆ 70 ವರ್ಷದ ಮಿತಿ ನಿಗದಿಸಲಾಗಿದ್ದು, ಮೂರು ಅವಧಿಗೆ ಆಯ್ಕೆ ಆಗಬಹುದು. ಇದರಿಂದಾಗಿ ಕನಿಷ್ಠ 13 ಜಿಲ್ಲಾ ಕಾರ್ಯದರ್ಶಿಗಳು ಹುದ್ದೆಗಳನ್ನು ಬಿಟ್ಟುಕೊಡಬೇಕಾದ ಅನಿವಾರ್ಯ ಎದುರಾಗಲಿದೆ ಎನ್ನಲಾಗಿದೆ.

ವಿಧಾನಸಭೆ ಚುನಾವಣೆಯಲ್ಲಿ ಎದುರಾದ ಅನಿರೀಕ್ಷಿತ ಹಾಗೂ ಆಘಾತಕಾರಿ ಸೋಲಿಗೆ ಕಾರಣಗಳನ್ನು ತಿಳಿಯಲು ರಾಜ್ಯದಾದ್ಯಂತ ಪ್ರವಾಸ ಕೈಗೊಂಡ 38 ಸದಸ್ಯರ ತಂಡದ ಶಿಫಾರಸುಗಳಿಗೆ ಅನುಗುಣವಾಗಿ ಪಕ್ಷವು ಈ ಘೋಷಣೆ ಮಾಡಿದೆ.

'70 ವರ್ಷ ಮೀರಿದ ನಾಯಕರು ಜಿಲ್ಲಾ ಘಟಕಗಳನ್ನು ಮುನ್ನಡೆಸಲು ಯುವ ಕಾರ್ಯಕರ್ತರಿಗೆ ಅವಕಾಶ ಮಾಡಿಕೊಡಬೇಕು. ಯುವಜನರು ಮತ್ತು ಮಹಿಳಾ ಮತದಾರರ ವಿಶ್ವಾಸವನ್ನು ಮರಳಿ ಗಳಿಸಲು ಕಠಿಣವಾಗಿ ಶ್ರಮವಹಿಸಬೇಕು' ಎಂದು ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಅಧ್ಯಕ್ಷ ಎಂ.ಕೆ. ಸ್ಟಾಲಿನ್ ಅವರು ಕರೆ ನೀಡಿದ್ದಾರೆ.







ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries